ಹೊರಡುವ ಹೊತ್ತಿಗೆ !!

ಹೊರಟಾಗಲೆಲ್ಲಾಹೊರಲಾರದಷ್ಟು ಆಗು ಹೋಗುಗಳು.. ಎಲ್ಲವನ್ನೂ ಹೊತ್ತು‌ ಹೊರಡುವ ಹೊತ್ತಿಗೆ,ಹತ್ತಬೇಕಿದ್ದ ಬಂಡಿಹಳಿಯಿಂದ ಹೊರಟಿರುವ ಹಾಗೆ !! — Deekshith Das

ಕವಿಯ ಬರಹ !!

ಮನದಾಳದಲ್ಲಿ ಅಡಗಿಸಿ,ಜೀವಂತ ಇರಿಸಿದ್ದ ಭಾವನೆಗಳುಹೊರಬಂದಿದ್ದು.. ಗೀಚಿದ ಬರಹಗಳಿಂದ !! ಎಂದೂ ಮರೆಯಾಗದ ಹಾಗೆಭಾವನೆಗಳು ಬದುಕುಳಿದಿದ್ದು..ಸೃಷ್ಟಿಸಿದ್ದ ಕವಿತೆಗಳಿಂದ !! ಕವಿತೆಗಳ ಸೃಷ್ಟಿಕರ್ತ ಮಡಿದಮೇಲೂಭಾವನೆಗಳು‌ ಜೀವಂತವಾಗಿರುವುದು..ಕವಿಯ ಬರಹದಿಂದ !! — Deekshith Das ✍️

ಬದಲಾವಣೆ !!

ಎಲ್ಲವೂ ಹಾಗೆಯೇ ಇರುತ್ತದೆ.. ಭೇಟಿಯಾದ ಸಮಯ..ನಡೆದ ಹಾದಿನೋಡಿದ ಜಾಗಸಿಕ್ಕ ಜನರುಕಾಲೆಳೆದವರುಅಭಿನಂದಿಸಿದವರು.. ಎಲ್ಲದೂ ಹಾಗೆಯೇ ಇರುವುದು.. ಬದಲಾಗುತ್ತದೆ.. ಎಂದುಕೊಡಿದ್ದೆಲ್ಲಾ ಹಾಗೆಯೇ ಇರುವಾಗ,“ಜೊತೆಯಾಗಿ ಬಂದವರೇ ಬದಲಾಗಿದ್ದಾರೆ”ಎನ್ನುವುದು ತಿಳಿಯದೇ ಹೋಗುತ್ತೇವೆ !! — ದೀಕ್ಷಿತ್ ದಾಸ್

ಕರ್ಮದ ಉರುಳು..

ಚರ್ಚೆಗಳು ಅತಿಯಾಯಿತುವಾದಗಳು ನಿಲ್ಲಲಿಲ್ಲ..ಮಾತಿನ ಜಗಳದ ನಡುವೆಕೈ ಕೈ ಸೇರಿ ಹೊಡೆದಾಟವೂ ನಡೆಯಿತು.. ಅಲ್ಲೊಂದು ಜೀವ ನಿರ್ಜೀವ ವಾಯಿತು ‌‌!!ತಪ್ಪು ಸರಿಗಳ ಹೋರಾಟದಲ್ಲಿಅಮಾಯಕನೇ ಬಲಿಯಾದನು.. ಸುಳ್ಳು ಬದುಕುಳಿದರೂಸತ್ಯ ಅಮರವಾಯಿತು.. ಕೊಂದವನು ಗೆದ್ದಂತೆ ನಕ್ಕಾಗ,ಅಲ್ಲಿ ಉಗಮವಾಗಿದ್ದು“ಕರ್ಮ !!”ಕರ್ಮದ ಉರುಲು, ಕಾದುಕುಳಿತಿದೆ ಕೆಟ್ಟವನ ಸಾವಿಗೆ.. — ದೀಕ್ಷಿತ್ ದಾಸ್

ಪ್ರೀತಿಯ ಹಬ್ಬ ದೀಪಾವಳಿ ಹಬ್ಬ..

ದೀಪಾವಳಿ‌ಯ ಹಬ್ಬಸಡಗರ ಸಂಭ್ರಮದ ಜೊತೆಹೊಸ‌‌ ಬದುಕಿಗೆ ಬೆಳಕಿನ ಹಣತೆಯಬೆಳಗುವುದರ ಜೊತೆಗೆಮತ್ತೆ‌ ಹೊಸ ಜೀವನದ ಹೊಸ ದಾರಿಯಪರಿಚಯಿಸುವ ಪರಿಪೂರ್ಣವಾದಪ್ರೀತಿಯ ಹಬ್ಬ ದೀಪಾವಳಿ ಹಬ್ಬ.. ದೀಪಾವಳಿ ಬಂತೆಂದರೆ ಅದೇನೋಬದಲಾವಣೆ ಅದೇನೋ‌ ಹೊಸಆಲೋಚನೆ ‌ಅದೇನೋ‌‌ ಖುಷಿಅದೆಲ್ಲನ್ನೂ ಈ ಹಬ್ಬ ಮನೆ‌ ಮನಗಳಿಗೆಪರಿಚಯಿಸಿ ಪ್ರೀತಿ ಕೊಡುವಪ್ರೀತಿಯ ಹಬ್ಬ ದೀಪಾವಳಿ ಹಬ್ಬ.. ಬದುಕು ಬದಲಾದರೂಬದುಕಿನ ಹಾದಿಯಲ್ಲಿ ಸಿಕ್ಕ ಜನರುಅದಲುಬದಲು ಆದರೂಈ‌ ಹಬ್ಬ ಬಂತೆಂದರೆ ಸಾಕುಇರುವ ಪುಟ್ಟ ಸಂಸಾರದ ಜೊತೆಗೆಇರುವ ಸುತ್ತಲಿನ ಜನರ ಜೊತೆಗೆಇರುವ ಸ್ನೇಹಿತರ ಜೊತೆಗೆಇರುವ ಸಂಬಂಧಗಳ‌ ಜೊತೆಗೆಜೊತೆಯಾಗಿ ಆಚರಿಸಿ ನೆಮ್ಮದಿಯಕ್ಷಣಗಳನು ಆನಂದಿಸುವ ಪ್ರೀತಿಯಹಬ್ಬContinue reading “ಪ್ರೀತಿಯ ಹಬ್ಬ ದೀಪಾವಳಿ ಹಬ್ಬ..”