“ಬೆಂಕಿ‌ ಮನೆ ಕಳ್ಳರು” !! (ಭಾಗ – 13) [ ಕೊನೇಯ ಅಧ್ಯಾಯ ]

ಪೋಲೀಸರು ರಾತ್ರೋ ರಾತ್ರಿ ಹನ್ನೆರಡು ಕಳ್ಳರನ್ನು ಹಿಡಿದ್ದಿದ್ದಾಯಿತು. ಎಲ್ಲಾ ಕಳ್ಳತನದ ಹಿಂದಿದ್ದ ಬುದ್ಧಿವಂತ ತಲೆಯ ಹದಿಮೂರನೇಯ ಕಳ್ಳ ಹೊರಗೇ ಉಳಿದಿದ್ದ. ಬೆಂಕಿಯಲ್ಲಿ ಹೊತ್ತಿ ಉರಿದ ಮನೆಯ ಚಿತ್ರಣ, ಎಸ್.ಐ ಅವರ ತಾಳ್ಮೆಯನ್ನು ‌ಕಿತ್ತಸೆದಿತ್ತು. ಬೆಳಗ್ಗೆ ಆಗುತ್ತಲೇ ಪೋಲೀಸ್ ಸ್ಟೇಷನ್ ನಲ್ಲಿ ತನಿಖೆ ಶುರುವಾಗಿತ್ತು. ಈ‌ ಹಿಂದೆ ಪೋಲೀಸರು, ಅಡಿಕೆ ಕಳ್ಳರೆಂದು ಭಾವಿಸಿ ಹಿಡಿದಿದ್ದ‌ ಬೇರೆ ಕಳ್ಳರಿಂದಾಗಿ ಎಲ್ಲಾ ಪೋಲೀಸರು ತಲೆ ತಗ್ಗಿಸುವಂತಾಗಿತ್ತು ಹಾಗೂ ಪತ್ರಕರ್ತರ ಅನೇಕ ಪ್ರಶ್ನೆಗಳಿಗೆ ಸರಿಯಾದ ಉತ್ತರ‌ ನೀಡಲಾಗದೇ ಎಸ್.ಐ ಮುಖಭಂಗವನ್ನು ಅನುಭವಿಸಿದ್ದರು. ಇದೇContinue reading ““ಬೆಂಕಿ‌ ಮನೆ ಕಳ್ಳರು” !! (ಭಾಗ – 13) [ ಕೊನೇಯ ಅಧ್ಯಾಯ ]”

“ಬೆಂಕಿ‌ ಮನೆ ಕಳ್ಳರು” !! (ಭಾಗ – 12)

ಪೋಲೀಸರ ಯೋಜನೆಯು ಎಸ್.ಐ ಜಗದೀಶ್ ಅಂದುಕೊಂಡಂತೆ ಆಗದಿದ್ದರೂ… ಸಂಪೂರ್ಣವಾಗಿ ‌ಕೈ ಮೀರಿ‌ ಹೋಗದ ಹಾಗೆ, ಪೋಲೀಸರ ಹೋರಾಟದಿಂದ ಗೆದ್ದು ಬೀಗಿತ್ತು. ಇಬ್ಬರು ಕಳ್ಳರನ್ನು ಹಿಡಿದ ಪೊಲೀಸರಿಗೆ ಲಾರಿಯಲ್ಲಿದ್ದ ಉಳಿದ‌‌‌ ಕಳ್ಳರನ್ನು‌‌ ಹಿಡಿಯಲು‌ ಆಗಲಿಲ್ಲ.‌ ಲಾರಿ‌ ಗುದ್ದಿದ್ದ ರಭಸಕ್ಕೆ ರಸ್ತೆಯ ಕೆಳಗಿನ ಗದ್ದೆಗೆ ಉರುಳಿದ್ದ, ಆಟೋದಲ್ಲಿದ್ದ ಎಸ್.ಐ ಸಣ್ಣಪುಟ್ಟ ಗಾಯದ ಜೊತೆಗೆ ದೊಡ್ಡ ಅನಾಹುತದಿಂದ‌ ಪಾರಾಗಿದ್ದರು. ಕಳ್ಳರು ತಲೆಗೆ ಕಲ್ಲಿನಲ್ಲಿ ‌ಹೊಡೆದಿದ್ದರಿಂದ ಸ್ವಲ್ಪ ಮಟ್ಟಿಗೆ ಪೆಟ್ಟಾಗಿದ್ದ ರಂಗಪ್ಪಸ್ವಾಮಿಗೆ ಸರಿಯಾದ ಸಮಯಕ್ಕೆ ‌ಚಿಕಿತ್ಸೆ  ಕೊಡಿಸಿದರು. ಇಡೀ ರಾತ್ರಿ ಊರಿನ ತುಂಬೆಲ್ಲಾ‌Continue reading ““ಬೆಂಕಿ‌ ಮನೆ ಕಳ್ಳರು” !! (ಭಾಗ – 12)”

“ಬೆಂಕಿ‌ ಮನೆ ಕಳ್ಳರು” !! (ಭಾಗ – 11)

ಎಸ್.ಐ ಜಗದೀಶ್ ಅವರ ಪೋಲೀಸ್ ತಂಡ ತಾವು ಅಂದುಕೊಂಡ ಹಾಗೆ ಅಡಿಕೆ ಕದಿಯಲು ಯೋಜನೆ ರೂಪಿಸಿದ್ದ ರಂಗಪ್ಪಸ್ವಾಮಿಗೆ.. “ಆ‌ ಕಳ್ಳರಿಗೆ ಕರೆ‌‌ ಮಾಡಿ ಮತ್ತೊಂದು ಕಳ್ಳತನದ ವಿಷಯಕ್ಕೆ ಸಂಬಂಧಿಸಿದಂತೆ ಭೇಟಿ ಮಾಡುವ ಸಲುವಾಗಿ,‌ ಕಳ್ಳರನ್ನು ಸಿಗಲು‌” ಹೇಳಬೇಕೆಂದು ಹೇಳಿದರು‌. ರಂಗಪ್ಪ ಸ್ವಾಮಿಯ ಬಳಿ ಆ ಕಳ್ಳರನ್ನು ಸಂಪರ್ಕ ಮಾಡುವ ಯಾವುದೇ ದಾರಿ ಇರಲಿಲ್ಲ. ಎರಡು ವಾರಕ್ಕೊಮ್ಮೆ ಪ್ರತಿ ಶನಿವಾರ ಆ ಕಳ್ಳರೇ ರಂಗಪ್ಪಸ್ವಾಮಿಗೆ ಅವರೇ ಕೊಟ್ಟ ಬೇರೆ ಮೊಬೈಲ್ ನ ನಂಬರ್‌ ಗೆ ಕರೆ ಮಾಡುತ್ತಿದ್ದರು. ಕಳ್ಳರುContinue reading ““ಬೆಂಕಿ‌ ಮನೆ ಕಳ್ಳರು” !! (ಭಾಗ – 11)”

“ಬೆಂಕಿ‌ ಮನೆ ಕಳ್ಳರು” !! (ಭಾಗ – 10)

ಮುಸುಕು ಧರಿಸಿ ಕೃಷ್ಣಪ್ಪನ ಹೋಟೆಲ್ ಗೆ ಬೆಂಕಿ ಹಚ್ಚುವ ವೇಳೆಗೆ ಪೋಲೀಸರ ವಶವಾಗಿದ್ದ ಇಬ್ಬರನ್ನು ಎಸ್.ಐ ಜಗದೀಶ್ ಅವರು ಸ್ಟೇಷನ್ ಗೆ ಕರೆದೊಯ್ದು ವಿಚಾರಣೆ ಶುರುಮಾಡಿದರು. ಎಸ್.ಐ ಹಾಗೂ ಹೆಡ್ ಕಾನ್ಸ್‌ಟೇಬಲ್ ಅಂದುಕೊಂಡಂತೆಯೇ ಆಗಿತ್ತು. ವಶದಲ್ಲಿದ್ದ ಇಬ್ಬರಿಗೂ ಆ ಅಡಿಕೆ ಕಳ್ಳತನ ಮಾಡಿದ್ದ ನಿಜವಾದ ಕಳ್ಳರಿಗೂ ನೇರವಾದ ಸಂಪರ್ಕವಿರಲಿಲ್ಲ ಮತ್ತು ಆ ಇಬ್ಬರು ಈ ಹತ್ತಿರದ ಊರಿನವರೂ ಆಗಿರಲಿಲ್ಲ. “ಯಾರೋ ಒಬ್ಬರು ಬಂದು ದುಡ್ಡು ಕೊಟ್ಟು ಈ‌ ರೀತಿಯಾಗಿ ಮಾಡಲು‌‌ ಹೇಳಿದ್ದರು !!” ಎಂದಾಗ “ಈ‌‌‌ ಅಡಿಕೆContinue reading ““ಬೆಂಕಿ‌ ಮನೆ ಕಳ್ಳರು” !! (ಭಾಗ – 10)”

“ಬೆಂಕಿ‌ ಮನೆ ಕಳ್ಳರು” !! (ಭಾಗ – 9)

ಅಡಿಕೆಯ ಕಳ್ಳತನದ ಬಗ್ಗೆ ಪತ್ರಕರ್ತರು ಪ್ರಶ್ನೆ‌ ಮಾಡುವ ಮೊದಲೇ, ಎದ್ದು ನಿಂತ ಎಸ್.ಐ ಜಗದೀಶ್ ಮಾತು ಶುರುಮಾಡಿದರು… “ಕಳ್ಳತನವಾದ ಎರಡೂ ಮನೆಯ ಅಡಿಕೆಯನ್ನು ವಶಪಡಿಸಿಕೊಂಡಿದ್ದೇವೆ. ನಮ್ಮ ತಂಡವು ಹಗಲೂ ರಾತ್ರಿ ತನಿಖೆ ನಡೆಸಿ ಕಳ್ಳತನವಾದ ಅಡಿಕೆಯನ್ನು ಮರಳಿ ಪಡೆದಿದ್ದೇವೆ. ನಮ್ಮ ತಂಡದ ಶ್ರಮದ ಜೊತೆಗೆ ಸ್ಥಳೀಯರ ಸಹಾಯವೂ ಉತ್ತಮವಾಗಿತ್ತು ಮತ್ತು ರಾತ್ರಿಯ ವೇಳೆ ಕಾಫಿ ಕೃಷ್ಣಪ್ಪನವರು ಕೊಟ್ಟ‌ ಮಾಹಿತಿ ತುಂಬಾನೆ ಉಪಯೋಗವಾಯಿತು.. !!” ಎಂದು ಎಸ್‌.ಐ ಹೇಳುವಾಗ ಅಲ್ಲಿದ್ದವರೆಲ್ಲಾ ಚಪ್ಪಾಳೆ ತಟ್ಟಿದರು. ಅಷ್ಟರಲ್ಲೇ  ಪತ್ರಕರ್ತರು ನೂರಾರು ಪ್ರಶ್ನೆಗಳನ್ನುContinue reading ““ಬೆಂಕಿ‌ ಮನೆ ಕಳ್ಳರು” !! (ಭಾಗ – 9)”

“ಬೆಂಕಿ‌ ಮನೆ ಕಳ್ಳರು” !! (ಭಾಗ – 8)

ರಸ್ತೆ ನಡುವಲ್ಲೇ ಎರಡು ಟ್ರಾಕ್ಟರ್‌ ನಲ್ಲಿದ್ದ ದೊಡ್ಡ ಕಬ್ಬಿನ‌‌ ಲೋಡ್ ನಲ್ಲಿ‌ ಅಡಿಕೆ ಮೂಟೆಗಳನ್ನು ಪತ್ತೆ ಹಚ್ಚುವಲ್ಲಿ ಪೋಲೀಸರು ಯಶಸ್ವಿಯಾದರು. ಅದಾಗಲೇ ಸಮಯ ಬೆಳಗಿನ ಜಾವ 4 ಗಂಟೆ ಆಗಿತ್ತು. ಪೋಲೀಸರು ಟ್ರಾಕ್ಟರ್, ಕಬ್ಬು ಮತ್ತು ಅಡಿಕೆಯನ್ನು ಸ್ಟೇಷನ್ ಗೆ ಸಾಗಿಸುವಷ್ಟರಲ್ಲಿ ಬೆಳಗ್ಗೆ 5 ಗಂಟೆ ಆಗಿತ್ತು.‌ ಬೆಳಗಿನ ಜಾವ ರಸ್ತೆಯಲ್ಲಿ ಓಡಾಡುವ‌ ಕೆಲವರು ಇದನ್ನೆಲ್ಲ ನೋಡಿದ್ದರಿಂದ, ಒಬ್ಬರಿಂದ ಒಬ್ಬರಿಗೆ ವಿಷಯ ತಲುಪಿ ಇಡೀ ಊರಿಗೆ ರಾತ್ರಿ ನಡೆದ ತನಿಖೆ ಗೊತ್ತಾಗಿತ್ತು. ಒಂದು ಕಡೆ ಎಸ್.ಐ ಜಗದೀಶ್Continue reading ““ಬೆಂಕಿ‌ ಮನೆ ಕಳ್ಳರು” !! (ಭಾಗ – 8)”

“ಬೆಂಕಿ‌ ಮನೆ ಕಳ್ಳರು” !! (ಭಾಗ – 7)

ಊರಿನ ಎಲ್ಲಾ ಕಡೆಯಲ್ಲೂ ಸುಮಾರು ಮೂರರಿಂದ ನಾಲ್ಕು ದಿನಗಳವರೆಗೆ ಹುಡುಕಾಟ ನಡೆಸಿದರೂ, ಎಲ್ಲಿಯು ಕೂಡ ಅಡಗಿಸಿಟ್ಟ ಅಡಿಕೆ ಪೋಲೀಸರ ಕಣ್ಣಿಗೆ ಬೀಳಲಿಲ್ಲ. ವಾಸವಿದ್ದ ಮನೆಗಳಿಗೆ ಸಂಬಂಧಿಸಿದ ಜಾಗವನ್ನು ಹೊರತುಪಡಿಸಿ, ಕಾಡಿನ ಸಮೇತ ಉಳಿದ ಬೇರೆ ಎಲ್ಲಾ ಕಡೆ ಹುಡುಕಾಟ ನಡೆಸಿದ್ದ ಪೋಲೀಸರಿಗೆ… ಒಂದು ಸಣ್ಣ ಅನುಮಾನದ ಸುಳಿವು ಸಹ ಸಿಕ್ಕಿರಲಿಲ್ಲ. ಇದನ್ನೆಲ್ಲಾ ಗಮನಿಸಿದ ಎಸ್.ಐ ಜಗದೀಶ್ ಗೆ, ಒಂದಂತ್ತೂ ಖಚಿತವಾಗಿತ್ತು. “ಊರಿನ ಹೊರಗಡೆಯ ಖಾಲಿ ಜಾಗದಲ್ಲಿ ಎಲ್ಲಿಯೂ ಅಡಗಿಸಿಟ್ಟ ಅಡಿಕೆ ಸಿಗಲಿಲ್ಲ ಎಂದರೆ.. ಖಂಡಿತವಾಗಿಯೂ ಆ ಅಡಿಕೆContinue reading ““ಬೆಂಕಿ‌ ಮನೆ ಕಳ್ಳರು” !! (ಭಾಗ – 7)”

“ಬೆಂಕಿ‌ ಮನೆ ಕಳ್ಳರು” !!(ಭಾಗ – 6)

ಕಳ್ಳರನ್ನು ಹಾಗೂ ಕಳ್ಳರು ಕದ್ದ ಅಡಿಕೆಯನ್ನು ಹುಡುಕುವುದು ಎಸ್.ಐ ಜಗದೀಶ್ ಅವರಿಗೆ ತುಂಬಾನೆ ಮುಖ್ಯವಾಗಿತ್ತು. ಮೇಲಾಧಿಕಾರಿಗಳ ಒತ್ತಡ ಮತ್ತು ರಾಜಕಾರಣಿಗಳ ಮಾತುಗಳು ಹೇಗಿತ್ತು ಎಂದರೆ, ಈ ಪ್ರಕರಣವನ್ನು ಭೇದಿಸದಿದ್ದರೆ.. “ತನಿಖೆ ವಿಫಲ” ಎಂದು ಪರಿಗಣಿಸಿ ಬೇರೆ ಊರಿಗೆ ವರ್ಗಾವಣೆ ಮಾಡಿ, ಈ ಕೇಸನ್ನು ಬೇರೊಬ್ಬರಿಗೆ ವಹಿಸುವಷ್ಟು ಗಂಭೀರವಾಗಿತ್ತು. ಎಸ್.ಐ ಅವರು ಹೆಡ್ ಕಾನ್ಸ್‌ಟೇಬಲ್ ಈರಪ್ಪಣ್ಣನಿಗೆ.. “ಅಡಿಕೆ ಕದ್ದ ಕಳ್ಳರು ಊರಿಂದಾಚೆಗೆ ಹೋಗಿರಬಹುದು… ಆದರೆ ಕಳ್ಳರು ಕದ್ದ ಅಡಿಕೆ ಮಾತ್ರ ಊರಿನ ಒಳಗಡೆಯೇ ಇದೆ !!” ಎಂದಾಗ ಈContinue reading ““ಬೆಂಕಿ‌ ಮನೆ ಕಳ್ಳರು” !!(ಭಾಗ – 6)”

“ಬೆಂಕಿ‌ ಮನೆ ಕಳ್ಳರು” !! (ಭಾಗ – 5)

“ಕೊನೆಗೂ ಅಡಿಕೆ ಕಳ್ಳರ ಕಥೆಗೆ ಅಂತ್ಯ ಸಿಕ್ಕಿತು..!!” ಎಂದು  ಹೆಡ್ ಕಾನ್ಸ್‌ಟೇಬಲ್ ಈರಪ್ಪಣ್ಣ ನೆಮ್ಮದಿಯಿಂದ ನಿಟ್ಟುಸಿರು ಬಿಡುತ್ತಾ ಕಾರಿನಿಂದ ಇಳಿದು, ಪಿಸ್ತೂಲ್ ಹಿಡಿದು ನಿಂತಿದ್ದ ಎಸ್.ಐ ಅವರ ಪಕ್ಕಕ್ಕೆ ಹೋಗಿ ನಿಂತನು.‌ ಮೂರು ಪಿಕ್ ಅಪ್ ನಲ್ಲಿದ್ದ ಕಳ್ಳರು ಈ‌ ರೀತಿಯಾಗಿ ತಾವು ಸಿಕ್ಕಿ ಹಾಕಿಕೊಳ್ಳುತ್ತೇವೆಂಬ ಯಾವುದೇ ನಿರೀಕ್ಷೆ ಮಾಡಿರದ ಕಾರಣ, ಆ ಕ್ಷಣಕ್ಕೆ ಏನು ಮಾಡಬೇಕೆಂದು ತೋಚದೇ ಯೋಚಿಸುವಷ್ಟರಲ್ಲಿ… ಮುಂದೆ ಇದ್ದ ಸುಮಾರು ಜನ ಪೋಲೀಸರು ಮೂರೂ ಗಾಡಿಯನ್ನು ಸುತ್ತುವರೆದರು. ಜೊತೆಗೆ ಎಸ್.ಐ ಕೈಯಲ್ಲಿದ್ದ ಪಿಸ್ತೂಲ್Continue reading ““ಬೆಂಕಿ‌ ಮನೆ ಕಳ್ಳರು” !! (ಭಾಗ – 5)”

“ಬೆಂಕಿ‌ ಮನೆ ಕಳ್ಳರು” !! (ಭಾಗ – 4)

ಮೊದಲನೇ ದಿನ ಗಜಕೋಲು ಅರಮನೆಯ ಹೊನ್ನಪ್ಪ ನಾಯ್ಕನ ಮನೆಯಲ್ಲಿ ಸುಮಾರು 42 ಅಡಿಕೆ ಮೂಟೆಗಳನ್ನು ಕದ್ದ ಕಳ್ಳರು, ಸ್ವಲ್ಪವೂ ಬಿಡುವು ಕೊಡದೆ ಮರು ದಿನವೇ ಕತ್ತಲುಬ್ಯಾಣದ ದೇವೇಂದ್ರಣ್ಣನ ತೋಟದಿಂದ 500 ಮರದ ಹಸಿ ಅಡಿಕೆಯನ್ನೇ ಕದ್ದೊಯ್ದರು. ಪೋಲೀಸರಿಗೆ ತಲೆನೋವಾದ ಈ ಪ್ರಕರಣ, ಈಡೀ ಅನಲನಗರದ ಜನರ ತಲೆ ಬಿಸಿಗೆ ಕಾರಣವಾಗಿತ್ತು. ಕಾಫಿ ಕೃಷ್ಣಪ್ಪನ ಹೋಟೆಲ್‌.., ಊರಿನ ಜನರ ಮಾತಿನ ಚರ್ಚೆಯಿಂದ ತುಂಬಿಹೋಯಿತು. ಇದರ ಪರಿಣಾಮವಾಗಿ ಬಂದವರೆಲ್ಲಾ ಕಾಫಿ ಕೃಷ್ಣಪ್ಪನ ಕಾಫಿಯನ್ನೇ ಮರೆತು ಈ‌ ಕಳ್ಳರ ವಿಚಾರದ ಚರ್ಚೆContinue reading ““ಬೆಂಕಿ‌ ಮನೆ ಕಳ್ಳರು” !! (ಭಾಗ – 4)”

“ಬೆಂಕಿ‌ ಮನೆ ಕಳ್ಳರು” !! (ಭಾಗ – 3)

ಭಾಗ ಮೂರರಲ್ಲಿನ ಹೊಸ ಪಾತ್ರಗಳ ಪರಿಚಯ..1. ಹೆಡ್ ಕಾನ್ಸ್‌ಟೇಬಲ್ ಈರಪ್ಪಣ್ಣ2. ಕತ್ತಲುಬ್ಯಾಣದ ದೇವೇಂದ್ರಣ್ಣ ಅಂತೂ ಇಂತೂ ಕಾಫಿ ಕೃಷ್ಣಪ್ಪನ ಕುತ್ತಿಗೆಗೆ ತಂದು ನಿಲ್ಲಿಸಿದರು ಕಳ್ಳರು. ಎರಡು ಮೂಟೆ ಅಡಿಕೆ ಇದ್ದ ಹಳೇಯ ಲಾರಿ ಒಂದು ಕಾಫಿ ಕೃಷ್ಣಪ್ಪನ ಹೋಟೆಲ್ ಹಿಂಭಾಗದಲ್ಲಿ ಸಿಕ್ಕಿರುವ ವಿಷಯವನ್ನು ಒಂದು ಪೋಲೀಸ್ ತಂಡ ಪಿ.ಎಸ್.ಐ ಜಗದೀಶ್ ರಾಮ್ ಅವರಿಗೆ ತಿಳಿಸಿದಾಗ, ಕೂಡಲೆ ಜಗದೀಶ್ ಅವರು ಗಜಕೋಲು ಬಂಗಲೆಯಲ್ಲಿ ತಾವು ನಡೆಸುತ್ತಿದ್ದ ವಿಚಾರಣೆಯನ್ನು ನಿಲ್ಲಿಸಿ, ಹೊನ್ನಪ್ಪ ನಾಯ್ಕನನ್ನು ಕರೆದುಕೊಂಡು ಪೋಲೀಸ್ ಜೀಪಿನಲ್ಲಿ ಕೃಷ್ಣಪ್ಪನ‌ ಹೋಟೆಲ್Continue reading ““ಬೆಂಕಿ‌ ಮನೆ ಕಳ್ಳರು” !! (ಭಾಗ – 3)”

“ಬೆಂಕಿ‌ ಮನೆ ಕಳ್ಳರು” !! (ಭಾಗ – 2)

ಭಾಗ ಎರಡಲ್ಲಿ ಬರುವ ಹೊಸ ಪಾತ್ರಗಳ ಪರಿಚಯ..1. “ಕಾಫಿ ಕೃಷ್ಣಪ್ಪ”2. “ಪಿ.ಎಸ್.ಐ ಜಗದೀಶ್ ರಾಮ್” ಆಳುಗಳೆಲ್ಲರೂ ಸೇರಿ ಪೋಲೀಸ್ ಜೀಪನ್ನು ಟ್ರಾಕ್ಟರ್ ನ ಸಹಾಯದಿಂದ ಸ್ಟೇಷನ್ ಗೆ ಬಿಟ್ಟು, ವಾಪಸ್ಸು ಗಜಕೋಲು ಬಂಗಲೆಗೆ ಬಂದು ನೋಡಿದಾಗ… ಸುಮಾರು ನಲವತೈದು ಮೂಟೆ ಅಡಿಕೆ ಕಳ್ಳತನವಾಗಿರುವುದು ತಿಳಿಯಿತು. ಎಲ್ಲರೂ ಗಾಬರಿಯಿಂದ ಯಜಮಾನ್ರೇ !! ಎನ್ನುತ್ತಾ ಓಡಿ ಹೋಗಿ ಮಲಗಿದ್ದ ಹೊನ್ನಪ್ಪ ನಾಯ್ಕನನ್ನು ಎಬ್ಬಿಸಿ, ತರ ತರ ನಡುಗುತ್ತಲೇ ಕಳ್ಳತನದ ವಿಷಯ ತಿಳಿಸಿದರು. ಹೊನ್ನಪ್ಪ ನಾಯ್ಕನಿಗೆ ಏನೂ ತೋಚದೆ, ಸಿಟ್ಟು ಹೆಚ್ಚಾಗಿContinue reading ““ಬೆಂಕಿ‌ ಮನೆ ಕಳ್ಳರು” !! (ಭಾಗ – 2)”

“ಬೆಂಕಿ‌ ಮನೆ ಕಳ್ಳರು” !! (ಭಾಗ – 1)

ಶಿವಮೊಗ್ಗ ಹಾಗೂ ಸಾಗರ ನಡುವಿನ ಎರಡು ಊರನ್ನು ತಲುಪುವ ರೈಲಿನ ಹಳಿ, ತನ್ನ ದಾರಿಯಲ್ಲಿ ಸುಮಾರು ಹಳ್ಳಿ ನಗರ ಕಾಡು ಗುಡ್ಡಗಳನ್ನು ಸೀಳಿ ನಿರ್ಮಾಣವಾಗಿತ್ತು. ರಾತ್ರಿ ಹಗಲು ಎನ್ನದೇ ರೈಲುಗಳು ನಿತ್ಯವೂ ಸಂಚರಿಸುತ್ತಿದ್ದವು ಮತ್ತು ಈಗಲೂ ಸಂಚರಿಸುತ್ತಿವೆ. ಹೀಗೆ ಸಾಗುವ ಹಾದಿಯಲ್ಲಿ ಒಂದು ಹಳ್ಳಿ !! ಈ ಕಾದಂಬರಿಯ ನೀವು ಓದುತ್ತಿರುವ ಘಟನೆಯ ಪ್ರಮುಖ ಭಾಗವಾದ ಈ ಹಳ್ಳಿಯ ಹೆಸರು “ಅನಲನಗರ”. ಸುಮಾರು ಸಾವಿರ ವರ್ಷಗಳ ಹಿಂದಿನ ಇತಿಹಾಸ ಇರುವ ಈ ಊರಿಗೆ ಸ್ವಾತಂತ್ರ್ಯ ಹೋರಾಟ, ಅನೇಕContinue reading ““ಬೆಂಕಿ‌ ಮನೆ ಕಳ್ಳರು” !! (ಭಾಗ – 1)”

“ನೀವೂ… ಬದಲಾಗಿ !!”

ಕೆಲವು ಸನ್ನಿವೇಶಗಳು ನಮ್ಮ‌ ನಿಮ್ಮೆಲ್ಲರನ್ನೂ ಬದಲಾಯಿಸಿ ಬಿಡುತ್ತದೆ. ಇದರ ಜೊತೆಗೆ ಕೆಲವೊಂದು ಸಮಯವೂ ನಮ್ಮನ್ನು ಬದಲಾಯಿಸುತ್ತದೆ. ಕಟು ಸತ್ಯವೆಂದರೆ ಬದಲಾವಣೆಯ ಮತ್ತೊಂದು ವಿಷಯವೇ ಜನರು. ಬದಲಾವಣೆಗೆ ಕಾರಣ ತುಂಬಾನೆ ಇದೆ‌. ಇಲ್ಲಿ ಬದಲಾಗುವ ಮುನ್ನ ನಮಗೆ ಯೋಚಿಸಲು ಅವಕಾಶ ಸಿಗುವುದು ಎಷ್ಟು ಸತ್ಯವೋ, ಅಷ್ಟೇ ಸತ್ಯ ಬದಲಾದ ನಂತರ ಸರಿ ಪಡಿಸಿಕೊಳ್ಳುವುದಕ್ಕೂ ಅವಕಾಶ ಇರುತ್ತದೆ ಎನ್ನುವುದು. ಕೆಲವು ಸನ್ನಿವೇಶಕ್ಕೆ ನಾವು ಕೈಗೊಂಬೆ ಆದರೆ, ಇನ್ನೊಂದು ಕಡೆ ನಮ್ಮದೇ ಆದ ಸಮಯ ನಮ್ಮನ್ನೇ ಆಟವಾಡಿಸಿ‌ ಬೀಳಿಸಿ ಬಿಡುತ್ತದೆ. ನಂತರವೇContinue reading ““ನೀವೂ… ಬದಲಾಗಿ !!””

ಹೀಗೊಂದು ಅನುರಾಗ !!(ಭಾಗ 13 – The Last Episode)

ಉಸಿರು ನಿಲ್ಲಿಸಿದವಳು ಮತ್ತೆ ಮಾತನಾಡಿದ್ದನ್ನು ಕೇಳಿಸಿಕೊಂಡ ಸ್ನೇಹಾಳಿಗೆ ಗಾಬರಿ ಹೆಚ್ಚಾಗಿ, ತನ್ನ ಸ್ನೇಹಿತೆಯ ಧ್ವನಿಯ ಆನಂದವನ್ನ ಅನುಭವಿಸುವುದನ್ನೇ ಮರೆತಳು. ಆ ಕಡೆಯಿಂದ ಮೊಬೈಲ್ ನಲ್ಲಿ ಮತ್ತದೇ ಧ್ವನಿ, ಸಂಗೀತಾ ಮತ್ತೊಮ್ಮೆ ಅದೇ ಮಾತನ್ನು ಹೇಳಿದಳು !! “ಸ್ನೇಹಾ ಹೇಗಿದ್ದೀಯಾ ನಾನು ಸಂಗೀತಾ…..”‌ ಎಂದು.ಕೇಳಿಸಿಕೊಂಡ ಸ್ನೇಹಾ ಮೆಲ್ಲಗಿನ ಧ್ವನಿಯಲ್ಲಿ ಸಂಗೀತಾ,‌ ಎಂದು ಹೇಳುತ್ತಲೇ ಜೋರಾಗಿ ಅತ್ತಳು. ಸಂಗೀತಾ ಎಂದು ಮಾತಿನಲ್ಲೇ ಮುದ್ದಿಸುತ್ತಾ ಅಳು ಮತ್ತು ನಗು ಒಂದಾಗಿ ಆ ಸುಂದರ ಕ್ಷಣವನ್ನು ಸ್ನೇಹಾಳ ರೀತಿಯೇ ಅಲ್ಲಿ ಸಂಗೀತಾ ಕೂಡContinue reading “ಹೀಗೊಂದು ಅನುರಾಗ !!(ಭಾಗ 13 – The Last Episode)”

ಹೀಗೊಂದು ಅನುರಾಗ !!(ಭಾಗ – 12)

ಆ ಒಂದು ದಿನ‌ ನನ್ನ ಪಾಲಿಗೆ ಜೀವನದ ಪ್ರತಿ ಕ್ಷಣವೂ ಮರೆಯಲಾಗದ ಕೆಟ್ಟ ನೆನಪಾಗಿ ಉಳಿದು ಹೋಗುತ್ತದೆ, ಎನ್ನುವ ಚಿಕ್ಕ ಸುಳಿವೂ ನನಗಿರಲಿಲ್ಲ……. ಎನ್ನುತ್ತಾ ಸ್ನೇಹಾ ಮಾತು ಆರಂಭಿಸಿದಳು. ಸಂಜಯ್ ಆ ಪೋಟೋದಲ್ಲಿ‌ ತನ್ನನ್ನೇ ನೋಡುವಂತೆ ನಗುತ್ತಿರುವ ಸಂಗೀತಾಳ ಕಡೆ ನೋಡುತ್ತಿದ್ದನು. ಇಷ್ಟು ದಿನದ ತನ್ನ ಪ್ರಯಾಣದಲ್ಲಿ ಸೇರುವ ಸ್ಥಳ ನಿಜವಾಗಿಯೂ ಇರಲೇ ಇಲ್ಲ !! ಎಂಬುದು ಸಂಜಯ್ ನನ್ನು ಮೌನದ ಮನೆಯೊಳಗೆ ಬಿಗಿಯಾಗಿ ಬಂಧಿಸಿಟ್ಟಿತ್ತು. ಸ್ನೇಹಾ ಮಾತು ಮುಂದುವರೆಸಿದಳು… ಅಂದು ನೀನು ಲೈಬ್ರರಿಯಲ್ಲಿ ಸಂಗೀತಾ ಬಿಟ್ಟುContinue reading “ಹೀಗೊಂದು ಅನುರಾಗ !!(ಭಾಗ – 12)”

ಹೀಗೊಂದು ಅನುರಾಗ !!(ಭಾಗ – 11)

ವಾಸ್ತವದ ಭಯಾನಕ ಅದೆಷ್ಟಿತ್ತು ಎಂದರೆ,‌ ಎಲ್ಲವೂ ಕಾಣದ ದೇವರ ಕೈಚಳಕದಲ್ಲಿ ಮೊದಲೇ ಚಿತ್ರಿಸಲ್ಪಟ್ಟಂತೆ. ಎದುರಿಗಿದ್ದರೂ ಅವಳನ್ನು ಮಾತನಾಡಿಸಲು ಆಗದಷ್ಟು ಅವನು ದಣಿದಿದ್ದರೆ, ಅವಳಿಗೆ ಅವನ ಸ್ಥಿತಿಯನ್ನು ಅರಗಿಸಿಕೊಳ್ಳಲಾಗದೆ ಮಾತುಗಳೇ ಇಲ್ಲಿ ಉಸಿರು ನಿಲ್ಲಿಸಿದ್ದವು. ನೀರು ಕುಡಿಸಿ, ಸಂಜಯ್ ನನ್ನು ಹಿಡಿದು ಜೀಪಿನಲ್ಲಿ ಕೂರಿಸಿದ ಸ್ನೇಹಾ, ತಾನು‌ ಇಲ್ಲಿಗೆ ಬಂದ ದಾರಿಯನ್ನು ವಿವರಿಸಿದಳು….. ಮುಂಜಾನೆ ಮನೆಯಲ್ಲಿ ನನ್ನ ಅಜ್ಜ ಮತ್ತು ಆಳುಗಳು, ಅಪ್ಪನೆದುರು “ರಾತ್ರಿ ನಗರದಲ್ಲಿ ನಡೆದ ಘಟನೆಯನ್ನು ವಿವರಿಸಿ ಅಲ್ಲೊಬ್ಬ ಸಂಜಯ್ ಎಂಬ ಹುಡುಗ ನಮ್ಮನೆಯ ಹುಡುಗಿಯContinue reading “ಹೀಗೊಂದು ಅನುರಾಗ !!(ಭಾಗ – 11)”

ಹೀಗೊಂದು ಅನುರಾಗ !! (ಭಾಗ – 10)

ಜೀವ ಉಳಿಸಿಕೊಳ್ಳಲು ಸಂಜಯ್ ರಸ್ತೆಯಲ್ಲಿ ಓಡುತ್ತಿದ್ದರೆ, ಅವನ‌ ಹಿಂದೆ ಆ ನಾಲ್ವರು ಸಾಕ್ಷಾತ್ ರಾಕ್ಷಸರಂತೆ ಅಟ್ಟಾಡಿಸಿಕೊಂಡು ಕಿರುಚುತ್ತಾ ಹಿಂಬಾಲಿಸುತ್ತಿದ್ದರು. ಕಾಣದ ಕತ್ತಲೆಯಲ್ಲಿ ಅವನ ಪರವಾಗಿ ಯಾರೂ ಇರಲಿಲ್ಲ. ಹಿಂದೆ ನೋಡುತ್ತಾ ಓಡುವಾಗ ಎದುರಿಗೆ ಬಂದ ವಾಹನವನ್ನು ಗಮನಿಸದೆ ಕಾರಿಗೆ ಡಿಕ್ಕಿಯಾದ ಸಂಜಯ್, ಅಲ್ಲೇ ಕುಸಿದನು. ಕಣ್ಣು ಮಂಜಾಗುವ ಮೊದಲು ಅವನಿಗೆ ಕಂಡಿದ್ದು ‘ಆ‌‌ ನಾಲ್ಕು ಜನರು ಅವನನ್ನು ಸುತ್ತುವರೆದಿದ್ದು’. ಆಗಿದ್ದೆಲ್ಲವೂ ನಿದ್ರೆಯಲ್ಲಿ ಕನಸಿನಂತೆ ಮತ್ತೆ ಮತ್ತೆ ಅದೇ‌ ಕಣ್ಮುಂದೆ ಬಂದು ಹಿಂಸಿಸುವಾಗ, ಕಣ್ತೆರೆದು ನೋಡಿದ ಸಂಜಯ್ ಗೆContinue reading “ಹೀಗೊಂದು ಅನುರಾಗ !! (ಭಾಗ – 10)”

ಹೀಗೊಂದು ಅನುರಾಗ !!(ಭಾಗ – 9)

ಸೂರ್ಯ ಬರುವ ಮೊದಲೇ ಮುಂಜಾನೆ 4 ಗಂಟೆಗೆ ಮನೆಯಿಂದ ಹೊರಟಿದ್ದ ಸಂಜಯ್, ಬೆಳಕು ಚೆಲ್ಲಲು ಶುರುವಾಗಿ ಬೆಳಗ್ಗೆ ಸುಮಾರು 7 ಗಂಟೆಯಾದರೂ ಅವನಿಗೆ ಯಾವ ಸುಳಿವೂ ಸಿಗಲಿಲ್ಲ. ರಸ್ತೆ ಬದಿಯಲ್ಲಿ ಗುಡ್ಡಗಳೂ ಇದ್ದವು, ಕಲ್ಲುಗಳೂ ಇದ್ದವು ಜೊತೆಗೆ ಕತ್ತಲೆಯೂ ಹಬ್ಬಿತ್ತು.. ಆದರೆ ಕತ್ತಲೆಕಲ್ಲುಗುಡ್ಡ ಮಾತ್ರ ಅವನಿಗೆ ಸಿಕ್ಕಿರಲ್ಲಿಲ್ಲ. ಹಾದಿಯಲ್ಲಿದ್ದ ಜನರನ್ನು ಹಾಗು ಅಂಗಡಿಗಳಲ್ಲಿ ಇದ್ದ ಹಿರಿಯರನ್ನು ವಿಚಾರಿಸುತ್ತಾ ಮುಂದೆ ಸಾಗಿದ್ದೇ ಬಂತು, ಯಾವ ಪ್ರಯೋಜನವೂ ಆಗಲಿಲ್ಲ.‌ ಸ್ನೇಹಾಳ‌ ಮೊಬೈಲ್ ‌ಗೆ ಎಷ್ಟೇ ಕಾಲ್ ಮಾಡಿದರು ಅದರಲ್ಲಿ ಯಾವContinue reading “ಹೀಗೊಂದು ಅನುರಾಗ !!(ಭಾಗ – 9)”

ಆಗಲಿ ಬದಲಾವಣೆ.. ಪುಸ್ತಕದಿಂದ

ಈ ಕೊರೋನಾದಿಂದ ಬದುಕು ಎಷ್ಟು ಬದಲಾಯಿತು ಎಂದರೆ, ಅದನ್ನು ಸರಿಪಡಿಸಿಕೊಳ್ಳಲು ಮತ್ತೆ ಆಗದಷ್ಟು. ಆದರೂ ಕಲಿತ ಪಾಠಗಳು ಮಾತ್ರ ಬೆಟ್ಟ ದಷ್ಟು. ಜಗತ್ತಿನ ಮೂಲೆ ಮೂಲೆಯಲ್ಲಿರುವ ಜನರನ್ನು ‌ಈ‌ ಕೊರೋನಾ ಧನಾತ್ಮಕ ಮತ್ತು ನಕಾರಾತ್ಮಕ ಎರಡು ರೀತಿಯಲ್ಲೂ ಕಾಡಿದೆ. ನಾನು ಈ ಕೊರೋನಾ ಎಂಬ ಕಗ್ಗತ್ತಲೆಗೆ ಸೇರದೇ ಮಹಾನಗರ ಬೆಂಗಳೂರಿನಿಂದ ಹಳ್ಳಿಯಲ್ಲಿರುವ ಸೂರಿಗೆ ಹೋಗಿ ಸುಮಾರು ತಿಂಗಳುಗಳೇ ಆಗಿತ್ತು. ಕೊರೋನಾ ತಣ್ಣಗಾದ ಮೇಲೆ, ಬೆಂಗಳೂರಿಗೆ ಬರದೇ ಸ್ವಲ್ಪ ಮನಃಶಾಂತಿ ಗಾಗಿ ಮೈಸೂರಿನಲ್ಲಿ ಒಂದೆರಡು ದಿನವನ್ನು ನೆಮ್ಮದಿಯಿಂದ ದೂಡಲು‌Continue reading “ಆಗಲಿ ಬದಲಾವಣೆ.. ಪುಸ್ತಕದಿಂದ”

ಹೀಗೊಂದು ಅನುರಾಗ !!(ಭಾಗ – 8)

ಸ್ನೇಹ ತನಗೆ ಒಂದು ಮಾತನ್ನೂ ಹೇಳದೆ ಹೀಗೇಕೆ ಊರಿಗೆ ಹೋದಳೆಂದು ಸಂಜಯ್ ಬೇಸರಗೊಂಡನು. ಎಷ್ಟೇ ಕಾಲ್ ಮಾಡಿದರೂ ಅದು ಸ್ನೇಹಾಳ ಮೊಬೈಲ್ಗೆ ತಲುಪಲಿಲ್ಲ. ಅವಳಿಗೆ ಪರಿಚಯ ಇರುವ ಎಲ್ಲರ ಬಳಿ ವಿಚಾರಿಸಿದರೂ… ಅವಳ ಬಗ್ಗೆ, ಅವಳ ಮನೆಯ ಬಗ್ಗೆ  ಯಾರೊಬ್ಬರಿಗೂ ಏನೂ ಗೊತ್ತಿರಲಿಲ್ಲ‌. ಮಾರನೆಯ ದಿನ‌‌ ಕಾಲೇಜಿನ ದಾಖಲೆಯಲ್ಲಿ ಸ್ನೇಹಾಳ ಊರಿನ ವಿವರವನ್ನು ಹಾಗೂ ಅವಳ ತಂದೆಯ ಹೆಸರನ್ನು ಸಂಜಯ್ ಪಡೆದುಕೊಂಡ.‌ ಕಾಲೇಜ್ ಮುಗಿಯಲು ಇನ್ನೂ   ನಾಲ್ಕೈದು ದಿನ ಇರುವಾಗಲೇ ಸಂಜಯ್ ತನ್ನ ಬಟ್ಟೆಗಳನ್ನೆಲ್ಲಾ ತುಂಬಿಕೊಳ್ಳುತ್ತಿರುವುದನ್ನು ಗಮನಿಸಿದContinue reading “ಹೀಗೊಂದು ಅನುರಾಗ !!(ಭಾಗ – 8)”