“ಬೆಂಕಿ‌ ಮನೆ ಕಳ್ಳರು” !! (ಭಾಗ – 7)

“ಬೆಂಕಿ‌ ಮನೆ ಕಳ್ಳರು” !!
( Part – 7 )

ಊರಿನ ಎಲ್ಲಾ ಕಡೆಯಲ್ಲೂ ಸುಮಾರು ಮೂರರಿಂದ ನಾಲ್ಕು ದಿನಗಳವರೆಗೆ ಹುಡುಕಾಟ ನಡೆಸಿದರೂ, ಎಲ್ಲಿಯು ಕೂಡ ಅಡಗಿಸಿಟ್ಟ ಅಡಿಕೆ ಪೋಲೀಸರ ಕಣ್ಣಿಗೆ ಬೀಳಲಿಲ್ಲ. ವಾಸವಿದ್ದ ಮನೆಗಳಿಗೆ ಸಂಬಂಧಿಸಿದ ಜಾಗವನ್ನು ಹೊರತುಪಡಿಸಿ, ಕಾಡಿನ ಸಮೇತ ಉಳಿದ ಬೇರೆ ಎಲ್ಲಾ ಕಡೆ ಹುಡುಕಾಟ ನಡೆಸಿದ್ದ ಪೋಲೀಸರಿಗೆ… ಒಂದು ಸಣ್ಣ ಅನುಮಾನದ ಸುಳಿವು ಸಹ ಸಿಕ್ಕಿರಲಿಲ್ಲ. ಇದನ್ನೆಲ್ಲಾ ಗಮನಿಸಿದ ಎಸ್.ಐ ಜಗದೀಶ್ ಗೆ, ಒಂದಂತ್ತೂ ಖಚಿತವಾಗಿತ್ತು. “ಊರಿನ ಹೊರಗಡೆಯ ಖಾಲಿ ಜಾಗದಲ್ಲಿ ಎಲ್ಲಿಯೂ ಅಡಗಿಸಿಟ್ಟ ಅಡಿಕೆ ಸಿಗಲಿಲ್ಲ ಎಂದರೆ.. ಖಂಡಿತವಾಗಿಯೂ ಆ ಅಡಿಕೆ ಊರಿನ ಯಾರಾದರೊಬ್ಬರ ಮನೆಯಲ್ಲೋ ಅಥವಾ ತೋಟದಲ್ಲೋ ಅಡಗಿಸಿ ಇಟ್ಟಿರುತ್ತಾರೆ..” ಎಂದು ತಮ್ಮ ತನಿಖೆಯ ತಂಡಕ್ಕೆ ಹೇಳಿದರು. ಆಗ ಅಲ್ಲಿದ್ದ ಉಳಿದ ಪೋಲೀಸರು, ಹೀಗೂ ಆಗಿರಬಹುದು !! ಎಂದು ಎಸ್.ಐ ಮಾತಿಗೆ ದನಿಗೂಡಿಸಿದರು.

ಊರಿನ ಕೆಲವು ಚಿಕ್ಕ ಪುಟ್ಟ ಮನೆಗಳಲ್ಲಿ ಹುಡುಕಾಡಲು ಯಾವುದೇ ತೊಂದರೆ ಆಗದಿದ್ದರೂ, ದೊಡ್ಡ ದೊಡ್ಡ ಪ್ರಭಾವಿ ವ್ಯಕ್ತಿಗಳ ಮನೆಯಲ್ಲಿ ಅವರ ತೋಟದಲ್ಲಿ ಹುಡುಕಾಟ ನಡೆಸಲು ಮೇಲಾಧಿಕಾರಿಗಳಿಂದ ಒಪ್ಪಿಗೆ ಪತ್ರದ ಅವಶ್ಯಕತೆ ಇತ್ತು. ಆದರೆ ಈ ರೀತಿಯಾಗಿ ತನಿಖೆಕೆ ಒಪ್ಪಿಗೆ ಸಿಗಲು ಸರಿಯಾದ ಕಾರಣ, ಸಾಕ್ಷ್ಯಾಧಾರಗಳು  ಎಸ್.ಐ ಅವರ ಬಳಿ‌ ಇರಲಿಲ್ಲ. ಅಡಿಕೆಯನ್ನು ಊರಿನ‌ ಒಳಗಡೆಯೇ ಅಡಗಿಸಿಟ್ಟಿರಬಹುದು ಎಂಬುದು‌‌ ಎಸ್.ಐ ಅವರ ಆಲೋಚನೆ ಆಗಿತ್ತೇ ಹೊರತು, ಅದಕ್ಕೆ ಬಲವಾದ ಸಾಕ್ಷಿಗಳು ಇರಲಿಲ್ಲ. ಮೇಲಾಧಿಕಾರಿಗಳ ಒಪ್ಪಿಗೆ ಪಡೆಯಲಾಗದೇ, ಊರಿನ ಮನೆಗಳು ಮತ್ತು ತೋಟಗಳಲ್ಲಿ ಒಂದಿಂಚ್ಚೂ ಬಿಡದೇ ಹುಡುಕಾಟ ನಡೆಸಬೇಕಿದ್ದ ಯೋಜನೆ ಅಲ್ಲಿಗೇ ನಿಂತು ಹೋಯಿತು.

ಎಸ್.ಐ ಮತ್ತು ಹೆಡ್ ಕಾನ್ಸ್‌ಟೇಬಲ್ ಇಬ್ಬರೂ ಒಂದು ವಾರಗಳ ಕಾಲ ಅಲೆದಾಡಿ, ಮೇಲಾಧಿಕಾರಿಗಳಿಗೆ ಈ ಹಿಂದೆ ಕಳ್ಳತನವಾಗಿದ್ದ‌ ಗಜಕೋಲು ಬಂಗಲೆಯ ಹೊನ್ನಪ್ಪ ನಾಯ್ಕ ಮತ್ತು ಕತ್ತಲು ಬ್ಯಾಣದ ದೇವೇಂದ್ರಣ್ಣ ಇವರುಗಳಿಂದಲೇ ಎಂ.ಎಲ್.ಎ ಮತ್ತು ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ ಎಲ್ಲರ ಮನೆಯಲ್ಲೂ ತನಿಖೆ ನಡೆಸಲು ಒಪ್ಪಿಗೆ ಪಡೆದು, ಒಪ್ಪಿಗೆ ಪತ್ರದ ಸಮೇತ ಸ್ಟೇಷನ್ ಗೆ ಬಂದರು. ಈ ವಿಷಯ ಊರಿನಲ್ಲೆಲ್ಲಾ ದೊಡ್ಡದಾಗಿ ಪ್ರಚಾರ ಪಡೆಯಿತು. ಕಾಫಿ ಕೃಷ್ಣಪ್ಪನ ಹೋಟೆಲ್ ನಲ್ಲಿ ಈ ತನಿಖೆ ಬಿಸಿ ಬಿಸಿ ಚರ್ಚೆಯ ವಿಷಯವಾಯಿತು. ಎಲ್ಲರಿಗೂ ತಿಳಿದಿತ್ತು… “ತನಿಖೆ ಒಮ್ಮೆ ಆರಂಭಿಸಿದರೆ ಪೋಲೀಸರು ಎಲ್ಲರನ್ನೂ ಎಲ್ಲವನ್ನೂ ಹೊರಗೆಳೆಯುತ್ತಾರೆಂದು”.

ಇದೇ ಸಮಯಕ್ಕೆ, ಊರಿನಲ್ಲಿ ಆಲೆಮನೆ ಶುರುವಾಗಿತ್ತು. ಹಿಂದಿನಂತೆ ಇವಾಗ ಯಾವುದೇ ಕೋಣಗಳ ಸಹಾಯ ಜನರಿಗೆ ಬೇಕಿರಲಿಲ್ಲ. ಇಂಧನ ಚಾಲಿತ ಕ್ರಶರ್ ಇದ್ದಲ್ಲಿಗೇ ಕಬ್ಬುಗಳನ್ನು ತಂದಿಟ್ಟರೆ, ಆಲೆಮನೆ ಶುರುವಾಗಿ ಮುಗಿಯುವುದೇ ಗೊತ್ತಾಗುತ್ತಿರಲಿಲ್ಲ. ಅಜ್ಜನ ಕಾಲದಂತೆ ರಾತ್ರಿಯಿಡೀ ಕೋಣಗಳ ಸಮೇತ ಓಡುತ್ತಾ ಕುಣಿಯುವ ಕಣ್ಣಿಗೆ ಹಬ್ಬ ಎನಿಸುವ ಯಾವ ದೃಶ್ಯವೂ ಈಗ ಎಲ್ಲಿಯೂ ಇರಲಿಕ್ಕಿಲ್ಲ. ಊರಿನ ಎಲ್ಲಾ ಕಬ್ಬು ಬೆಳೆಗಾರರಲ್ಲಿ… ಹಲವರು ಕ್ರಶರ್ ಇದ್ದ ಕಡೆಗೆ ಕಬ್ಬುಗಳ ರಾಶಿಯನ್ನು ‌ತಂದು ಸುರಿಯುತ್ತಿದ್ದರೆ, ಕೆಲವರು ಮಾತ್ರ ಯಂತ್ರವನ್ನು ಮನೆಗೇ ಕರೆಸಿಕೊಳ್ಳುತ್ತಿದ್ದರು. ಇದೆಲ್ಲವೂ ಪ್ರತೀ ವರ್ಷ ಸಾಮಾನ್ಯವಾಗಿದ್ದ ವಿಚಾರ‌ ಆದರೆ ಈ ಭಾರಿ ಒಂದು ಹೊಸ ವಿಷಯ ನಡೆದಿತ್ತು.

ಈ ಹಿಂದೆಯೇ ಎರಡು ಬಾರಿ ಕಳ್ಳತನವಾದ ನಂತರ, “ಊರಿಂದಾಚೆಗೆ ಅಡಿಕೆ ಸಾಗಿಸುವುದಿದ್ದರೆ ಪೋಲೀಸರ ಗಮನಕ್ಕೆ ತಂದು ಆನಂತರ ಪೋಲೀಸರ ಸಹಾಯದಿಂದಲೇ ಸಾಗಿಸಬೇಕೆಂದು” ಎಸ್.ಐ ಊರಿನ ಜನತೆಗೆ ತಿಳಿಸಿದ್ದರು.

ಇನ್ನೇನು ನಾಳೆ ಬೆಳಗಾದರೆ, ಪೋಲೀಸರು ಪ್ರತಿ ಮನೆ ಮನೆಯಲ್ಲೂ ತೋಟದಲ್ಲೂ ತನಿಖೆ ನಡೆಸಲು ಎಲ್ಲಾ ರೀತಿಯ  ಚರ್ಚೆಯಲ್ಲಿ ತೊಡಗಿದ್ದರು. ಈ ಸಂಜೆಯಲ್ಲಿ ಒಂದು ಕಡೆ ಎಸ್.ಐ ನಾಳಿನ ತನಿಖೆಗೆ ಯೋಜನೆ ಸಿದ್ದಪಡಿಸುತ್ತಿದ್ದರೆ, ಊರಿನ ಕೆಲವು ಕಡೆ ಆಲೆಮನೆ ಜೋರಾಗಿಯೇ ನಡೆಯಿತ್ತಿತ್ತು. “ಇನ್ನೊಂದು ಕಡೆ ಕದ್ದು ಮುಚ್ಚಿಟ್ಟಿದ್ದ ಅಡಿಕೆಯನ್ನು ಊರಿನಾಚೆಗೆ ಸಾಗಿಸಲು” ಕಳ್ಳತನದ ಹಿಂದಿದ್ದ ಊರಿನ ದೊಡ್ಡ ತಲೆಯೊಂದು ನಾಳೆ ಬೆಳಗಾಗುವಷ್ಟರಲ್ಲಿ ಅಡಿಕೆ ಸಾಗಿಸಬೇಕೆಂಬ ಯೋಚನೆಯಲ್ಲಿತ್ತು.

ರಾತ್ರಿಯ ಕತ್ತಲು ಊರಿನ ತುಂಬೆಲ್ಲಾ ಆವರಿಸಿ, ಸಮಯ ಬೆಳಗಿನ ಜಾವ 2 ಗಂಟೆ ಅಗಿತ್ತು. ಹಿಂದಿನ ರಾತ್ರಿ ಗಡಿಬಿಡಿಯಲ್ಲಿ ಹೋಟೆಲ್ ಅನ್ನು ಸರಿಯಾಗಿ ಬೀಗ ಹಾಕದೇ ಕಾಫಿ ಕೃಷ್ಣಪ್ಪ ಮನೆಗೆ ಬಂದಿದ್ದನು. ಇದು ನೆನಪಾದ‌ ಕೂಡಲೆ, ಮನೆಯಲ್ಲಿ ಮಲಗಿದ್ದ ಕೃಷ್ಣಪ್ಪ ತಡಮಾಡದೇ ಎದ್ದು ಹೋಟೆಲ್ ಕಡೆಗೆ ಬೈಕ್ ನಲ್ಲಿ ಹೊರಟಿರುವಾಗ.. ದಾರಿ ಮಧ್ಯೆ ಎರಡು ಟ್ರಾಕ್ಟರ್ ಕಬ್ಬನ್ನು ತುಂಬಿಕೊಂಡು ಸದ್ದಿಲ್ಲದೇ ನಿಧಾನವಾಗಿ ಊರಿನ‌ ಹೊರಗೆ ಹೊರಟಿತ್ತು. ಕತ್ತಲೆಯ ನಡುವೆ ಡ್ರೈವರ್ ಗಳು ಯಾರೆಂದು ಕೃಷ್ಣಪ್ಪನಿಗೆ ಗೊತ್ತಾಗಲಿಲ್ಲ ಆದರೆ ಕಬ್ಬು ತುಂಬಿದ್ದು ಮಾತ್ರ ಖಚಿತವಾಗಿತ್ತು.

ಬೈಕ್ ನಿಲ್ಲಿಸದೇ ಸ್ವಲ್ಪ ದೂರ ಬಂದ ಕಾಫಿ ಕೃಷ್ಣಪ್ಪ ಯೋಚಿಸಿದನು. “ಕಬ್ಬನ್ನು ಯಾರೊಬ್ಬರೂ ಊರಿನಾಚೆಗೆ ಸಾಗಿಸುವುದಿಲ್ಲ. ಈ ರಾತ್ರಿಯಲ್ಲಿ ಎರಡು ಟ್ರಾಕ್ಟರ್ ಪೂರ್ತಿಯಾಗಿ ಕಬ್ಬಿನ ಲೋಡ್ ಸದ್ದಿಲ್ಲದೇ ಊರಿಂದಾಚೆಗೆ ಹೊರಟಿರುವುದಾದರು ಎಲ್ಲಿಗೆ ??” ಎಂದುಕೊಳ್ಳುತ್ತಾ ಅನುಮಾನಗೊಂಡ ಕೃಷ್ಣಪ್ಪ ಮರುಕ್ಷಣವೇ ಬೈಕ್ ನಲ್ಲಿ ಎಸ್.ಐ ಜಗದೀಶ್ ವಾಸವಿದ್ದ ಮನೆ ಕಡೆಗೆ ಹೊರಟನು.

ಎಸ್‌.ಐ ಮನೆಗೆ ತೆರಳಿದ ಕೃಷ್ಣಪ್ಪ..‌ ಅನುಮಾನಾಸ್ಪದವಾದ ಕಬ್ಬಿನ ಲೋಡ್  ಬಗೆಗಿನ ವಿಷಯ ಮುಟ್ಟಿಸಿದನು. ಒಂದು ಕ್ಷಣವೂ ವ್ಯರ್ಥ ಮಾಡದ ಎಸ್.ಐ ತಮ್ಮ ಬೈಕ್ ನಲ್ಲಿಯೇ ಟ್ರಾಕ್ಟರ್ ಹೋಗುತ್ತಿದ್ದ ಊರಿನಾಚೆಗೆ ತಲುಪಿಸುವ ರಸ್ತೆಯ ಕಡೆಗೆ ಹೊರಟರು. ಜೊತೆಗೆ ಹೆಡ್ ಕಾನ್ಸ್‌ಟೇಬಲ್ ಮತ್ತು ಸ್ಟೇಷನ್ ಗೆ ಕರೆ ಮಾಡಿ ಊರಿನಾಚೆಗೆ ತಲುಪುವ ರಸ್ತೆಗೆ ಬರಲು ಹೇಳಿದರು. ಕೆಲವೇ ನಿಮಿಷಗಳಲ್ಲಿ ಎಸ್.ಐ ಜಗದೀಶ್ ಅವರ ಬೈಕ್ ಟ್ರಾಕ್ಟರ್ ಹೋಗುತ್ತಿದ್ದ ದಾರಿಗೆ ತಲುಪಿತ್ತು‌. ಗೊತ್ತಾಗದ ಹಾಗೆ ಟ್ರಾಕ್ಟರ್ ನ ಸ್ವಲ್ಪ ಹಿಂದೆ ಬೈಕ್ ನಿಲ್ಲಿಸಿ, ಸ್ಟೇಷನ್ ನ ಜೀಪ್ ಮತ್ತು ತಮ್ಮ ತನಿಖೆ ತಂಡಕ್ಕೆ ಅದೇ ದಾರಿಯಲ್ಲಿ ಬರಲು ಹೇಳಿದರು‌‌. ನಂತರ ಎಲ್ಲರೂ ಸೇರಿ ಎರಡೂ ಟ್ರಾಕ್ಟರ್ ಅನ್ನು ರಸ್ತೆಯಲ್ಲೇ ನಿಲ್ಲಿಸಿದರು. ಎರಡು ಟ್ರಾಕ್ಟರ್ ನಲ್ಲಿ ಇಬ್ಬರೂ ಡ್ರೈವರ್‌ ಗಳು ಬಿಟ್ಟರೆ ಬೇರೆ ಯಾರೂ ಇರಲಿಲ್ಲ‌.‌

ಪೋಲೀಸರನ್ನು ನೋಡಿ ಓಡಲು ಯತ್ನಿಸಿದ್ದ ಇಬ್ಬರೂ ಡ್ರೈವರ್‌ ಗಳನ್ನು ಹಿಡಿದು ನಿಲ್ಲಿಸಿದರು‌‌. ಅಲ್ಲೇ ವಿಚಾರಿಸಿದ ಎಸ್.ಐ ಮತ್ತು ಹೆಡ್ ಕಾನ್ಸ್‌ಟೇಬಲ್ ಗೆ ಇವರ ಮೇಲೆ ಇನ್ನೂ ಅನುಮಾನ ಹೆಚ್ಚಾಯಿತು. ರಸ್ತೆ ನಡುವಲ್ಲೇ ಎಸ್.ಐ ಕೊಟ್ಟ ಬಲವಾದ ಏಟಿಗೆ… ಅಲ್ಲಿದ್ದ ಇಬ್ಬರೂ ಡೈವರ್ ಗಳು ಹೆದರಿ ಬಾಯ್ಬಿಟ್ಟರು. “ಸರ್.. ನಮಗೆ ಇದಕ್ಕೆ ಸಂಬಂಧವೇ ಇಲ್ಲಾ. ನಮ್ಮದು ದೂರದ ಊರು. ಯಾರೋ ಇಬ್ಬರು ಮೊನ್ನೆ ನಮ್ಮ ಊರಿಗೆ ಬಂದು, ದುಡ್ಡು ಕೊಟ್ಟು ಈ ಊರಿನ ವಿಳಾಸ ತಿಳಿಸಿ ಅಲ್ಲಿದ್ದ ಟ್ರಾಕ್ಟರ್ ಅನ್ನು ಊರಿನಾಚೆಗೆ ತರಲು ಹೇಳಿದ್ದರು. ಸಂಜೆ ನಾವು ರೈಲಿನಿಂದ ಇಳಿಯುತ್ತಿದ್ದಂತೆ ಕಬ್ಬಿನ ಲೋಡ್ ತುಂಬಿದ್ದ ಮೂರು ಟ್ರಾಕ್ಟರ್ ಇದ್ದ ಸ್ಥಳಕ್ಕೆ ಕರೆದುಕೊಂಡು ಹೋಗಿ ರಾತ್ರಿ 3 ಗಂಟೆಯ ಹಾಗೆ ಊರಿನ ಹೊರಗೆ ಟ್ರಾಕ್ಟರ್ ಅನ್ನು ತಂದು ಬಿಡಲು ಹೇಳಿದರು‌. ದುಡ್ಡಿನ ಆಸೆಗೆ ಈ ರೀತಿಯಾಗಿ ಮಾಡಿದೆವು..” ಎಂದು ಡ್ರೈವರ್‌ ಗಳು ಹೇಳಿದಾಗ ಎಸ್.ಐ ಗೆ ನಿಜವೆನಿಸಿತು.

ಅಂತೂ ಕೊನೆಗೂ ಕಳ್ಳರು ತಾವು ಹೊರಬರದೇ, ತಾವು ಯಾರೆಂದು ಗೊತ್ತಾಗದ ಹಾಗೆ ಕೆಲಸ ಮುಗಿಸಲು ಯೋಜನೆ ರೂಪಿಸಿದ್ದರು. ಡ್ರೈವರ್‌ ಗಳ ಮಾತು ಕೇಳಿ ಸ್ವಲ್ಪ ಸಮಯ ಯೋಚಿಸದ ಎಸ್.ಐ.. “ಅಲ್ಲಿದ್ದ ಪೋಲೀಸರಿಗೆ ಟ್ರಾಕ್ಟರ್ ನಲ್ಲಿ ಎತ್ತರಕ್ಕೆ ತುಂಬಿದ್ದ ಕಬ್ಬಿನ ಲೋಡ್ ಅನ್ನು ಪರಿಶೀಲಿಸಿಲು ಹೇಳಿದರು”.  ಸಾಮನ್ಯವಾಗಿ ಕಬ್ಬಿನ ಹೊರೆಯನ್ನು ತುಂಬುವ ಹಾಗೆ ತುಂಬಿರಲಿಲ್ಲ‌. ಅಲ್ಲಿದ್ದ ಯಾವುದೇ ಹೊರೆಯನ್ನು ಅಲುಗಾಡಿಸಲೂ ಸಹ ಆಗುತ್ತಿರಲಿಲ್ಲ.‌ ಟ್ರಾಕ್ಟರ್ ನಲ್ಲಿದ್ದ ಅಷ್ಟೂ ಕಬ್ಬನ್ನು ಒಂದು ದೊಡ್ಡ ಮೂಟೆಯ ಹಾಗೆ ಒಟ್ಟು ಸೇರಿಸಿ ಕಟ್ಟಿದ್ದರು.‌

ಎಸ್. ಐ ಜಗದೀಶ್, ಡ್ರೈವರ್‌ ಗಳಿಗೆ ಹೇಳಿ ಟ್ರಾಕ್ಟರ್ ನಿಂದ ಕಬ್ಬನ್ನು ಅನ್ ಲೋಡ್ ಮಾಡಲು‌ ಹೇಳಿದರು.‌ ಕಬ್ಬು ಟ್ರಾಕ್ಟರ್ ನಿಂದ ಕೆಳಗಿ ಜಾರಿದಾಗಲೂ ಕಬ್ಬಿನ ಹೊರೆ ಬಿಡಿಸಿಕೊಳ್ಳಲಿಲ್ಲ. ಬಿಗಿಯಾಗಿ ಕಟ್ಟಿದ್ದ ಅಷ್ಟೂ ಕಬ್ಬು ಒಂದು ದೊಡ್ಡ ಹೊರೆಯಂತೆ ನೆಲಕ್ಕೆ ಜಾರಿತು‌. ದಪ್ಪ ಹಗ್ಗದಿಂದ ಬಿಗಿಯಾಗಿ ಕಟ್ಟಿದ್ದ ಕಬ್ಬಿನ ದೊಡ್ಡ ಹೊರೆಯನ್ನು ರಸ್ತೆ ಮಧ್ಯೆಯೇ ಬಿಚ್ಚಲು ಶುರುಮಾಡಿದರು.

ಅದಾಗಲೇ ರಾತ್ರಿ ಕಳೆದು ಬೆಳಗಾಗಲು ಶುರುವಾಗಿತ್ತು. ಎಲ್ಲಾ ಕಬ್ಬುಗಳನ್ನು ಹೊರತೆಗೆದು ನೋಡಿದರೆ…. ಪೋಲೀಸರ ಸಮೇತ ಡ್ರೈವರ್‌ ಗಳಿಗೂ ಆಘಾತ ಮತ್ತು ಅಚ್ಚರಿಯಾಗಿತ್ತು‌. “ದೊಡ್ಡ ಕಬ್ಬಿನ ಹೊರೆಯ ನಡುವೆ ಅಡಿಕೆ ಮೂಟೆಗಳು ಇದ್ದವು !!”. ಗಜಕೋಲು ಬಂಗಲೆಯ ಹೊನ್ನಪ್ಪ ನಾಯ್ಕನ ಮನೆಯಲ್ಲಿ ಮಾರಾಟ ಮಾಡಲು ಮೂಟೆಕಟ್ಟಿ ಇಟ್ಟಾಗ ಕಳ್ಳತನವಾಗಿದ್ದ ಅಡಿಕೆ ಮೂಟೆಗಳು ಈ ಎರಡು ಟ್ರಾಕ್ಟರ್ ನಲ್ಲಿ ಪತ್ತೆಯಾದವು.

ಎಸ್.ಐ ಅವರ ಬಳಿಗೆ ಬಂದ ಹೆಡ್ ಕಾನ್ಸ್‌ಟೇಬಲ್ ಈರಪ್ಪಣ್ಣ “ಸರ್‌‌‌..‌ ನಿಮಗೆ ಮೊದಲ‌ ಗೆಲುವು ಸಿಕ್ಕೇ ಬಿಟ್ಟಿತು ಸರ್” ಎಂದನು. ಇದಕ್ಕೆ ಉತ್ತರಿಸಿದ ಎಸ್.ಐ ಜಗದೀಶ್.. “ಇದಿನ್ನೂ ಆರಂಭ ಅಷ್ಟೇ. ಈ ಕಳ್ಳತನದ ಹಿಂದೆ ಇರುವವರು ಯಾರೆಂದು ಹುಡುಕಿ ಅವರನ್ನು ಹಿಡಿದ ಮೇಲೆಯೇ ನಮಗೆ ನಿಜವಾದ ಗೆಲುವು ಸಿಗುವುದು !!” ಎಂದು ಎಸ್‌.ಐ ಹೇಳಿದರು.

( ಮುಂದುವರೆಯುತ್ತದೆ…)

                                        — ದೀಕ್ಷಿತ್ ದಾಸ್
                                            ಮುಂಬಾರು, ಹೊಸನಗರ

Published by Deekshith Das..

ಒಂದು ಬರಹ ಲೇಖನಿಯಿಂದ ಗೀಚಲ್ಪಡುವ ಮೊದಲು, ಬರಹಗಾರನ ಎದೆಯಾಳದ ಕಲ್ಪನೆಯ ಕಡಲಿನಲ್ಲಿ‌.. ಅದಾಗಲೇ ಅಲೆಗಳಂತೆ ಚಿತ್ರಿಸಲ್ಪಟ್ಟರೂ, ಆ ಬರಹವು ಸ್ಪಷ್ಟವಾಗಿ ಗೋಚರಿಸುವುದು ಎದೆಯಾಳದಿಂದ ಜಿಗಿದು ಹರಿತವಾದ ಲೇಖನಿಯ ಕೆಳಗಿರುವ "ಬಿಳಿಯ ಹಾಳೆಯ ಮೇಲೆ.."

2 thoughts on ““ಬೆಂಕಿ‌ ಮನೆ ಕಳ್ಳರು” !! (ಭಾಗ – 7)

 1. ಕಥೆ ತುಂಬಾ ಚೆನ್ನಾಗಿದೆ 💐
  ಕುತೂಹಲ ಸೃಷ್ಟಿಸಿದೆ..
  ಭಾಗ ೮ ಬೇಗ ಬರಲಿ..

  Liked by 1 person

  1. ತುಂಬಾನೆ ಧನ್ಯವಾದಗಳು.. ಎಂಟನೇ ಭಾಗ ಕೂಡ ಬಿಡುಗಡೆಯಾಗಿದೆ‌.. 💐 ನಿಮ್ಮ ಬೆಂಬಲ ಹೀಗೆಯೇ ಇರಲಿ

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: