ಹೀಗೊಂದು ಅನುರಾಗ !!(ಭಾಗ – 7)

ಎಲ್ಲಾ ಪ್ರಶ್ನೆಗಳು ಎಲ್ಲರಲ್ಲಿಯೂ ಬೂದಿ ಮುಚ್ಚಿದ ಕೆಂಡದಂತೆ ಉಳಿದು ಹೋಗಿದೆ. ರಾತ್ರಿ ಚಂದ್ರನ ನಂತರ, ಸೂರ್ಯನ ಬೆಳಕು.. ಆ ಬೆಳಕು ಕಳೆದು ಸಂಜೆ ಸಮೀಪಿಸುವ ಹೊತ್ತಿಗೆ.. ಆ ದಿನದ ಕೆಲಸಗಳು ಆಗಲೇಬೇಕು.‌ ಹೀಗೆ ಕಾಲೇಜ್, ಓದು ಹಾಗೂ ಇನ್ನಿತರ ಚಟುವಟಿಕೆಗಳನ್ನು ಪಕ್ಕದಲ್ಲಿಟ್ಟು ಕೆಲವು‌ ದಿನಗಳ ವರೆಗೂ ಸಂಜಯ್ ಹಾಗೂ ಸ್ನೇಹಿತರು‌ ತಲೆ ಕೆಡಿಸಿಕೊಂಡರು. ಆದರೆ ಏನೇ ಪ್ರಯತ್ನ ಪಟ್ಟರೂ ಆದ ವಿಚಾರಗಳ ಕುರಿತು ಯಾವ ಸುಳಿವೂ ಸಿಗಲ್ಲಿಲ್ಲ‌. ಹಲವಾರು ಗೊಂದಲದ ಜೊತೆಗೆ ಸಂಜಯ್ ಸಪ್ಪೆಯಾದರೆ, ಸ್ನೇಹ ಮಾತ್ರContinue reading “ಹೀಗೊಂದು ಅನುರಾಗ !!(ಭಾಗ – 7)”

ಹೀಗೊಂದು ಅನುರಾಗ !!(ಭಾಗ – 6)

ಸ್ನೇಹಿತರಿಗೆ ಸಂಜಯ್ ಎಲ್ಲವನ್ನೂ ಎಳೆ ಎಳೆಯಾಗಿ ವಿವರಿಸುವಾಗ,‌ ಗೊಂದಲದ‌ ಗೂಡು ನಿರ್ಮಾಣವಾಗಿ… ಆ ಗೂಡಿಗೆ ಗುಬ್ಬಚ್ಚಿ ಆದವಳು ಸ್ನೇಹ.‌ ಎಲ್ಲರಿಗೂ ಸ್ನೇಹಾಳ‌‌‌ ಕುರಿತು ಊಹಿಸಲಾಗದ ಹಾಗೂ ಉತ್ತರವೇ ಇರದ ಪ್ರಶ್ನೆಗಳು‌ ಉದ್ಭವಿಸಿದವು.‌‌ ಸಂಜಯ್ ಹೇಳಿದ ಹಾಗೆ ಆ ರಾತ್ರಿ ಅವನಿಗೆ ಸ್ನೇಹ ಸಿಕ್ಕಿದ್ದು ಆ ಕಾಡಿನ ಪಕ್ಕದ ಜಾತ್ರೆಯ ಊರಿನಲ್ಲಿ. ಸಂಜಯ್ ತನ್ನ ಸ್ನೇಹಿತರಿಗೆ ಎಲ್ಲವನ್ನೂ ಹೀಗೆ ವಿವರಿಸಲು ಶುರುಮಾಡಿದನು. “ಅವಳ ಮುಖವನ್ನು ನೋಡಲಾಗದೆ, ಅವಳು ಧರಿಸಿದ ಬಟ್ಟೆಯನ್ನಷ್ಟೇ ನೆನಪಿನಲ್ಲಿಟ್ಟುಕೊಂಡ  ಕಾರಣ, ಅವಳಿಗಿಂತ ಮೊದಲೇ ಹಾಸ್ಟೆಲ್ ಗೇಟ್Continue reading “ಹೀಗೊಂದು ಅನುರಾಗ !!(ಭಾಗ – 6)”

ಹೀಗೊಂದು ಅನುರಾಗ !! (ಭಾಗ – 5)

ದಟ್ಟವಾದ ಕಾಡು. ಕತ್ತಲು ಹಬ್ಬಿದಷ್ಟೇ ವೇಗವಾಗಿ ಕತ್ತಲು ಕರಗಿ ಬೆಳಕು ಮೂಡುವಾಗ ಇದೇನೋ‌ ಕಾಣದ ಶಕ್ತಿಯ ಕೈಚಳಕ !! ಎಂಬಂತೆ ಭಯಾನಕ ಹಾಗೂ ವಿಚಿತ್ರವಾದ ಈ ಸನ್ನಿವೇಶದಲ್ಲಿ ಬಂಧಿಯಾದ ಎಲ್ಲರಿಗೂ ಬದುಕುಳಿಯಲು ಉಳಿದ ಹಾದಿ ತಿಳಿಯದೇ ಕಂಗೆಟ್ಟರು. ನಾವೇಕೆ ಇಲ್ಲಿದ್ದೇವೆ ಇವರು ಹೇಗೆ ಇಲ್ಲಿ ಎಂದು ಒಬ್ಬರನೊಬ್ಬರು ಕೇಳಿಕೊಳ್ಳುವ ಹಾಗೆ ನೂರಾರು ಪ್ರಶ್ನೆಗಳ ಸಾಲು ಸಾಲು ಸುಳಿಯಲ್ಲಿ ಸಿಲುಕಿ ಸೊರಗಿದರು.(ಒಂದೇ ಬೈಕಿನಲ್ಲಿರುವ ಹುಡುಗಿ ಮತ್ತು ಹುಡುಗ, ಇಲ್ಲಿನ ಪ್ರಮುಖ ಪಾತ್ರ ವಹಿಸುವ ಸ್ನೇಹ ಹಾಗೂ ಸಂಜಯ್. ಉಳಿದContinue reading “ಹೀಗೊಂದು ಅನುರಾಗ !! (ಭಾಗ – 5)”

ಹೊರಡುವ ಹೊತ್ತಿಗೆ !!

ಹೊರಟಾಗಲೆಲ್ಲಾಹೊರಲಾರದಷ್ಟು ಆಗು ಹೋಗುಗಳು.. ಎಲ್ಲವನ್ನೂ ಹೊತ್ತು‌ ಹೊರಡುವ ಹೊತ್ತಿಗೆ,ಹತ್ತಬೇಕಿದ್ದ ಬಂಡಿಹಳಿಯಿಂದ ಹೊರಟಿರುವ ಹಾಗೆ !! — Deekshith Das

ಹೀಗೊಂದು ಅನುರಾಗ !! (ಭಾಗ – 4)

ಬಿಸಿಲಿನ‌ ಆಚೆಗೆ ಸಂಜೆಯ ಸಮೀಪದಲ್ಲಿ ನಾಲ್ಕೂ ಜನ ಸ್ನೇಹಿತರು ಕಳೆದುಹೋದ ಸ್ನೇಹಿತನಿಂದಾಗಿ, ಉಂಗುರದ ಸುತ್ತಲೂ ಸುನಾಮಿಯಂತೆ ವೇಗವಾಗಿ ಕೈಮೀರಿ ಹೋಗುತ್ತಿರುವ ಪ್ರಸ್ತುತ ವಿಷಯಗಳೆಲ್ಲವೂ ವಿಷವೆಂಬಂತೆ ಭಾಸವಾಗುತ್ತಿರುವಾಗ.. ತಲೆ ಮೇಲೆ ಕೈ ಹೊತ್ತು ಕುಳಿತರೆ ಸಮಯ ಸರಿಯಿವುದೇ ವಿನಃ ಸಂಗತಿ ಬದಲಾಗುವುದಿಲ್ಲ ಎಂದು ಎಲ್ಲರೂ ಆಸ್ಪತ್ರೆಯಿಂದ ಜೀವವಿಲ್ಲದ ಕಳ್ಳ ನನ್ನು ಕೊನೆಯ ಭಾರಿ ನೋಡಿ ಹೊರಬಂದು ದಿಕ್ಕುತೋಚದೆ ಬೈಕ್ ಏರಿ ಸೇರದ ಜಾಗವೇ ತಿಳಿಯದಾಗಿ ಸುಮ್ಮನೇ ಹೊರಟರು. ಹಾಸ್ಟೆಲ್ ಸಮೀಪ‌ ಹೋಗುತ್ತಿದಂತೆಯೇ ಇವರ ಕಣ್ಣಿಗೆ ಬಿದ್ದಿದ್ದು ಸ್ನೇಹಿತನ ಬೈಕ್.Continue reading “ಹೀಗೊಂದು ಅನುರಾಗ !! (ಭಾಗ – 4)”

ಹೀಗೊಂದು ಅನುರಾಗ !! (ಭಾಗ – 3)

ಸ್ವಲ್ಪ ಹೊತ್ತಿನ ನಂತರ ಅವನು ಕಣ್ಣು ಬಿಟ್ಟು ನೋಡಿದರೆ, ಆಸ್ಪತ್ರೆಯಲ್ಲಿ ಇರುವುದು ತಿಳಿಯಿತು‌. ಮರುಕ್ಷಣವೇ ಎಲ್ಲವೂ ನೆನಪಾಗಿ ಹೊರಬಂದು ಅಲ್ಲಿದ್ದ ಸ್ನೇಹಿತರಿಗೆ ಧನ್ಯವಾದ ಹೇಳಿ ತಲೆಯಲ್ಲಿದ್ದ ಬ್ಯಾಂಡೇಜ್ ಜೊತೆಗೇ ಆಚೆ ಬಂದು ಬೈಕ್ ಏರಿ ಜಾತ್ರೆಯ ಕಡೆಗೆ ಹೊರಟನು‌‌. ಅದಾಗಲೇ ಜಾತ್ರೆ ಮುಗಿಯುವ ವೇಳೆಗೆ ಬಂದಿತ್ತು. ಆದೆಷ್ಟೇ ಹುಡುಕಿ ನೋಡಿದರೂ ಅವಳು ಕಾಣಲಿಲ್ಲ‌. ಬಸ್ ನಿಲ್ದಾಣದಲ್ಲಿಯೂ ಸಿಗಲಿಲ್ಲ‌, ಹೊರಟ ಬಸ್ ಅಲ್ಲಿಯೂ ಇರಲಿಲ್ಲ. ಅಷ್ಟರಲ್ಲಿ‌ ಅವನ ಸ್ನೇಹಿತರು ಕಾಲ್ ಮಾಡಿ ಈ ಕೂಡಲೇ ಆಸ್ಪತ್ರೆಯ ಹಾದಿಯಲ್ಲಿ ಬರಲುContinue reading “ಹೀಗೊಂದು ಅನುರಾಗ !! (ಭಾಗ – 3)”

ಹೀಗೊಂದು ಅನುರಾಗ !!(ಭಾಗ – 2)

…ಹಿಂದಿರುಗಿ ನೋಡದೆ ಅಲ್ಲಿಂದ ಹೊರಟ ಅವಳನ್ನು ನೋಡುವ ಕುತೂಹಲದಿಂದ ಅವನು ಒಮ್ಮೆಲೆ ಮೇಲೆದ್ದು ಅವಳ ಹಿಂದೆಯೇ ತನ್ನ ಹೆಜ್ಜೆಗಳ ಸದ್ದು ಲೈಬ್ರರಿ ತುಂಬೆಲ್ಲಾ ಪ್ರತಿಧ್ವನಿಸುವಷ್ಟು ವೇಗವಾಗಿ ನಡೆಯುತ್ತಾ ಆಚೆ ಬಂದು ನೋಡಿದರೆ, ಅವಳ ಸುಳಿವೇ ಇರಲಿಲ್ಲ ಅಲ್ಲಿ. ಅದೇ ಕತ್ತಲೆಯಲ್ಲಿ ಬೆಳಗುತ್ತಿದ್ದ ಲೈಟ್ ಬಲ್ಬ್ ಗಳ ಬೆಳಕು ಕಾಣಿಸುತ್ತಿತ್ತೇ ವಿನಃ ಅವಳು ಕಾಣಲಿಲ್ಲ. ಹೊರಗಡೆ ಬಂದು ಕಾಲೇಜಿನ ನಾಲ್ಕೂ ದಿಕ್ಕಿನಲ್ಲಿ ಅದೆಷ್ಟು ಅಲೆದರೂ ಅವನಿಗೆ ಆ ಪುಸ್ತಕದ ಒಡತಿ ಸಿಗಲಿಲ್ಲ. ಸಪ್ಪೆ ಮನಸ್ಸಿನಿಂದ ಹಾಸ್ಟೆಲ್ ಕಡೆ ಬಂದುContinue reading “ಹೀಗೊಂದು ಅನುರಾಗ !!(ಭಾಗ – 2)”

ಹೀಗೊಂದು ಅನುರಾಗ !! (ಭಾಗ – 1)

Part – 1 ಆವನು ಆಕೆಗಾಗಿ ಲೈಬ್ರರಿಯಲ್ಲಿ ಕಾಯುತ್ತಾ ಕುಳಿತಿದ್ದನು. ಪುಟಗಳು ತಿರುಗುತ್ತಿದ್ದವು. ಇದೇ ವೇಳೆಗೆ ಅವನ ಕಾಯುವಿಕೆಯ ಕಾರಣದ ಹಿಂದಿರುವ ಸಿಹಿ ಗಳಿಗೆಯ ನೆನೆದು ಮುಗುಳು ನಗುತ್ತಾ, ಸುತ್ತಲೂ ನೋಡಿ ಆಕೆ ಬಂದಿರಬಹುದಾ ಎಂದು ತನ್ನನ್ನು ತಾನೇ ಕೇಳಿಕೊಂಡನು. ವಾರಗಳ ಹಿಂದೆ ಅವನು ದಿನಪತ್ರಿಕೆ ಓದಲು ಕಾಲೇಜಿನ ಲೈಬ್ರರಿಯಲ್ಲಿನ ಟೇಬಲ್ ಮೇಲೆ ಕುಳಿತಾಗ ಅಲ್ಲೇ ಪಕ್ಕದಲ್ಲಿದ ಒಂದು ನೋಟ್ ಬುಕ್ ನೋಡಿ, ಏನಿರಬಹುದು ಎಂದು ಅದನ್ನು ತೆರೆದು ನೋಡಿದಾಗ ಅದರಲ್ಲಿನ ಮುದ್ದಾದ ಕನ್ನಡ ಅಕ್ಷರಗಳಿಗೆ ಮನಸೋತು,Continue reading “ಹೀಗೊಂದು ಅನುರಾಗ !! (ಭಾಗ – 1)”

ಕವಿಯ ಬರಹ !!

ಮನದಾಳದಲ್ಲಿ ಅಡಗಿಸಿ,ಜೀವಂತ ಇರಿಸಿದ್ದ ಭಾವನೆಗಳುಹೊರಬಂದಿದ್ದು.. ಗೀಚಿದ ಬರಹಗಳಿಂದ !! ಎಂದೂ ಮರೆಯಾಗದ ಹಾಗೆಭಾವನೆಗಳು ಬದುಕುಳಿದಿದ್ದು..ಸೃಷ್ಟಿಸಿದ್ದ ಕವಿತೆಗಳಿಂದ !! ಕವಿತೆಗಳ ಸೃಷ್ಟಿಕರ್ತ ಮಡಿದಮೇಲೂಭಾವನೆಗಳು‌ ಜೀವಂತವಾಗಿರುವುದು..ಕವಿಯ ಬರಹದಿಂದ !! — Deekshith Das ✍️

ಬದಲಾವಣೆ !!

ಎಲ್ಲವೂ ಹಾಗೆಯೇ ಇರುತ್ತದೆ.. ಭೇಟಿಯಾದ ಸಮಯ..ನಡೆದ ಹಾದಿನೋಡಿದ ಜಾಗಸಿಕ್ಕ ಜನರುಕಾಲೆಳೆದವರುಅಭಿನಂದಿಸಿದವರು.. ಎಲ್ಲದೂ ಹಾಗೆಯೇ ಇರುವುದು.. ಬದಲಾಗುತ್ತದೆ.. ಎಂದುಕೊಡಿದ್ದೆಲ್ಲಾ ಹಾಗೆಯೇ ಇರುವಾಗ,“ಜೊತೆಯಾಗಿ ಬಂದವರೇ ಬದಲಾಗಿದ್ದಾರೆ”ಎನ್ನುವುದು ತಿಳಿಯದೇ ಹೋಗುತ್ತೇವೆ !! — ದೀಕ್ಷಿತ್ ದಾಸ್

ಕರ್ಮದ ಉರುಳು..

ಚರ್ಚೆಗಳು ಅತಿಯಾಯಿತುವಾದಗಳು ನಿಲ್ಲಲಿಲ್ಲ..ಮಾತಿನ ಜಗಳದ ನಡುವೆಕೈ ಕೈ ಸೇರಿ ಹೊಡೆದಾಟವೂ ನಡೆಯಿತು.. ಅಲ್ಲೊಂದು ಜೀವ ನಿರ್ಜೀವ ವಾಯಿತು ‌‌!!ತಪ್ಪು ಸರಿಗಳ ಹೋರಾಟದಲ್ಲಿಅಮಾಯಕನೇ ಬಲಿಯಾದನು.. ಸುಳ್ಳು ಬದುಕುಳಿದರೂಸತ್ಯ ಅಮರವಾಯಿತು.. ಕೊಂದವನು ಗೆದ್ದಂತೆ ನಕ್ಕಾಗ,ಅಲ್ಲಿ ಉಗಮವಾಗಿದ್ದು“ಕರ್ಮ !!”ಕರ್ಮದ ಉರುಲು, ಕಾದುಕುಳಿತಿದೆ ಕೆಟ್ಟವನ ಸಾವಿಗೆ.. — ದೀಕ್ಷಿತ್ ದಾಸ್

ಮನಸ್ಸು ನೀ..

ಮನಸ್ಸು ನೀ ಮರೆಸುನೋವುಗಳನುಮನಸ್ಸು ನೀ ಸವೆಸುಸೇಡುಗಳನುಮನಸ್ಸು ನೀ ರಮಿಸುಆಸೆಗಳನುಮನಸ್ಸು ನೀ ಪ್ರೀತಿಸುಮುಗ್ಧ ಮನಸ್ಸನುಮನಸ್ಸು ನೀ ಪರಿಚಯಿಸುಹೊಸ ನಾಳೆಗಳನುಮನಸ್ಸು ನೀ ಮರಳಿಸುಕಳೆದ ನಿನ್ನೆಗಳನುಮನಸ್ಸು ನೀ ಬದುಕಿಸುಸಾಯುವ ಮನಸ್ಸುಗಳನುಮನಸ್ಸು ನೀ ತಿಳಿಸುಹೊಸ ಆಯಾಮವನುಮನಸ್ಸು ನೀ…. ✍️ — Deekshith Das

ಲೈಫ್ ಒಂತರಾ ಬಸ್ ನಿಲ್ದಾಣ..!!

ನಮ್ಮೆಲ್ಲರ ಜೀವನವೇ ಬಸ್ ನಿಲ್ದಾಣದ ಹಾಗೆ.. ಯಾಕೆ ಅಂತಿರಾ ?? ನಾವೇ ಬಸ್ ಸ್ಟ್ಯಾಂಡ್ ಅನ್ಕೊಳ್ಳಿ !! ಬಸ್ಸು ನಿಲ್ದಾಣಕ್ಕೆ ಬರುವ ಎಲ್ಲಾ ಬಸ್ಸುಗಳೂ ನಿಲ್ಸಲ್ಲಾ, ಹಾಗೇ ನಮಗೆ ಸಂಬಂಧ ಪಟ್ಟವರು ನಮ್ಮೆದುರೇ ಹೋದರೂ ನಮ್ಮನ್ನು ಗುರುತಿಸಿ ಹತ್ತಿರ ಬಂದು ಮಾತಾಡ್ತಾರೆ ಅಂತ ಹೇಳಕ್ ಆಗಲ್ಲ. ಬಸ್ಸು ತಮ್ಮ ನಿಲ್ದಾಣದಲ್ಲಿ ನಿಲ್ಲಿಸಲಿಲ್ಲಾ ಎಂದು ಬಸ್ಸಿನಿಂದ ಕೆಳಗೆ ಹಾರುವವರು ಜೀವಂತ ಉಳಿಯುವುದಿಲ್ಲ. ಹಾಗೆಯೇ ನಮ್ಮ ಜೀವನದಲ್ಲಿ ಪ್ರವೇಶಿಸುವ ಅವಕಾಶವೇ ಇಲ್ಲದಿದ್ದರೂ ನಮ್ಮನ್ನು ಸೇರಲು ಪ್ರಯತ್ನ ಪಡುವವರು ನಮ್ಮ ಮನಸ್ಸಲ್ಲಿContinue reading “ಲೈಫ್ ಒಂತರಾ ಬಸ್ ನಿಲ್ದಾಣ..!!”

ಪ್ರೀತಿಯ ಹಬ್ಬ ದೀಪಾವಳಿ ಹಬ್ಬ..

ದೀಪಾವಳಿ‌ಯ ಹಬ್ಬಸಡಗರ ಸಂಭ್ರಮದ ಜೊತೆಹೊಸ‌‌ ಬದುಕಿಗೆ ಬೆಳಕಿನ ಹಣತೆಯಬೆಳಗುವುದರ ಜೊತೆಗೆಮತ್ತೆ‌ ಹೊಸ ಜೀವನದ ಹೊಸ ದಾರಿಯಪರಿಚಯಿಸುವ ಪರಿಪೂರ್ಣವಾದಪ್ರೀತಿಯ ಹಬ್ಬ ದೀಪಾವಳಿ ಹಬ್ಬ.. ದೀಪಾವಳಿ ಬಂತೆಂದರೆ ಅದೇನೋಬದಲಾವಣೆ ಅದೇನೋ‌ ಹೊಸಆಲೋಚನೆ ‌ಅದೇನೋ‌‌ ಖುಷಿಅದೆಲ್ಲನ್ನೂ ಈ ಹಬ್ಬ ಮನೆ‌ ಮನಗಳಿಗೆಪರಿಚಯಿಸಿ ಪ್ರೀತಿ ಕೊಡುವಪ್ರೀತಿಯ ಹಬ್ಬ ದೀಪಾವಳಿ ಹಬ್ಬ.. ಬದುಕು ಬದಲಾದರೂಬದುಕಿನ ಹಾದಿಯಲ್ಲಿ ಸಿಕ್ಕ ಜನರುಅದಲುಬದಲು ಆದರೂಈ‌ ಹಬ್ಬ ಬಂತೆಂದರೆ ಸಾಕುಇರುವ ಪುಟ್ಟ ಸಂಸಾರದ ಜೊತೆಗೆಇರುವ ಸುತ್ತಲಿನ ಜನರ ಜೊತೆಗೆಇರುವ ಸ್ನೇಹಿತರ ಜೊತೆಗೆಇರುವ ಸಂಬಂಧಗಳ‌ ಜೊತೆಗೆಜೊತೆಯಾಗಿ ಆಚರಿಸಿ ನೆಮ್ಮದಿಯಕ್ಷಣಗಳನು ಆನಂದಿಸುವ ಪ್ರೀತಿಯಹಬ್ಬContinue reading “ಪ್ರೀತಿಯ ಹಬ್ಬ ದೀಪಾವಳಿ ಹಬ್ಬ..”

“ಕನಸು ಕಾಣುವ ಮನಸ್ಸುಗಳಿಗೆ..”

ಕನಸಿನ ಲೋಕವೇ ಬೇರೆ.. ವಾಸ್ತವಿಕ ಬದುಕೇ ಬೇರೆ.. ಬಣ್ಣದ ಲೋಕದಲ್ಲಿ ಕನಸುಗಳೇ ಜೀವಿಸಿರುತ್ತವೆ, ಎಲ್ಲಿಯವರೆಗೇ ??? “ಕನಸುಗಳ ಲೋಕದಲ್ಲಿ ವಾಸ್ತವದ ಎದುರು ಕನಸುಗಳೆಲ್ಲವೂ ನುಚ್ಚು ನೂರಾಗುವ ವರೆಗೆ..” ಹೊಸ ಯೋಚನೆ ಹೊಸ ಯೋಜನೆ ಹೊಸ ಭೇಟಿ ಹೊಸ ಸಂಬಂಧ ಹೊಸ ಹುರುಪು ಹೊಸ ಅನುಭವ…ಹೀಗೆ ಕನಸು ಹುಟ್ಟಲು ಕಾರಣಗಳು ಹಲವು. ಹೀಗೆ ಹುಟ್ಟುವ ಕನಸುಗಳೆಲ್ಲವೂ ತಮ್ಮದೇ ಹಾದಿಯ ಬಣ್ಣದ ಲೋಕದಲ್ಲಿ ಕನಸುಗಳ ಕೂಡಿಸುತ್ತಾ ನಮ್ಮ ಬದುಕಿನ ಜೊತೆಗೇ ನಮ್ಮ ನರೆಳಿನ ಹಾಗೆ ನಮ್ಮಲ್ಲೇ ಜೀವಿಸುತ್ತಾ, ಪ್ರತಿ ಕ್ಷಣContinue reading ““ಕನಸು ಕಾಣುವ ಮನಸ್ಸುಗಳಿಗೆ..””