“ನೀವೂ… ಬದಲಾಗಿ !!”

“ನೀವೂ.. ಬದಲಾಗಿ !!”

ಕೆಲವು ಸನ್ನಿವೇಶಗಳು ನಮ್ಮ‌ ನಿಮ್ಮೆಲ್ಲರನ್ನೂ ಬದಲಾಯಿಸಿ ಬಿಡುತ್ತದೆ. ಇದರ ಜೊತೆಗೆ ಕೆಲವೊಂದು ಸಮಯವೂ ನಮ್ಮನ್ನು ಬದಲಾಯಿಸುತ್ತದೆ. ಕಟು ಸತ್ಯವೆಂದರೆ ಬದಲಾವಣೆಯ ಮತ್ತೊಂದು ವಿಷಯವೇ ಜನರು.

ಬದಲಾವಣೆಗೆ ಕಾರಣ ತುಂಬಾನೆ ಇದೆ‌. ಇಲ್ಲಿ ಬದಲಾಗುವ ಮುನ್ನ ನಮಗೆ ಯೋಚಿಸಲು ಅವಕಾಶ ಸಿಗುವುದು ಎಷ್ಟು ಸತ್ಯವೋ, ಅಷ್ಟೇ ಸತ್ಯ ಬದಲಾದ ನಂತರ ಸರಿ ಪಡಿಸಿಕೊಳ್ಳುವುದಕ್ಕೂ ಅವಕಾಶ ಇರುತ್ತದೆ ಎನ್ನುವುದು. ಕೆಲವು ಸನ್ನಿವೇಶಕ್ಕೆ ನಾವು ಕೈಗೊಂಬೆ ಆದರೆ, ಇನ್ನೊಂದು ಕಡೆ ನಮ್ಮದೇ ಆದ ಸಮಯ ನಮ್ಮನ್ನೇ ಆಟವಾಡಿಸಿ‌ ಬೀಳಿಸಿ ಬಿಡುತ್ತದೆ. ನಂತರವೇ ಜನರು !! ಜನರನ್ನು ನಂಬಿದಾಗ ಅವರಲ್ಲಿನ ಬದಲಾವಣೆ ಸಹಿಸದೇ ನೀವು ಬದಲಾಗುವಂತಾದರೆ.. ನೀವು ಜನರನ್ನು ನಂಬದೇ ಇದ್ದಾಗ‌‌.‌. ಎಲ್ಲರಿಂದಲೂ ದೂರಾಗುತ್ತೀರಿ. ಆಗಲೇ ಏಕಾಂಗಿ ಜೀವನದ ಕಡೆಗೆ ನಿಮ್ಮ ಯಾತ್ರೆ ಸಾಗುತ್ತದೆ.

ಈ ಮೂರು ವಿಷಯ…
ಸನ್ನಿವೇಶ
ಸಮಯ
ಜನರು !!

ಬನ್ನಿ… ಇದರಿಂದ ನಮ್ಮ ನಿಮ್ಮಲ್ಲಾದ ಬದಲಾವಣೆಗಳನ್ನು ಹುಡುಕಿ ಸರಿಪಡಿಸಿಕೊಳ್ಳೋಣ. ಒಳ್ಳೆಯ ಬದಲಾವಣೆಗೆ ನನ್ನ ಬೆಂಬಲವೂ ಇದೇ, ಜೊತೆಗೆ ಇನ್ನೂ ಒಳ್ಳೆಯದಾಗಲಿ ಎನ್ನುವ ಆಶಯವೂ ಇದೆ‌. ಆದರೆ ??? ಕೆಟ್ಟ ಬದಲಾವಣೆಗೆ ಅದರಿಂದ ಒಳ್ಳೆಯ ಕಡೆಗೆ ಬದಲಾಗಿ ಎನ್ನುವ ಕೋರಿಕೆಯೂ ಇದೆ. ನಿಮ್ಮಲ್ಲಾದ ಬದಲಾವಣೆ ಮೊದಲು ಪರಿಣಾಮ ಬೀರುವುದೇ ನಿಮಗೆ ಹತ್ತಿರ ಇದ್ದವರಿಗೆ. ಮೊದಲನೆಯದು ಸದಾ ನೀಮ್ಮ ಜೊತೆ ಇರುವ‌ ನಿಮ್ಮದೇ ಮನಸ್ಸು. ನಂತರದ್ದೂ ನೀವು ಹೆಚ್ಚು ಸಮಯ ಕೆಳೆಯುವ ನಿಮ್ಮವರು. ನಿಮ್ಮ ಕುಟುಂಬದವರು ಸ್ನೇಹಿತರು ಸಂಗಾತಿ ಮಕ್ಕಳು ಹೀಗೆ…… ನಿಮ್ಮ ಮನಸ್ಸೂ ಕೂಡ ಕೆಲವೊಮ್ಮೆ ಗಮನಿಸಲಾಗದ್ದನ್ನು‌, ನೀವು ಬದಲಾಗುತ್ತಿರುವಾಗ ನಿಮಗೆ ಅತ್ಯಂತ ಹತ್ತಿರ ಇದ್ದವರು ಗಮನಿಸುತ್ತಾರೆ. ಅವರ ಗಮನಕ್ಕೆ ಬಂದ‌ ಮೇಲೆ ನಿಮ್ಮ ತನಕ ಬರದೇ ಇರದು‌.

ಆಗಬೇಕಾದ ಬದಲಾವಣೆ ಒಳ್ಳೆಯದ್ದೇ ಇದ್ದರೇ ನೀವೂ ಬದಲಾಗಿ !!.  ಈಗಾಗಲೇ ಕೆಟ್ಟ ರೀತಿಯಲ್ಲಿ ಬದಲಾಗಿದ್ದರೆ, ನೀವೂ ಬದಲಾಗಿ‌… ಒಳ್ಳೆಯ ಕಡೆಗೆ !!

— ದೀಕ್ಷಿತ್ ದಾಸ್

Published by Deekshith Das..

ಒಂದು ಬರಹ ಲೇಖನಿಯಿಂದ ಗೀಚಲ್ಪಡುವ ಮೊದಲು, ಬರಹಗಾರನ ಎದೆಯಾಳದ ಕಲ್ಪನೆಯ ಕಡಲಿನಲ್ಲಿ‌.. ಅದಾಗಲೇ ಅಲೆಗಳಂತೆ ಚಿತ್ರಿಸಲ್ಪಟ್ಟರೂ, ಆ ಬರಹವು ಸ್ಪಷ್ಟವಾಗಿ ಗೋಚರಿಸುವುದು ಎದೆಯಾಳದಿಂದ ಜಿಗಿದು ಹರಿತವಾದ ಲೇಖನಿಯ ಕೆಳಗಿರುವ "ಬಿಳಿಯ ಹಾಳೆಯ ಮೇಲೆ.."

10 thoughts on ““ನೀವೂ… ಬದಲಾಗಿ !!”

 1. ಬದಲಾವಣೆ ನಮ್ಮಿಂದ ಶುರುವಾಗಿ ಎಲ್ಲೆಡೆಯೂ ಮುಟ್ಟಲಿ …
  ಬೆಂಕಿ ಹತ್ತಲು ಚಿಕ್ಕದೊಂದು ಕಿಡಿ ಸಾಕು ,..
  ಆ ಕಿಡಿ ಇದೇ ಆಗಲಿ ಎಂದು ಆಶಿಸುವೆ..
  Going great bro 😊..

  Liked by 1 person

  1. ಧನ್ಯವಾದಗಳು..
   ನಿಮ್ಮ ಪ್ರೀತಿ ಪ್ರೋತ್ಸಾಹವೇ ನಮ್ಮ ಸಾಲು ಸಾಲು ಬರಹಗಳು.. 💐💐
   ನಿಮ್ಮ ಅಭಿಪ್ರಾಯಕ್ಕೆ ನನ್ನ ಅನಂತ ಅನಂತ ಧನ್ಯವಾದಗಳು.. 💐

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: