ಹೀಗೊಂದು ಅನುರಾಗ !!(ಭಾಗ 13 – The Last Episode)

“ಹೀಗೊಂದು ಅನುರಾಗ !!”
Part – 13 (Last Episode)

ಉಸಿರು ನಿಲ್ಲಿಸಿದವಳು ಮತ್ತೆ ಮಾತನಾಡಿದ್ದನ್ನು ಕೇಳಿಸಿಕೊಂಡ ಸ್ನೇಹಾಳಿಗೆ ಗಾಬರಿ ಹೆಚ್ಚಾಗಿ, ತನ್ನ ಸ್ನೇಹಿತೆಯ ಧ್ವನಿಯ ಆನಂದವನ್ನ ಅನುಭವಿಸುವುದನ್ನೇ ಮರೆತಳು. ಆ ಕಡೆಯಿಂದ ಮೊಬೈಲ್ ನಲ್ಲಿ ಮತ್ತದೇ ಧ್ವನಿ, ಸಂಗೀತಾ ಮತ್ತೊಮ್ಮೆ ಅದೇ ಮಾತನ್ನು ಹೇಳಿದಳು !! “ಸ್ನೇಹಾ ಹೇಗಿದ್ದೀಯಾ ನಾನು ಸಂಗೀತಾ…..”‌ ಎಂದು.
ಕೇಳಿಸಿಕೊಂಡ ಸ್ನೇಹಾ ಮೆಲ್ಲಗಿನ ಧ್ವನಿಯಲ್ಲಿ ಸಂಗೀತಾ,‌ ಎಂದು ಹೇಳುತ್ತಲೇ ಜೋರಾಗಿ ಅತ್ತಳು. ಸಂಗೀತಾ ಎಂದು ಮಾತಿನಲ್ಲೇ ಮುದ್ದಿಸುತ್ತಾ ಅಳು ಮತ್ತು ನಗು ಒಂದಾಗಿ ಆ ಸುಂದರ ಕ್ಷಣವನ್ನು ಸ್ನೇಹಾಳ ರೀತಿಯೇ ಅಲ್ಲಿ ಸಂಗೀತಾ ಕೂಡ ತನ್ನ ಸ್ನೇಹಿತೆಯ ಮಾತನ್ನು ಕೇಳಿಸಿಕೊಂಡು ನೆಮ್ಮದಿಯಿಂದ ಆ ಕ್ಷಣದಲ್ಲಿ ಭಾಗಿಯಾದಳು.‌

ಸ್ನೇಹಾ ಮೊಬೈಲ್ ನಲ್ಲಿ ಸಂಗೀತಾ ಎನ್ನುತ್ತಾ ಕಣ್ಣೀರು ಹಾಕುತ್ತಲೇ, ಖುಷಿಯ ವ್ಯಕ್ತಪಡಿಸುವಿಕೆಯನ್ನು ನೋಡಿದ ಸಂಜಯ್ ಗೆ ಗೊತ್ತಾಗದೇ ಇರುವುದಕ್ಕೆ ಏನೂ ಉಳಿದಿರಲಿಲ್ಲ.‌ ಸಂಜಯ್ ನ ಕಡೆಗೆ‌ ನೋಡಿದ ಸ್ನೇಹಾಳಿಗೆ ಆ ಕ್ಷಣವೇ ನೆನಪಾಗಿತ್ತು ತನ್ನ ಸ್ನೇಹಿತೆಗೆ ಕೊಟ್ಟ ಮಾತು…. !! ತಕ್ಷಣವೇ ಮಾತು ಆರಂಭಿಸಿದ ಸ್ನೇಹಾ, ಸಂಗೀತಾಳಿಗೆ ಒಂದೂ ಮಾತನ್ನು ಆಡಲು ಬಿಡದೇ, ಉಸಿರು ಭಿಗಿಹಿಡಿದು ಎಲ್ಲವನ್ನೂ ಹೇಳಿಯೇ ಬಿಟ್ಟಳು. ಇಷ್ಟು ದಿನದ ಪಾಡನ್ನು ಮತ್ತು ನೀ‌ ಕೊಟ್ಟ ಮಾತಿನಂತೆ ಸಂಜಯ್ ನಿಗೆ ನಾನು ಇಷ್ಟು ದಿನ‌ ಜೊತೆಯಾಗಿದ್ದು…‌ ಹೀಗೆ‌ ಎಲ್ಲವನ್ನೂ ಒಂದೇ ಸಮನೆ‌ ಹೇಳಿ, ಮಾತಿನ‌ ಕೊನೆಯಲ್ಲಿ..‌‌ “ನಿನ್ನ ಉಂಗುರ ನಿನ್ನ ಪುಸ್ತಕ ಇಷ್ಟು ದಿನ ನೀನೆ ನಾನಾಗಿ ನಿನ್ನ ಮಾತನ್ನು ಉಳಿಸಿಕೊಂಡು ಯಾರ ಬಳಿಯೂ ಹೇಳಿಕೊಳ್ಳದೇ, ಈಗ ತಾನೆ ನೀನು‌‌ ಕಾಲ್‌ ಮಾಡುವ‌ ಮುಂಚೆ  ಸಂಜಯ್ ನ‌ ಬಳಿ‌ ಎಲ್ಲವನ್ನು ಹೇಳಿ ನೀ ಕೊಟ್ಟಿದ್ದ ಉಂಗುರ ಮತ್ತು‌ ಪುಸ್ತಕ ಅವನ ಕೈ ಸೇರಿಸಿದ್ದೇನೆ !!” ಎಂದು ಹೇಳಿ… ಮೊಬೈಲ್ ಅನ್ನು ಸಂಜಯ್ ನಿಗೆ ಕೊಟ್ಟ ಸ್ನೇಹಾ ಕಣ್ಣೀರಿನ ಜೊತೆಗೇ ಆ ರೂಮಿನಿಂದ ಹೊರ ನಡೆದಳು.

ಸ್ನೇಹಾಳ‌ ಮಾತನ್ನು ಕೇಳಿದ ಸಂಗೀತಾ ಯಾವ ಮಾತನ್ನೂ ಆಡಲಿಲ್ಲ. ಇತ್ತ ಸಂಜಯ್ ಅರಳಿದ ಕಣ್ಣುಗಳಲ್ಲಿ‌, ತಡವರಿಸುವ ಧ್ವನಿಯಲ್ಲಿ ಸಂಗೀತಾ…‌‌ ಎಂದಾಗ ಆ ಕಡೆ ಸಂಗೀತಾಳಿಂದ ಯಾವ ಉತ್ತರವೂ ಬರಲಿಲ್ಲ. ಏನು ಆಗಬಾರದೆಂದು ಇಷ್ಟು ದಿನ ಸುಮ್ಮನಿದ್ದೆನೋ ಅದೇ ಆಗಿಹೋಯಿತೆಂದು‌ ಸಂಗೀತಾ ತನ್ನಲ್ಲೇ‌ ಅಂದುಕೊಂಡು ತನ್ನ ಮಾತಿಗೆ ಬೀಗ ಹಾಕಿಕೊಂಡಂತೆ ಮೌನವಾದಳು.
ತುಂಬಾ ಸಮಯವಾದರೂ ಆ ಕಡೆಯಿಂದ ಯಾವ ಮಾತೂ ಇರಲಿಲ್ಲ. ಸಂಗೀತಾಳ ಮೌನ ಸಂಜಯ್ ನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ಸಂಜಯ್…‌ ನನ್ನನ್ನು ಕ್ಷಮಿಸು‌ ಎಂದು ಕೇಳಿಕೊಂಡ ಸಂಗೀತಾ, ಇಷ್ಟು ದಿನ ನನ್ನನ್ನು ಮತ್ತು ನನ್ನ ಅಣ್ಣನನ್ನು ನಮ್ಮ‌ ಅಪ್ಪನ‌‌‌ ಕಡೆಯ ಸಂಬಂಧಿಕರೇ ನೋಡಿಕೊಂಡರು. ನನ್ನ ಮತ್ತು ಅಣ್ಣನ ಆಸ್ಪತ್ರೆಯ ಎಲ್ಲಾ ಖರ್ಚನ್ನು ಅವರೇ ನೋಡಿಕೊಂಡು, ನಮ್ಮಿಬ್ಬರನ್ನು ಬದುಕಿಸಿದರು. ನನಗೆ ಯಾವುದೇ ಕರೆ‌‌ ಮಾಡಲೂ ಅವಕಾಶ ಕೊಡಲಿಲ್ಲ. ಅಣ್ಣನಿಗೂ ಇವರುಗಳ ನೆರಳು ಇಷ್ಟವಿರಲಿಲ್ಲ ಆದರೆ ನನ್ನ ಆಪರೇಷನ್ ಗೆ ಅವನ‌‌ ಬಳಿ ಇದ್ದ ಹಣ ಸಾಕಾಗಲಿಲ್ಲ.‌ ನನ್ನ ಆಪರೇಷನ್ ಗೆ ತುಂಬಾ ಹಣ ಬೇಕಾಗಿತ್ತು. ನನ್ನನ್ನು ಬದುಕಿಸಲು ನಮ್ಮ‌‌ಣ್ಣ ನಮ್ಮ‌ ಅಪ್ಪ ಕಟ್ಟಿಸಿದ್ದ ಮನೆಯನ್ನೂ ಮಾರಿದನು. ಆ ಹಣ ಎಲ್ಲಿಗೂ ಸಾಕಾಗಲಿಲ್ಲ. ಹಿಂದೆ ನನ್ನ ಅಪ್ಪ ನನ್ಮನ್ನು ಅವರ ಕಡೆಯವರಿಗೆ ಕೊಟ್ಟು ಮದುವೆ ಮಾಡುವ ನಿರ್ಧಾರಕ್ಕೆ ‌ನಾನು ಒಪ್ಪಿರಲಿಲ್ಲ.‌ ಈ ವಿಷಯ ತಿಳಿದಿದ್ದ ಅಣ್ಣ, ನನ್ನನ್ನು ಒಂದು ದಿನವೂ ಒತ್ತಾಯ ಮಾಡಲಿಲ್ಲ. ಆದರೆ ನನ್ನ ಆಪರೇಷನ್ ಗೆ ಹಣ ಹೊಂದಿಸಲು ಆಗದ ಕಾರಣ ನನ್ನ ಅಣ್ಣ‌ ನನ್ನನ್ನು ಉಳಿಸಿಕೊಳ್ಳಲು, ಅಪ್ಪ ತೋರಿಸಿದ್ದ ಅವರ ಕಡೆಯ ಹುಡುಗನ ಮನೆಯವರಿಗೆ ನನ್ನನ್ನು ಮದುವೆ ಮಾಡಿಕೊಡತ್ತೇನೆಂದು ಮಾತು ಕೊಟ್ಟನು. ಇದಾದ ನಂತರ ಇಂದಿನ ವರೆಗೂ ನನ್ನ ಎಲ್ಲಾ ಖರ್ಚನ್ನು ಅವರೇ ನೋಡಿ‌ಕೊಂಡರು. ನನ್ನ ಉಳಿಸಿಕೊಳ್ಳುವ ಒಂದೇ‌ ಕಾರಣಕ್ಕೆ ಅಣ್ಣ ಈ‌ ನಿರ್ಧಾರ ಮಾಡಿದ್ದನು.‌ ನನ್ನ‌‌ ಉಳಿಸಿಕೊಳ್ಳಲು ಅವನು ಕೊಟ್ಟ ಮಾತನ್ನು ನನಗೆ ವಿರೋಧಿಸಲೂ ಆಗದೇ ಏನನ್ನೂ ಹೇಳಿಕೊಳ್ಳಲೂ‌ ಆಗದೆ ಅವನ ಮಾತನ್ನು ಉಳಿಸಲು, ಅಪ್ಪ ಆಸೆ ಪಟ್ಟಿದ್ದ‌ ಹುಡುಗನನ್ನು ಮದುವೆ ಮಾಡಿಕೊಳ್ಳಲು‌ ಒಪ್ಪಿದೆನು.

ಸಂಜಯ್, ನಿನ್ನನ್ನು ಭೇಟಿ ಯಾಗದೇ ನಿನಗೆ ಮೋಸ ಮಾಡಿದೆನು ಎನ್ನುವ ವಿಚಾರ ನನ್ನನ್ನು ಕೊಲ್ಲುತ್ತಿತ್ತು. ನಾನು ಆಕ್ಸಿಡೆಂಟ್ ನಂತರ ಬದುಕಿ‌ ಬರದೇ ಇದ್ದರೆ‌‌, ನಿನಗೆ ಇಷ್ಟು ದಿನ‌ ನನ್ನನ್ನು ‌ನೋಡದ ಹಾಗೆ ಕಾಡಿಸಿ‌‌ ನಾನು ಬದುಕುಳಿಯದೇ‌ ಹೋದರೆ‌ ನಿನಗೆ‌ ಮೋಸ‌ ಮಾಡಿದಂತಾಗುತ್ತದೆ, ಇದು ಆಗದಿರಲಿ ಹಾಗು ನಿನ್ನ ಮನಸ್ಸಿನಲ್ಲಿ‌ ಇದ್ದ ಆ‌‌ ನನ್ನ ಉಂಗುರ ‌ಮತ್ತು‌ ಪುಸ್ತಕ ಜೀವಂತ ಆಗಿರಲಿ‌‌ ಎಂದು ಸ್ನೇಹಾಳಿಗೆ ನಿನ್ನೆದುರು ನಾನಾಗಿ ಇನ್ನು ಮುಂದೆ ಇರಲು ಹೇಳಿದ್ದೆ, ಮತ್ತು ನನ್ನ ಮದುವೆಯ ವಿಚಾರ ಬಂದ ನಂತರ ನನ್ನ ಅಣ್ಣನಿಗೆ ಹೇಳಿ, ನಾನು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದೆ ಎಂದು ಹೇಳಲು ತಿಳಿಸಿದ್ದೆ. ಉಂಗುರದ ಹುಡುಗಿ ಆಗಿದ್ದ ಸ್ನೇಹಾ ಇನ್ನು ಮುಂದೆ ನಿನ್ನೆದುರು ಹಾಗೆಯೇ ಇರಲಿ ಎನ್ನುವುದು ನನ್ನ ಆಸೆಯಾಗಿತ್ತು. ಈ ವಿಷಯವನ್ನು ನಾನು ಇಷ್ಟು ದಿನ ಸ್ನೇಹಾಳಿಗೂ ಹೇಳಿರಲಿಲ್ಲ….‌ಎಂದಳು ಸಂಗೀತಾ.

ನಾನು ಇಂದು ಸ್ನೇಹಾಳಿಗೆ ಕರೆ ಮಾಡಿ, ನಾನು ಬದುಕಿರುವ ವಿಚಾರವನ್ನು ಹೇಳಿ‌ ಹಾಗೂ ಸಂಜಯ್ ಎದುರು ನೀನೆ ಸ್ನೇಹಾಳ ಹಾಗೆ ಇನ್ನು ಮುಂದೆಯೂ ಮುಂದುವರೆಯುವಂತೆ ಅವಳನ್ನು ಒಪ್ಪಿಸಲು ಇಷ್ಟು ದಿನದ‌‌ ನಂತರ ಅವಳಿಗೆ ಕಾಲ್ ಮಾಡಿದ್ದೆ.‌ ಆದರೆ ನನಗೆ ಈಗಲೇ‌ ಗೊತ್ತಾಗಿದ್ದು……  ಸ್ನೇಹಾ ಎಲ್ಲವನ್ನೂ ನನ್ನ ಮಾತನ್ನು‌‌ ಮೀರಿ‌ ನಿನಗೆ ಹೇಳಿದ್ದಾಳೆಂದು. ಮತ್ತೊಮ್ಮೆ ಕ್ಷಮಿಸುವಂತೆ ಸಂಜಯ್ ನ ಕೇಳಿದ ಸಂಗೀತಾ, ಸ್ನೇಹಾಳ ಜೊತೆ ಮಾತನಾಡಬೇಕೆಂದು ಕೇಳಿಕೊಂಡಳು. ಸಂಜಯ್‌ ಬೇಸರದಿಂದ ಹೊರಗೆ ಬಂದು ಮೊಬೈಲ್ ಅನ್ನು ಸ್ನೇಹಾಳಿಗೆ ನೀಡಿದನು.

ಆದ ಎಲ್ಲಾ ವಿಷಯವನ್ನು ಹಾಗೂ ತನ್ನ ಅಸಹಾಯಕತೆಯನ್ನು ಹೇಳಿದ ಸಂಗೀತಾ, ಸ್ನೇಹಾಳ ಮೇಲಿನ ತನ್ನ ಬೇಸರ ತೋಡಿಕೊಂಡಳು. ನೀನೇ ನಾನಾಗಿ, ಸಂಜಯ್ ನಿನ್ನ ಬಳಿ ಇದ್ದಾನೆಂದು ಭಾವಿಸಿ… ಸಂತೋಷದಿಂದ ಅಣ್ಣನ ಮಾತಿನಂತೆ ನನಗೆ ಚಿಕಿತ್ಸೆ ಕೊಡಿಸಿದವರನ್ನೇ ಮದುವೆ ಯಾಗಳು ಒಪ್ಪಿಕೊಂಡಿದ್ದೆ‌… ಅದರೆ ನೀನು ಹೀಗೇಕೆ ಮಾಡಿದೆ ?? ಎಂದು ಕೇಳಿದಳು‌. ಇದಕ್ಕೆ ಉತ್ತರಿಸಿದ ಸ್ನೇಹಾ, ಇದು ನಾನು ಸಂಜಯ್ ಗೆ ಮಾಡುವ ಬಹುದೊಡ್ಡ ಮೋಸ ಆಗುತ್ತದೆ. ನೀನು ಅಂದು ಬದುಕಿ ಬರುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಅದಕ್ಕೆ ನೀನು ಕೊಟ್ಟ ಮಾತನ್ನು ಆ ಕ್ಷಣಕ್ಕೆ ಒಪ್ಪಿದೆ‌. ಅದರಂತೆಯೇ ಇಷ್ಟು ದಿನವೂ ನಡೆದುಕೊಂಡು ಬಂದಿದ್ದೆ. ಆದರೆ ಸಂಜಯ್‌ ನನ್ನ ಹುಡುಕಿ ಇಷ್ಟು ದೂರ ಬರಲು, ತನ್ನ ಜೀವವನ್ನೂ ಲೆಕ್ಕಿಸದೇ ತುಂಬಾ ಕಷ್ಟ ಅನುಭಸಿದ್ದಾನೆ. ಮುಂದೆ ಈ ವಿಷಯ ಗೊತ್ತಾದರೆ ಅವನ ಈ ಪರಿಶ್ರಮಕ್ಕೆ ನಾನು ಮಾಡಿದ ಮೋಸಕ್ಕೆ ಕ್ಷಮೆ ಇಲ್ಲದಂದಾಗುತ್ತಿತ್ತು. ತುಂಬಾ ಯೋಚಿಸಿದ ನಂತರವೇ, ನೀನು ಅವನಿಗಾಗಿ ಕಾಲೇಜಿನಲ್ಲಿ ಕಾದಿದ್ದು… ಹಾಗೂ ನಿಮ್ಮ ಅಣ್ಣ ಹೇಳಿದನ್ನು ನಂಬಿದ ನಾನು, ನೀನು ತೀರಿಕೊಂಡ ವಿಷಯದ ವರೆಗೂ ಎಲ್ಲವನ್ನೂ ಅವನಿಗೆ ಹೇಳಬೇಕಾಯಿತು ಎಂದಳು‌. ಸಂಗೀತಾಳಿಗು ಇದರಲ್ಲಿ ತಪ್ಪು ಅನಿಸಲಿಲ್ಲ‌. ಇಷ್ಟು ದಿನ ನನ್ನ ಮಾತನ್ನು ಉಳಿಸಿಕೊಂಡು ಬಂದಿದ್ದ ತನ್ನ ಸ್ನೇಹಿತೆ ಸ್ನೇಹಾಳಿಗೆ ಮನಸಾರೆ ಧನ್ಯವಾದವನ್ನು ಹೇಳಿದಳು.

ಮಾತಿನ ಕೊನೆಯಲ್ಲಿ ಸಂಗೀತಾ, ಸ್ನೇಹಾಳಿಗೆ ಮುಂದಿನ ವಾರ ಇರುವ ಸರಳವಾದ ತನ್ನ ಮದುವೆಯ ಬಗ್ಗೆ ಹೇಳಿದಳು. ಈ ವಿಷಯವನ್ನು ಸಂಜಯ್ ನ ಬಳಿ ಹೇಳುವಷ್ಟು ಧೈರ್ಯ ನನಗೆ ಖಂಡಿತವಾಗಿಯೂ ಇಲ್ಲಾ… ನೀನೆ ಈ ವಿಷಯವನ್ನು ಅವನಿಗೆ ಹೇಳಿ, ಅವನ ಜೀವನದಲ್ಲಿ ನಾನೊಂದು ಮುಗಿದು ಹೋದ ಅಧ್ಯಾಯ ಎಂಬುದನ್ನು ಅವನಿಗೆ ತಿಳಿಸು‌ ಎಂದೆಲ್ಲಾ ಹೇಳಿದ ಸಂಗೀತಾಳ ಮಾತಿಗೆ, ಮರು ಉತ್ತರವಾಗಿ… ಸಂಗೀತಾ ನಿನಗೆ ನಿಜವಾಗಿಯೂ ಈ ಮದುವೆಗೆ ಒಪ್ಪಿಗೆ ಇದೆಯಾ ಎಂದು ಕೇಳಿದಳು. “ನನ್ನ ಅಣ್ಣ ಹಾಗೂ ನನ್ನ ಜೀವ ಉಳಿಸಿದ ಇವರನ್ನು ಬಿಟ್ಟು, ನನ್ನ ಅಣ್ಣ ಕೊಟ್ಟ ಮಾತನ್ನು ಮೀರಿ ನಾನು ಹೇಗೆ ನಿರಾಕರಿಸಲಿ ?? ಹಾಗೆ ನಾ ನಡೆದುಕೊಂಡರೆ ಅದು ನನ್ನ ಸ್ವಾರ್ಥದಂತೆ. ನನ್ನ ಒಬ್ಬಳ ಖುಷಿಗೆ, ಸಂಜಯ್ ಕಾಯುವಿಕೆಗೆ ಇವರನ್ನು ಬಿಟ್ಟು ಬರುವುದು ನನ್ನಿಂದ ಸಾಧ್ಯವಿಲ್ಲ. ಇವರೆಲ್ಲರಿಗೂ ನೋಯಿಸಿ ನಾನು ನಗುವ ಬದಲು, ಇವರೆಲ್ಲರ ನಗುವಿನ ಹಿಂದೆ ನನ್ನ ನೋವನ್ನು ಅಡಗಿಸಿ..‌ ಇಲ್ಲಿರುವುದೇ ನನಗಿರುವ ದಾರಿ !!” ಎಂದು ಸಂಗೀತಾ ಹೇಳಿದಳು.
ಮುಂದೊಂದು ದಿನ ನೀನೆ ಅವನನ್ನು ಮದುವೆ ಆಗು ಎಂದು ಹೇಳುವ ಆಸೆ ನನಗೆ, ಆದರೆ ಅದನ್ನು ಸಂಜಯ್ ಎದುರು ಹೇಳುವಷ್ಟು ನಂಬಿಕೆ ನಾನು ಉಳಿಸಿಕೊಂಡಿಲ್ಲ.‌
ಏನೋ ಮಾಡಲೆಂದು ಹೊರಟ ನನಗೆ ವಿಧಿ ಆಟದ ಹೊಡೆತಕ್ಕೆ ಇನ್ನೇನೋ ಆಗಿ ಹೋಯಿತು‌. ಮುಂದಿನ‌ವಾರ ನನ್ನ‌ ಮದುವೆ, ಸಂಜಯ್‌ ನಿಗೆ ಈ ಮದುವೆಯ ವಿಷಯ ತಿಳಿಸುವುದು ಅಥವಾ ತಿಳಿಸದೇ‌ ಇರುವುದು ನಿನಗೇ ಬಿಟ್ಟಿರುವ ವಿಚಾರ. ಅವನ‌‌ ಕಷ್ಟಗಳಲ್ಲಿ ನನಗಿಂತಲೂ ಹೆಚ್ಚು ಜೊತೆಗಿದ್ದವಳು ನೀನು, ಅವನನ್ನು ಈ ಎಲ್ಲಾ ಹುಡುಕಾಟದಿಂದ ಆಚೆ ಕಳಿಸಿ ಅವನ‌ ಜೀವನವನ್ನು ಕಟ್ಟಿಕೊಳ್ಳಲು ತಿಳಿಸು ಎಂದು ಹೇಳಿ..‌ ತನ್ನ ಮದುವೆ ನಡೆಯುವ ಸ್ಥಳವನ್ನು ಹೇಳಿದ ಸಂಗೀತಾ, ನಿನ್ನೊಬ್ಬಳ ನಿರೀಕ್ಷೆಯಲ್ಲಿದ್ದೇನೆ… ಎನ್ನುತ್ತಾ ಕಣ್ಣೀರು ಹಾಕುತ್ತಲೇ ಮಾತು‌ ನಿಲ್ಲಿಸಿದಳು.

ಈ ಕಡೆ ಸ್ನೇಹಾ, ದೂರದಲ್ಲಿ ನಿಂತಿದ್ದ ಸಂಜಯ್‌ ನ ನೋಡಿ ಏನು ಹೇಳಬೇಕೆಂದು‌‌ ತಿಳಿಯದೇ ಯೋಚಿಸಲು‌ ಶುರು ಮಾಡಿದಳು.‌..‌ ಅವನ ಬಳಿ‌ ಹೋಗಿ ಅಸಹಾಯಕತೆ ಇಂದ ಎಲ್ಲವನ್ನೂ ವಿವರಿಸಿದಳು. ಸಂಗೀತಾ ಬದುಕಿಲ್ಲಾ ಅಂದುಕೊಂಡೇ ನೀನಿದ್ದರೂ ಪರವಾಗಿಲ್ಲ ಆದರೆ ಅವಳನ್ನು‌ ಭೇಟಿ ಮಾಡುವ ಯಾವ ದಾರಿಯನ್ನೂ ಹಿಡಿಯಬೇಡ, ಮದುವೆಗೆ ಹೋಗಿ ಅವಳನ್ನು ಇಕ್ಕಟ್ಟಿನಲ್ಲಿಯೂ ಸಿಲುಕಿಸಬೇಡ, ಎಂದಳು. ಇನ್ನೂ ಒಂದು ವಾರ ಅಷ್ಟೇ ಸಮಯವಿದೆ‌‌‌ ಅವಳ ಮದುವೆಗೆ, ಈ ಒಂದು ವಾರದಲ್ಲಿ ಮತ್ತೆ ಅವಳನ್ನು ಹುಡುಕಬೇಡ ಎಂದಳು. ಏನೂ ಮಾತಾಡದ ಸಂಜಯ್, ಆ‌ ಕ್ಷಣವೇ ಅಲ್ಲಿಂದ ಹೊರಟನು. ಸ್ನೇಹಾಳ ಮನೆಯ ಎಲ್ಲರಿಗೂ, ಮೈಸೂರಿನಲ್ಲಿರುವ ನನ್ನ ಮನೆಗೆ ಹೋಗುವುದಾಗಿ ಹೇಳಿ ಹೊರಟನು.

ಬೈಕ್ ನಲ್ಲಿ ಸಂಜಯ್ ಹೊರಟಾಗ, ರಸ್ತೆಯ ವರೆಗೂ ಜೊತೆಯಾಗಲು ಅವನ ಹಿಂದೆ ಜೀಪಿನಲ್ಲಿ ಆಳುಗಳು ಮತ್ತು ಸ್ನೇಹಾ ಕೂಡ ಹೊರಟಳು. ದಾರಿ ಮಧ್ಯೆ ಸ್ನೇಹಾಳ ಕುಟುಂಬದವರಲ್ಲೇ ಹಿಂದಿನಿಂದಲೂ ಜಗಳ ಸೇಡು ಅಂತಿದ್ದ ಕೆಲವರು ಜೀಪನ್ನು ಅಡ್ಡ ಗಟ್ಟಿ ಹಲ್ಲೆಗೆ ಯತ್ನಿಸಿದರು. ಅವರೆಲ್ಲರೂ ಎದುರಾಗುತ್ತಿದ್ದಂತೆ‌, ಅದನ್ನು ಗಮನಿಸಿದ ಸಂಜಯ್ ಬೈಕ್ ಹಿಂದೆ ತಿರುಗಿಸಿ ಜೀಪ್ ನ ಬಳಿ‌ ಓಡಿದನು. ಕತ್ತಿ ಬಂದೂಕಿನಿಂದ ಬಂದಿದ್ದ ಅಷ್ಟು ಜನರನ್ನು ಸಂಜಯ್ ಮತ್ತು ಸ್ನೇಹಾಳ ಜೊತೆಗಿದ್ದ ಆಳುಗಳು‌ ಎದುರಿಸುತ್ತಾ ದೊಡ್ಡ ಹೊಡೆದಾಟವೇ ನಡೆಯಿತು. ಸ್ನೇಹಾಳನ್ನು ಕೊಲೆ ಮಾಡಲು ಬಂದ ಅವರನ್ನು ಸಂಜಯ್ ತಪ್ಪಿಸುತ್ತಿದ್ದನ್ನು. ದೊಡ್ಡ ಗಲಾಟೆಯಲ್ಲಿ ಕತ್ತಿಯ ಸ್ಪರ್ಶದಿಂದ  ಕೆಲವರ ರಕ್ತ ನೆಲ‌ ಸೇರಿದ್ದರೂ, ರಕ್ತದ ಒಳಗೆ ಅಡಗಿದ್ದ ಸೇಡು ಕಮ್ಮಿ ಆಗಲಿಲ್ಲ. ಸಂಗೀತಾಳ ವಿಷಯದಿಂದ ಮನನೊಂದಿದ್ದ ಸಂಜಯ್, ರಾಕ್ಷಸನಂತೆ ಕೂಗುತ್ತಾ ಸಿಟ್ಟಿನಿಂದ ಪ್ರತಿ‌ ಒಬ್ಬರನ್ನೂ‌ ಹುಡುಕಿ ಹೊಡೆಯುತ್ತಿದ್ದನ್ನು. ಇದನ್ನು ಗಮನಿಸಿದ ಸ್ನೇಹಾ, ಸಂಜಯ್ ಒಳಗಿದ್ದ ಆಕ್ರೋಶ ಅಸಹಾಯಕತೆ ನೋಡುತ್ತಲೇ ಅವಳಿಗೆ ಅನಿಸುತ್ತು… “ಇವನು ಸಂಗೀತಾಳ ಮದುವೆಗೆ ಹೋಗಿ ಅವಳ ಭೇಟಿಯಾಗದೇ ಬಿಡುವುದಿಲ್ಲ ಅಂದುಕೊಂಡಳು”. ಕತ್ತಿಯ ಸಮೇತ ಸ್ನೇಹಾಳ ಸಮೀಪ ಅವರೆಲ್ಲರೂ ಹೋಗುತ್ತಿದ್ದನ್ನು ನೋಡಿ, ಬಿಡಿಸಲು ಸಂಜಯ್ ಅವಳ ಕಡೆ ಓಡುತ್ತಿರುವಾಗಲೇ.. ಆ ಬದಿಯ ಕೋವಿಯಿಂದ ಬಂದ ಗುಂಡು ಸಂಜಯ್ ನ ದೇಹವನ್ನು ಸೀಳಿತ್ತು. ಗುಂಡಿನ ರಭಸಕ್ಕೆ ಸಂಜಯ್ ಹಾರಿ ಬಿದ್ದನು. ಸ್ನೇಹಾ ಕೂಗಿಕೊಂಡು ಅವನ‌ ಬಳಿ ಓಡಿ ಬಂದಳು. ಅಷ್ಟರಲ್ಲಿ ಸ್ನೇಹಾಳ ಅಜ್ಜ ಅಪ್ಪ ಹಾಗೂ ದೊಡ್ಡ ಗುಂಪು ಬರುವುದನ್ನು ಕಂಡವರೇ, ಹಲ್ಲೆ ಮಾಡಲು ಬಂದವರು ಅಲ್ಲಿಂದ ಓಡಿದರು. ಸಂಜಯ್ ನ‌ ರಕ್ತ ಸೋರುತ್ತಿದ್ದ ಹೊಟ್ಟೆಯನ್ನು ಬಿಗಿಯಾಗಿ ಒತ್ತಿ ಹಿಡಿದಿದ್ದ ಸ್ನೇಹಾ, ಜೀಪ್ ಜೀಪ್ ಎಂದು ಕೂಗುತ್ತಿದ್ದಳು. ಜೀಪ್ ನಲ್ಲಿ ಹೊರಟು ದೂರದ ಊರಿನ ಪರಿಚಯವಿದ್ದ ದೊಡ್ಡ ಆಸ್ಪತ್ರೆಗೆ ಸೇರಿಸುವಾಗ, ಸಂಜಯ್ ಪ್ರಜ್ಞೆ ತಪ್ಪಿದ್ದನು. ಚಿಕಿತ್ಸೆಗೆ ಸ್ಪಂದಿಸಿದರೆ  ಖಂಡಿತಾ ಬದುಕುಳಿಯುತ್ತಾರೆಂದು ಡಾಕ್ಟರ್ ತಿಳಿಸಿದರು.

ದೈರ್ಯ ಮಾಡಿದ ಸ್ನೇಹಾ,‌ ಈ ವಿಷಯವನ್ನು ಸಂಜಯ್ ಮನೆಯವರಿಗೆ ತಿಳಿಸಲಿಲ್ಲ. ಇಷ್ಟೆಲ್ಲಾ ಆಗಿದ್ದನ್ನು, ಬಹಳ‌ ಯೋಚಿಸಿದ ಸ್ನೇಹಾ… ಅವಳ ಅಪ್ಪ ಮತ್ತು ಅಣ್ಣನಿಗೆ ವಿಷಯ ತಿಳಿಸಿದಳು. ತನ್ನ ಮನೆ ಮಗಳ ಜೀವ ಉಳಿಸಲು ಹೋರಾಡಿದ ಸಂಜಯ್ ನಿಗೆ ಈ‌ ಅನ್ಯಾಯ ಆಗಬಾರದೆಂದು ತೀರ್ಮಾನ ಮಾಡಿದ ಅವಳ ಅಜ್ಜ ಮತ್ತು ಅಪ್ಪ… ಸಂಜಯ್ ನನ್ನು ನೋಡಿಕೊಳ್ಳಲು‌ ಮನೆಯ ಆಳುಗಳಿಗೆ ತಿಳಿಸಿ, ಆ ರಾತ್ರಿಯೇ ಅಲ್ಲಿಂದ…. ಸ್ನೇಹಾ, ಅವಳ ಅಜ್ಜ ಅಪ್ಪ ಮತ್ತು ಆಳುಗಳು ಹೊರಟರು. ಬೆಳಗಾಗುವಷ್ಟರಲ್ಲಿ ಸಂಗೀತಾಳ ಮನೆ‌ ತಲುಪಿದರು. ಸಂಗೀತಾಳ ಸಂಬಂಧಿಕರ ಮನೆ ಆದ್ದರಿಂದ, ಅವರು ಇವರನ್ನು ಒಳಗೆ ಸೇರಿಸದೇ ಗೇಟಿನಲ್ಲಿಯೇ ತಡೆದರು. ಚಿಕ್ಕ  ಗಲಾಟೆ ನಡೆಯುವಾಗ ಸಂಗೀತ ಮತ್ತು ಅವಳ ಅಣ್ಣನನ್ನು ಭೇಟಿ‌‌ ಮಾಡಬೇಕೆಂದು ಅಲ್ಲಿದ್ದ ಸ್ನೇಹಾಳ ಅಜ್ಜ ಜೋರು ದನಿಯಲ್ಲಿ ಮಾತನಾಡುವಾಗ, ಗೇಟನ್ನು ತಳ್ಳಿ ಅವಳ ಅಪ್ಪ ಒಳಗೆ ನಡೆದರು.‌ ಅಷ್ಟರಲ್ಲಿ ಇನ್ನೂ ಚೇತರಿಸಿಕೊಳ್ಳದ ಸಂಗೀತಾಳನ್ನು ಅವಳ ಅಣ್ಣ ಕೈ ಹಿಡಿದು ನಿಧಾನಕ್ಕೆ ನಡೆಸುತ್ತಿದ್ದನು. ಗೇಟ್ ನಲ್ಲಿದ್ದ ಸ್ನೇಹಾಳನ್ನು‌ ನೋಡಿದ ಸಂಗೀತಾ, ಗಾಬರಿ ಆಶ್ಚರ್ಯದಿಂದ ಮತ್ತು ಸಂತೋಷದಿಂದ ಸ್ನೇಹಾ ಎಂದು ಕರೆದಳು. ಹತ್ತಿರ ಹೋದ ಸ್ನೇಹಾ, ಸಂಗೀತಾಳನ್ನು ಅಪ್ಪಿ ಸ್ನೇಹಿತೆಯನ್ನು ನೋಡಿ ಕಣ್ಣೀರಿನೊಂದಿಗೆ ಆ ಸಮಯವನ್ನು ಇಬ್ಬರೂ ಅನುಭವಿಸಿದರು.‌ ಅವಳ ಅಣ್ಣ ಎಂದು ತಿಳಿದ ಕೂಡಲೇ, ಸಂಗೀತಾಳ ಅಪ್ಪ ಅವನನ್ನು ಪಕ್ಕಕ್ಕೆ ಕರೆದು ನಡೆದದ್ದನ್ನು ವಿವರಿಸಿ, ಈ ಮದುವೆಗೆ ಒಪ್ಪಿಗೆಯನ್ನು ಕೇಳಿದಾಗ… “ಅವರು ದುಡ್ಡು ಕೊಟ್ಟು ಇಬ್ಬರಿಗೂ ಚಿಕಿತ್ಸೆ ಕೊಡಿಸಿದರು ಮತ್ತು ಇದರ ಋಣ ತೀರಿಸಲು ನನ್ನಿಂದ ಸಾಧ್ಯವಾಗಲಿಲ್ಲ ಮತ್ತು ಈ ಮನೆಯವರು ನಮ್ಮಿಬ್ಬರಿಗೂ ಇಷ್ಷವಿಲ್ಲದಿದ್ದರೂ, ಜೀವ ಉಳಿಸಲು ಖರ್ಚಾದ ದುಡ್ಡು‌‌ ಹೊಂದಿಸಲಾಗದೆ ಸ್ನೇಹಾಳ ಒಪ್ಪಿಗೆ ಇಲ್ಲದೇ ಈ‌ ನಿರ್ದಾರ ಮಾಡಿದ್ದಾಗಿ ತಿಳಿಸಿದನು.” ಈ ಕಡೆ  ಸಂಗೀತಾಳ ಸಂಬಂಧಿಕರು ಹೊರಗೆ ಬಂದು ಸಂಗೀತಾಳನ್ನು ಒಳಗೆ ಕರೆದೊಯ್ಯಲು ಎಲೆದಾಡಿದ್ದನ್ನು ನೋಡಿದ ಅವಳ ಅಪ್ಪ ಹೊರಗಿದ್ದ ಆಳುಗಳನ್ನು ಕೆರದರು.‌ ಕತ್ತಿಯ ಸಮೇತ ಬಂದ ದಾಂಡಿಗರನ್ನು ನೋಡಿದ ಅವರೆಲ್ಲರೂ ಹೆದರಿ ಸುಮ್ಮನಾದರು. ಸಂಗೀತಾಳನ್ನು ಪಕ್ಕಕ್ಕೆ ಕರೆದೊಯ್ದ ಸ್ನೇಹಾ,‌‌‌ ಸಂಜಯ್ ಆಸ್ಪತ್ರೆಯಲ್ಲಿ ಸಾವಿನ‌ ವಿರುದ್ದ ಹೋರಾಡಲು‌ ಎದುರಿಸಿದ ವಿಷಯವೆಲ್ಲವನ್ನೂ ತಿಳಿಸಿದಾಗ ಸಂಗೀತಾ ಅಳುತ್ತಾ ಅಲ್ಲಿಯೇ ಕುಸಿದು ಕೂತಳು. ನಾನೇ‌ ಎಲ್ಲವನ್ನೂ ಪ್ರಾರಂಭ ಮಾಡಿ, ಕೊನೆಯಲ್ಲಿ ‌ಅವನ ಜೀವವೇ ಹೋಗುವ ಸ್ಥಿತಿ ಆಗಿದೆ ಎಂದು ದುಃಖ ಪಡುತ್ತಾ ಈಗಲೇ ಸಂಜಯ್ ನನ್ನು ನೋಡಬೇಕೆಂದು ಸ್ನೇಹಾಳಿಗೆ ಹೇಳಿ ಅತ್ತಳು‌.

ಸಂಗೀತಾಳ ಸಂಬಂಧಿಕರು ಈ‌‌ ಕೂಡಲೇ‌‌ ಪೋಲಿಸ್ ಕಂಪ್ಲೆಂಟ್ ಕೊಡುವುದಾಗಿ ಎಚ್ಚರಿಸಿದರು. ಅಲ್ಲೇ ಇದ್ದ ಸಂಗೀತಾಳ ಅಣ್ಣನಿಗೆ ಹೊಡೆದು ಇದೆಲ್ಲವೂ ನಿನ್ನ ಮತ್ತು ಈ ಸಂಗೀತಾಳದ್ದೇ ಕೆಲಸ ಎಂದು ಹೇಳಿದರು. ಇದನ್ನು ಕೇಳಿದ‌‌ ಸ್ನೇಹಾಳ ಅಪ್ಪ‌ ಜೋರಾದರು. ಚಿಕಿತ್ಸೆಯ ಹೆಸರಿನಲ್ಲಿ‌ ಅವರ ಒಪ್ಪಿಗೆ ಇಲ್ಲದೇ ಈ ರೀತಿ ಹಿಂಸಿಸುತ್ತಿರುವುದರ ವಿರುಧ್ಧ ಸಂಗೀತಾಳೆ ಪೋಲೀಸ್ ಗೆ ಹೇಳಿದರೆ ನೀವೆ ಪೋಲಿಸರಿಗೆ ಅತಿಥಿ ಆಗುತ್ತೀರೆಂದು ಬೆಧರಿಸಿದರು. ಸ್ನೇಹಾಳ ಅಜ್ಜ ಅವರು ತಂದಿದ್ದ ಚೀಲವನ್ನು  ಮನೆಯ ಮುಂದೆ ಸುರಿದು, ಇದರಲ್ಲಿನ ಹಣ ನೀವು ಅವಳ ಚಿಕಿತ್ಸೆಗೆ ಖರ್ಚು ಮಾಡಿದಕ್ಕಿಂತಲೂ‌ ಹತ್ತರಷ್ಟಿದೆ..‌ ಇದೆಲ್ಲವೂ ನಿಮ್ಮದೆ. ಇನ್ನು‌‌ ಮುಂದೆ ಸಂಗೀತಾ ಮತ್ತು ಅವಳ ಅಣ್ಣನನ್ನು ನಮ್ಮ ಮನೆ‌‌‌ ಮಕ್ಕಳಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.‌ ಮನೆ‌‌ ಎದುರು ಬಿದ್ದ ಕಂತೆ ಕಂತೆ ಹಣವನ್ನು ನೋಡಿದ ಕೂಡಲೇ ಸುಮ್ಮನಾದ‌ ಸಂಗೀತಾಳ ಸಂಬಂಧಿಕರು, ಅಷ್ಟೊಂದು ದುಡ್ಡಿನ‌ ಮುಂದೆ ಇವಳ್ಯಾಕೆ ಎನ್ನುತ್ತಾ ಒಳಗೆ ನಡೆದು ಅವಳ ಮತ್ತು ಅಣ್ಣನ‌ ಲಗೇಜ್ ಅನ್ನು ಹೊರಗೆ ತಂದಿಟ್ಟು ಹಣ ನಮ್ಮದಾದರೆ ನಾವಿನ್ನು‌‌ ಅವ‌ಳ ಸುದ್ದಿಗೆ ಬರುವುದಿಲ್ಲವೆಂದು ತಿಳಿಸಿದರು.

ಇದನ್ನೆಲ್ಲಾ‌ ನೋಡಿದ‌ ಸಂಗೀತಾ, ತನ್ನ ಚಿಕಿತ್ಸೆಗೆ ನೆರವಾದ ಸಂಬಂಧಿಕರಿಗೆ ಬೇಸರದಿಂದಲೇ ಧನ್ಯವಾದ ತಿಳಿಸಿ, ಅವಳ ಅಣ್ಣ‌, ಸ್ನೇಹಾ ಮತ್ತವಳ ಅಪ್ಪ ಅಜ್ಜನ ಜೊತೆಗೆ ಹೊರಗಡೆ ಇದ್ದ ಕಾರಿನ‌ ಕಡೆಗೆ‌ ಹೆಜ್ಜೆ ಹಾಕಿದಳು. ದಾರಿ‌ ಉದ್ದಕ್ಕೂ ಸಂಜಯ್ ಆರೋಗ್ಯವಾಗಿರಲಿ ಎಂದು ಬೇಡಿಕೊಳ್ಳುತ್ತಲೇ ದಾರಿ ದೂಡಿದಳು. ಸಂಜೆ ಆಗುವಷ್ಟರಲ್ಲಿ‌ ಆಸ್ಪತ್ರೆ ತಲುಪಿದ ಎಲ್ಲರೂ, ಸಂಜಯ್ ಬಳಿ ನಡೆದರು. ಮತ್ತೊಂದು ಆಪರೇಷನ್ ಗೆ ಡಾಕ್ಟರ್ ತಯಾರಿ ಮಾಡಿಕೊಂಡಿದ್ದರು.‌ ಆ ಆಸ್ಪತ್ರೆ ಸ್ನೇಹಾಳ ಅಪ್ಪನಿಗೆ ಬಹಳ ಹತ್ತಿರ ಆದವರದ್ದೇ ಆಗಿದ್ದರಿಂದ ಯಾವ ತೊಂದರೆ ಆಗಲಿಲ್ಲಾ. ಕೊನೇಯ ಆಪರೇಷನ್ ನಡೆಯುತ್ತಿರುವಾಗ, ಸಂಗೀತಾ ಗಟ್ಟಿ‌‌ ಮನಸ್ಸು ಮಾಡಿಕೊಂಡು‌ ಬದುಕಿಸಿಕೊಡು ಎಂದು ದೇವರಲ್ಲಿ‌ ಬೇಡುತ್ತಾ ಕುಳಿತಳು. “ಬದುಕಿ ಬರಲಿ‌ ಸಂಜಯ್” ಎಂದು ಅಲ್ಲಿದ್ದವರೆಲ್ಲರೂ‌‌ ಬಿಟ್ಣ ಕಣ್ಣು‌ ಮುಚ್ಚದೇ ಕಾಯುತ್ತಿದ್ದರು.

ತುಂಬಾ ಸಮಯದ ನಂತರ ಹೊರಗೆ ಬಂದ ಡಾಕ್ಟರ್…………………….

“ನಿಮೆಲ್ಲರ ಆಸೆಯಂತೆ, ಸಂಜಯ್ ಬದುಕುಳಿದರು !! ಎಂದು ಹೇಳಿ‌ ಶುಭಾಶಯ ತಿಳಿಸಿ, ಬೆಳಗಿನ‌ ಜಾವ ನೀವು ಅವರೊಡನೆ ಮಾತನಾಡಬಹುದು” ಎಂದು ಹೇಳಿ ಹೋದರು.‌ ಆಗಲೇ ತುಂಬಾ ರಾತ್ರಿ ಆಗಿತ್ತು.‌ ಎಲ್ಲರೂ ನಿಟ್ಟುಸಿರು ಬಿಟ್ಟರು. ಸ್ನೇಹಾ, ಸಂಗೀತಾಳ ಬಳಿ‌ ಹೋಗಿ “ಇನ್ನು ನೀನು – ನಿನ್ನ ಸಂಜಯ್…” ಎಂದಳು. ಸ್ನೇಹಾಳ ಕೈಯನ್ನು ಬಿಗಿಯಾಗಿ ಹಿಡಿದುಕೊಂಡ‌ ಸಂಗೀತಾ, ಅವಳಿಗೂ ಹಾಗು ಅವಳ ಅಪ್ಪ ಹಾಗು ಅಜ್ಜನಿಗೆ ಧನ್ಯವಾದ ತಿಳಿಸಿದಳು. ನಂತರ ಕಿಟಕಿಯ ಬಳಿ ನಿಂತು ದೂರದಲ್ಲಿ ಬೆಳಕು‌ ಚೆಲ್ಲುವ ಚಂದಿರನ‌ ನೋಡಿ…. ಆದಷ್ಟು ಬೇಗ ನಿನ್ನ ಕೆಲಸ ಮುಗಿಸಿ‌, ಸೂರ್ಯನಿಗೆ ಬೇಗ ಬರಲು ಹೇಳೆಂದು ನೆಮ್ಮದಿಯ ನಿಟ್ಟುಸಿರು ‌ಬಿಟ್ಟಳು.

ಈಗ ತಾನೆ ಬೆಳಕಾಯಿತು…. ಮಲಗಿದ್ದ ಸಂಜಯ್ ನಿಧಾನವಾಗಿ ಕಣ್ಣು ತೆರೆದಾಗ, ಅಲ್ಲಿ‌ ಸ್ನೇಹಾ ನಿಂತಿದ್ದಳು. ಸಂಜಯ್ ತುಸುವೇ ನಗುತ್ತಾ ಮತ್ತೆ ಸಂಗೀತಾಳ ನೆನೆದು ಸುಮ್ಮನಾದನು. ನಿನ್ನ ಸಂಗೀತಾ….. ಎನ್ನುತ್ತಲೇ ಸ್ನೇಹಾ ಪಕ್ಕಕ್ಕೆ ಸರಿದಳು.‌‌ ಅಲ್ಲಿ ಸಂಗೀತಾ ನಿಂತಿದ್ದಳು.‌‌ ಮೊದಲ ಬಾರಿ ಅವಳನ್ನು ‌ನೋಡಿದ ಸಂಜಯ್ ನ ಭಾವನೆ ಹೇಳತೀರದು.‌ ಸಂಗೀತಾಳಿಗೆ ಸಂಜಯ್ ನ ನೋಡಿ ಕಣ್ಣುಗಳು ನೀರಿನಿಂದ ಮುಚ್ಚಿಹೋದವು.‌ ಅಷ್ಟರಲ್ಲಿ ಒಳಗೆ ಬಂದ ಸ್ನೇಹಾಳ ಅಜ್ಜ ಮತ್ತು ಅಪ್ಪ, ತನ್ನ ಮಗಳನ್ನು ಉಳಿಸಲು ಹೋರಾಡಿದ ಸಂಜಯ್ ನಿಗೆ ಧನ್ಯವಾದ ತಿಳಿಸಿ….. “ನಿನಗೆ ನಮ್ಮ ಉಡುಗೊರೆಯೇ ಈ ಸಂಗೀತಾ, ಅವಳು ಮತ್ತು ಅವಳ ಅಣ್ಣ ಇನ್ನು ನಮ್ಮನೆಯ ಮಕ್ಕಳಂತೆ ನಮ್ಮಲ್ಲಿಯೇ ಇರುತ್ತಾರೆ, ನೀವಿನ್ನು ನಿಮ್ಮ ಜೀವನವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳಿ..” ಎಂದು ಹಾರೈಸಿದರು. ಡಾಕ್ಟರ್ ಸೂಚನೆಯಂತೆ ಸಂಜಯ್ ನಿಗೆ ರೆಸ್ಟ್ ಮಾಡಲು ಹೇಳಿ ಎಲ್ಲರೂ ಹೊರನಡೆದರು.‌ ತನ್ನ ಇಷ್ಟು ದಿನದ ಹೊಸ ದಾರಿಯ ಹೊಸ ಅನುಭವವನ್ನು ನೆನೆಯುತ್ತಾ‌ ಸಂಜಯ್ ನಿದ್ರೆಗೆ ಜಾರಿದನು.

ಒಂದೆರಡು ದಿನಗಳ ನಂತರ, ಎಲ್ಲರೂ ಕತ್ತಲೆಕಲ್ಲುಗುಡ್ಡದ ಕಡೆಗೆ ಹೊರಟರು.‌ ಮನೆಯ ಹತ್ತಿರ ಹೋಗುತ್ತಿದ್ದಂತೆ…. ಅಲ್ಲಿ‌ ಇಷ್ಟು ದಿನ ಜಗಳ ಸೇಡು ಹೊಡೆದಾಟ ಮಾಡುತ್ತಿದ್ದ ಎಲ್ಲರೂ ಸೇರಿದ್ದರು. ಸ್ನೇಹಾ ಸಂಜಯ್ ಮತ್ತು ಸಂಗೀತಾಳಿಗೆ ಕೆಳಗೆ ಇಳಿಯದಂತೆ ಹೇಳಿ… ಉಳಿದವರು‌ ಗಾಡಿಯಿಂದ ಇಳಿದ‌ ಕೂಡಲೇ, ಎಲ್ಲರೂ ಬಂದು ಸಮಾಧಾನದಿಂದ ಮಾತನಾಡುವ ಬಯಕೆಯನ್ನು ವ್ಯಕ್ತಪಡಿಸಿದರು‌. ಜಗಳಕ್ಕೆ ಬಂದಿದ್ದ  ಎಲ್ಲರೂ ಕೂತು ಚರ್ಚಿಸಿ, ನಮ್ಮ ಜಗಳದಿಂದ ಇನ್ನೊಬ್ಬರಿಗೆ ತೊಂದರೆ ಆಗುವಂತಾಯಿತು.‌ ಬೇರೊಬ್ಬ ಅಮಯಾಕರ ಜೀವ ಹೋಗುವುದು ಬೇಡ.‌ಇನ್ನು ನಾವೆಲ್ಲರೂ ಒಟ್ಟಾಗಿ ಕಷ್ಟ ಸುಖಗಳಲ್ಲಿ‌ ಒಂದಾಗಿ ಬದುಕ ಬೇಕೆಂದು‌ ತೀರ್ಮಾನಿಸಿದರು. ಎಲ್ಲರೂ ಸಂತೋಷಗೊಂಡರು.‌ ಸಂಗೀತಾ‌ ಮತ್ತವಳ‌ ಅಣ್ಣನನ್ನು ಮನೆಯೊಳಗೆ ‌ಕರೆಸಿಕೊಂಡರು.‌

“ಚೆನ್ನಾಗಿ ಓದಿ ಒಳ್ಳೆಯ ರೀತಿಯಲ್ಲಿ ‌ನಿಮ್ಮ‌‌ ಜೀವನ ಕಟ್ಟಿಕೊಳ್ಳಿ. ‌ಬದುಕಿನ ಹೋರಾಟದಲ್ಲಿ ನಿಮ್ಮ‌ ಕಾಲಿನ ಮೇಲೆ ನೀವು ನಿಂತ ನಂತರವೇ ಮದುವೆಯ ಬಗ್ಗೆ ಯೋಚಿಸಿ.” ನಾವೇ ಮುಂದು ನಿಂತು ಸಂಜಯ್ ಹಾಗೂ ಸಂಗೀತಾಳ ಮದುವೆ ಮಾಡಿಸಿಕೊಡುತ್ತೇವೆ… ಎಂದು ಸ್ನೇಹಾಳ ಅಪ್ಪ ಮತ್ತು ಅಜ್ಜ‌ ಮಕ್ಕಳ ಮುಂದಿನ ಜೀವನಕ್ಕೆ ಹಾರೈಸಿದರು…….

(ಮುಕ್ತಾಯವಾಗಿದೆ…)

ಧನ್ಯವಾದಗಳೊಂದಿಗೆ,
—- ದೀಕ್ಷಿತ್ ದಾಸ್‌

Published by Deekshith Das..

ಒಂದು ಬರಹ ಲೇಖನಿಯಿಂದ ಗೀಚಲ್ಪಡುವ ಮೊದಲು, ಬರಹಗಾರನ ಎದೆಯಾಳದ ಕಲ್ಪನೆಯ ಕಡಲಿನಲ್ಲಿ‌.. ಅದಾಗಲೇ ಅಲೆಗಳಂತೆ ಚಿತ್ರಿಸಲ್ಪಟ್ಟರೂ, ಆ ಬರಹವು ಸ್ಪಷ್ಟವಾಗಿ ಗೋಚರಿಸುವುದು ಎದೆಯಾಳದಿಂದ ಜಿಗಿದು ಹರಿತವಾದ ಲೇಖನಿಯ ಕೆಳಗಿರುವ "ಬಿಳಿಯ ಹಾಳೆಯ ಮೇಲೆ.."

7 thoughts on “ಹೀಗೊಂದು ಅನುರಾಗ !!(ಭಾಗ 13 – The Last Episode)

  1. ತುಂಬಾ ತುಂಬಾ ಧನ್ಯವಾದಗಳು..💐💐
   ನಿಮ್ಮ ಸಹಕಾರ, ಅಭಿಪ್ರಾಯವೇ ನಮಗೆ ಮತ್ತಷ್ಟು ಗೀಚಲು ಪ್ರೇರಣೆ..
   ಮತ್ತೊಮ್ಮೆ ಧನ್ಯವಾದಗಳು😍

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: