ಹೀಗೊಂದು ಅನುರಾಗ !! (ಭಾಗ – 5)

ದಟ್ಟವಾದ ಕಾಡು. ಕತ್ತಲು ಹಬ್ಬಿದಷ್ಟೇ ವೇಗವಾಗಿ ಕತ್ತಲು ಕರಗಿ ಬೆಳಕು ಮೂಡುವಾಗ ಇದೇನೋ‌ ಕಾಣದ ಶಕ್ತಿಯ ಕೈಚಳಕ !! ಎಂಬಂತೆ ಭಯಾನಕ ಹಾಗೂ ವಿಚಿತ್ರವಾದ ಈ ಸನ್ನಿವೇಶದಲ್ಲಿ ಬಂಧಿಯಾದ ಎಲ್ಲರಿಗೂ ಬದುಕುಳಿಯಲು ಉಳಿದ ಹಾದಿ ತಿಳಿಯದೇ ಕಂಗೆಟ್ಟರು. ನಾವೇಕೆ ಇಲ್ಲಿದ್ದೇವೆ ಇವರು ಹೇಗೆ ಇಲ್ಲಿ ಎಂದು ಒಬ್ಬರನೊಬ್ಬರು ಕೇಳಿಕೊಳ್ಳುವ ಹಾಗೆ ನೂರಾರು ಪ್ರಶ್ನೆಗಳ ಸಾಲು ಸಾಲು ಸುಳಿಯಲ್ಲಿ ಸಿಲುಕಿ ಸೊರಗಿದರು.(ಒಂದೇ ಬೈಕಿನಲ್ಲಿರುವ ಹುಡುಗಿ ಮತ್ತು ಹುಡುಗ, ಇಲ್ಲಿನ ಪ್ರಮುಖ ಪಾತ್ರ ವಹಿಸುವ ಸ್ನೇಹ ಹಾಗೂ ಸಂಜಯ್. ಉಳಿದContinue reading “ಹೀಗೊಂದು ಅನುರಾಗ !! (ಭಾಗ – 5)”

ಹೀಗೊಂದು ಅನುರಾಗ !! (ಭಾಗ – 4)

ಬಿಸಿಲಿನ‌ ಆಚೆಗೆ ಸಂಜೆಯ ಸಮೀಪದಲ್ಲಿ ನಾಲ್ಕೂ ಜನ ಸ್ನೇಹಿತರು ಕಳೆದುಹೋದ ಸ್ನೇಹಿತನಿಂದಾಗಿ, ಉಂಗುರದ ಸುತ್ತಲೂ ಸುನಾಮಿಯಂತೆ ವೇಗವಾಗಿ ಕೈಮೀರಿ ಹೋಗುತ್ತಿರುವ ಪ್ರಸ್ತುತ ವಿಷಯಗಳೆಲ್ಲವೂ ವಿಷವೆಂಬಂತೆ ಭಾಸವಾಗುತ್ತಿರುವಾಗ.. ತಲೆ ಮೇಲೆ ಕೈ ಹೊತ್ತು ಕುಳಿತರೆ ಸಮಯ ಸರಿಯಿವುದೇ ವಿನಃ ಸಂಗತಿ ಬದಲಾಗುವುದಿಲ್ಲ ಎಂದು ಎಲ್ಲರೂ ಆಸ್ಪತ್ರೆಯಿಂದ ಜೀವವಿಲ್ಲದ ಕಳ್ಳ ನನ್ನು ಕೊನೆಯ ಭಾರಿ ನೋಡಿ ಹೊರಬಂದು ದಿಕ್ಕುತೋಚದೆ ಬೈಕ್ ಏರಿ ಸೇರದ ಜಾಗವೇ ತಿಳಿಯದಾಗಿ ಸುಮ್ಮನೇ ಹೊರಟರು. ಹಾಸ್ಟೆಲ್ ಸಮೀಪ‌ ಹೋಗುತ್ತಿದಂತೆಯೇ ಇವರ ಕಣ್ಣಿಗೆ ಬಿದ್ದಿದ್ದು ಸ್ನೇಹಿತನ ಬೈಕ್.Continue reading “ಹೀಗೊಂದು ಅನುರಾಗ !! (ಭಾಗ – 4)”

ಹೀಗೊಂದು ಅನುರಾಗ !! (ಭಾಗ – 3)

ಸ್ವಲ್ಪ ಹೊತ್ತಿನ ನಂತರ ಅವನು ಕಣ್ಣು ಬಿಟ್ಟು ನೋಡಿದರೆ, ಆಸ್ಪತ್ರೆಯಲ್ಲಿ ಇರುವುದು ತಿಳಿಯಿತು‌. ಮರುಕ್ಷಣವೇ ಎಲ್ಲವೂ ನೆನಪಾಗಿ ಹೊರಬಂದು ಅಲ್ಲಿದ್ದ ಸ್ನೇಹಿತರಿಗೆ ಧನ್ಯವಾದ ಹೇಳಿ ತಲೆಯಲ್ಲಿದ್ದ ಬ್ಯಾಂಡೇಜ್ ಜೊತೆಗೇ ಆಚೆ ಬಂದು ಬೈಕ್ ಏರಿ ಜಾತ್ರೆಯ ಕಡೆಗೆ ಹೊರಟನು‌‌. ಅದಾಗಲೇ ಜಾತ್ರೆ ಮುಗಿಯುವ ವೇಳೆಗೆ ಬಂದಿತ್ತು. ಆದೆಷ್ಟೇ ಹುಡುಕಿ ನೋಡಿದರೂ ಅವಳು ಕಾಣಲಿಲ್ಲ‌. ಬಸ್ ನಿಲ್ದಾಣದಲ್ಲಿಯೂ ಸಿಗಲಿಲ್ಲ‌, ಹೊರಟ ಬಸ್ ಅಲ್ಲಿಯೂ ಇರಲಿಲ್ಲ. ಅಷ್ಟರಲ್ಲಿ‌ ಅವನ ಸ್ನೇಹಿತರು ಕಾಲ್ ಮಾಡಿ ಈ ಕೂಡಲೇ ಆಸ್ಪತ್ರೆಯ ಹಾದಿಯಲ್ಲಿ ಬರಲುContinue reading “ಹೀಗೊಂದು ಅನುರಾಗ !! (ಭಾಗ – 3)”

ಹೀಗೊಂದು ಅನುರಾಗ !!(ಭಾಗ – 2)

…ಹಿಂದಿರುಗಿ ನೋಡದೆ ಅಲ್ಲಿಂದ ಹೊರಟ ಅವಳನ್ನು ನೋಡುವ ಕುತೂಹಲದಿಂದ ಅವನು ಒಮ್ಮೆಲೆ ಮೇಲೆದ್ದು ಅವಳ ಹಿಂದೆಯೇ ತನ್ನ ಹೆಜ್ಜೆಗಳ ಸದ್ದು ಲೈಬ್ರರಿ ತುಂಬೆಲ್ಲಾ ಪ್ರತಿಧ್ವನಿಸುವಷ್ಟು ವೇಗವಾಗಿ ನಡೆಯುತ್ತಾ ಆಚೆ ಬಂದು ನೋಡಿದರೆ, ಅವಳ ಸುಳಿವೇ ಇರಲಿಲ್ಲ ಅಲ್ಲಿ. ಅದೇ ಕತ್ತಲೆಯಲ್ಲಿ ಬೆಳಗುತ್ತಿದ್ದ ಲೈಟ್ ಬಲ್ಬ್ ಗಳ ಬೆಳಕು ಕಾಣಿಸುತ್ತಿತ್ತೇ ವಿನಃ ಅವಳು ಕಾಣಲಿಲ್ಲ. ಹೊರಗಡೆ ಬಂದು ಕಾಲೇಜಿನ ನಾಲ್ಕೂ ದಿಕ್ಕಿನಲ್ಲಿ ಅದೆಷ್ಟು ಅಲೆದರೂ ಅವನಿಗೆ ಆ ಪುಸ್ತಕದ ಒಡತಿ ಸಿಗಲಿಲ್ಲ. ಸಪ್ಪೆ ಮನಸ್ಸಿನಿಂದ ಹಾಸ್ಟೆಲ್ ಕಡೆ ಬಂದುContinue reading “ಹೀಗೊಂದು ಅನುರಾಗ !!(ಭಾಗ – 2)”

ಹೀಗೊಂದು ಅನುರಾಗ !! (ಭಾಗ – 1)

Part – 1 ಆವನು ಆಕೆಗಾಗಿ ಲೈಬ್ರರಿಯಲ್ಲಿ ಕಾಯುತ್ತಾ ಕುಳಿತಿದ್ದನು. ಪುಟಗಳು ತಿರುಗುತ್ತಿದ್ದವು. ಇದೇ ವೇಳೆಗೆ ಅವನ ಕಾಯುವಿಕೆಯ ಕಾರಣದ ಹಿಂದಿರುವ ಸಿಹಿ ಗಳಿಗೆಯ ನೆನೆದು ಮುಗುಳು ನಗುತ್ತಾ, ಸುತ್ತಲೂ ನೋಡಿ ಆಕೆ ಬಂದಿರಬಹುದಾ ಎಂದು ತನ್ನನ್ನು ತಾನೇ ಕೇಳಿಕೊಂಡನು. ವಾರಗಳ ಹಿಂದೆ ಅವನು ದಿನಪತ್ರಿಕೆ ಓದಲು ಕಾಲೇಜಿನ ಲೈಬ್ರರಿಯಲ್ಲಿನ ಟೇಬಲ್ ಮೇಲೆ ಕುಳಿತಾಗ ಅಲ್ಲೇ ಪಕ್ಕದಲ್ಲಿದ ಒಂದು ನೋಟ್ ಬುಕ್ ನೋಡಿ, ಏನಿರಬಹುದು ಎಂದು ಅದನ್ನು ತೆರೆದು ನೋಡಿದಾಗ ಅದರಲ್ಲಿನ ಮುದ್ದಾದ ಕನ್ನಡ ಅಕ್ಷರಗಳಿಗೆ ಮನಸೋತು,Continue reading “ಹೀಗೊಂದು ಅನುರಾಗ !! (ಭಾಗ – 1)”