
(Part – 9)
ಸೂರ್ಯ ಬರುವ ಮೊದಲೇ ಮುಂಜಾನೆ 4 ಗಂಟೆಗೆ ಮನೆಯಿಂದ ಹೊರಟಿದ್ದ ಸಂಜಯ್, ಬೆಳಕು ಚೆಲ್ಲಲು ಶುರುವಾಗಿ ಬೆಳಗ್ಗೆ ಸುಮಾರು 7 ಗಂಟೆಯಾದರೂ ಅವನಿಗೆ ಯಾವ ಸುಳಿವೂ ಸಿಗಲಿಲ್ಲ. ರಸ್ತೆ ಬದಿಯಲ್ಲಿ ಗುಡ್ಡಗಳೂ ಇದ್ದವು, ಕಲ್ಲುಗಳೂ ಇದ್ದವು ಜೊತೆಗೆ ಕತ್ತಲೆಯೂ ಹಬ್ಬಿತ್ತು.. ಆದರೆ ಕತ್ತಲೆಕಲ್ಲುಗುಡ್ಡ ಮಾತ್ರ ಅವನಿಗೆ ಸಿಕ್ಕಿರಲ್ಲಿಲ್ಲ. ಹಾದಿಯಲ್ಲಿದ್ದ ಜನರನ್ನು ಹಾಗು ಅಂಗಡಿಗಳಲ್ಲಿ ಇದ್ದ ಹಿರಿಯರನ್ನು ವಿಚಾರಿಸುತ್ತಾ ಮುಂದೆ ಸಾಗಿದ್ದೇ ಬಂತು, ಯಾವ ಪ್ರಯೋಜನವೂ ಆಗಲಿಲ್ಲ. ಸ್ನೇಹಾಳ ಮೊಬೈಲ್ ಗೆ ಎಷ್ಟೇ ಕಾಲ್ ಮಾಡಿದರು ಅದರಲ್ಲಿ ಯಾವ ಬದಲಾವಣೆಯೂ ಇರಲಿಲ್ಲ, ಸ್ವಿಚ್ ಆಫ್ ಅನ್ನುತ್ತಲೇ ಇತ್ತು. ದಾರಿಯ ಉದ್ದಕ್ಕೂ ವಿಚಾರಿಸುತ್ತಾ, ಮಧ್ಯಾಹ್ನದ ವೇಳೆಗೆ ತೀರ್ಥಹಳ್ಳಿ ನಗರವನ್ನು ತಲುಪಿದನು. ಅಲ್ಲಿಯೂ ಆದಷ್ಟು ವಿಚಾರಿಸದನು, ಯಾವ ಸುಳಿವೂ ಸಿಗಲಿಲ್ಲ.
ನಗರವನ್ನು ದಾಟಿ ಮುಂದೆ ಹೋಗದೇ, ಬಂದ ದಾರಿಯಲ್ಲೇ ತಿರುಗಿ ಯಾವುದಾದರು ರಸ್ತೆ ಒಳಗಿನ ಹಳ್ಳಿಯ ಜನರನ್ನು ಕೇಳಿದರೆ ಏನಾದರೂ ವಿಷಯ ಖಂಡಿತ ಸಿಗುತ್ತದೆ ಎಂದು ಭಾವಿಸಿ, ಹಿಂದಿರುಗಿದನು. ಇನ್ನೇನು ಸಂಜೆ ಆಗುತ್ತಿತ್ತು. ತಾನು ಹುಡುಕಿ ಬಂದ ಊರು ಸಿಗುವ ವರೆಗೂ ಮನೆಗೆ ವಾಪಾಸ್ಸಾಗುವ ಯಾವ ಆಲೋಚನೆಯೂ ಅವನಲ್ಲಿ ಇರಲಿಲ್ಲ. ಅದಾಗಲೇ ಕತ್ತಲೆ ಹಬ್ಬಲು ಆರಂಭ ವಾಗಿತ್ತು.
ಸ್ವಲ್ಪ ದೂರ ಹೋದ ನಂತರ ನಗರ ಸರಿದು, ಜನರಿಲ್ಲದ ಕತ್ತಲೆಯ ದಾರಿಯಲ್ಲಿ ಬರುವಾಗ, ರಸ್ತೆ ಬದಿಯಲ್ಲಿದ್ದ ವಯಸ್ಸಾದ ವ್ಯಕ್ತಿ ಒಬ್ಬರು, ಕೈನಲ್ಲಿ ಹಳೆಯ ಚೀಲ ಹಿಡಿದು ನಿಂತಿದ್ದನ್ನು ಗಮನಿಸಿದ ಸಂಜಯ್.. ಸ್ವಲ್ಪ ಮುಂದಕ್ಕೆ ಹೋಗಿ ಬೈಕ್ ನಿಲ್ಲಿಸಿದ. ಬೈಕ್ ಲೈಟ್ ಆಫ್ ಆಗುತ್ತಿದ್ದಂತೆ ಅಲ್ಲಿ ಕತ್ತಲೆ ಮತ್ತು ಜೋರಾಗಿ ಬೀಸುವ ಗಾಳಿಯದ್ದೇ ಕಾರುಬಾರು. ರಸ್ತೆಯಲ್ಲಿ ಹೋಗುತ್ತಿದ್ದ ಬೇರೆ ವಾಹನಗಳ ಲೈಟ್ ಬೆಳಕಿನಲ್ಲಿ ಆ ವಯಸ್ಸಾದ ವ್ಯಕ್ತಿ ಅಲ್ಲೇ ನಿಂತಿದ್ದನ್ನು ನೋಡಿ, ಸಂಜಯ್ ತನ್ನ ಬೈಕ್ ಆನ್ ಮಾಡಿ ಹಿಂದಿರುಗಿ ಅವರ ಬಳಿ ಹೋಗಿ ನಿಂತನು. ಆ ವ್ಯಕ್ತಿ ಸ್ವಲ್ಪವೂ ಅಲುಗಾಡಲಿಲ್ಲ. ಬೈಕಿನಿಂದ ಇಳಿದು, ನಾನು ಒಂದು ಊರನ್ನು ಹುಡುಕಿ ಬಂದಿರುವೆ, ಅದರ ಹೆಸರು ಕತ್ತಲೆಕಲ್ಲುಗುಡ್ಡ ಎಂದಾಗ ಆ ವ್ಯಕ್ತಿಯು ತನ್ನ ಕೆಂಪಾದ ಕಣ್ಣುಗಳಲ್ಲಿ ಇವನನ್ನೇ ನೋಡುತ್ತಾ, ಜೋರಾದ ಧ್ವನಿಯಿಂದ ಕತ್ತಲೆ..ಕಲ್ಗುಡ್ಡಾ…..!! ಈ ಹೆಸರಿನ ಊರು ಇಲ್ಲಿಲ್ಲಾ. ನೀನು ಯಾರೆಂಬುದು ನನಗೆ ಬೇಕಾಗಿಲ್ಲ, ಈ ಕ್ಷಣವೆ ಇಲ್ಲಿಂದ ಹೊರಡು ಎಂದನು. ಇಷ್ಟಕ್ಕೆ ಸುಮ್ಮನಾಗದ ಸಂಜಯ್, ನಿಮಗೆ ಆ ಊರಿನ ಬಗ್ಗೆ ಮಾಹಿತಿ ಇದ್ದರೆ ದಯವಿಟ್ಟು ಹೇಳಿ. ನನಗೆ ಆ ಊರು ತುಂಬಾ ಮುಖ್ಯ ಎನ್ನುವಷ್ಟರಲ್ಲಿ ಹಳೇಯ ಜೀಪ್ ಒಂದು ದೊಡ್ಡ ಸದ್ದಿನೊಂದಿಗೆ ಇವರಿದ್ದ ಸಮೀಪ ಬಂದು ನಿಂತಿತು. ಜೀಪ್ ನಲ್ಲಿದ್ದ 2-3 ಜನ ನೋಡಲು ಭಯಂಕರವಾಗಿದ್ದರು, ಮತ್ತು ಹಳೆಯ ವ್ಯಕ್ತಿಯ ಜೊತೆ ಮಾತನಾಡುತ್ತಿದ್ದ ಇವನನ್ನು ನೋಡಿದ ಕೂಡಲೇ, ಕತ್ತಿ ಹಿಡಿದು ಜೀಪಿನಿಂದ ಇಳಿದು ಬಂದ ಒಬ್ಬನು ಸಂಜಯ್ ಮೇಲೆ ಹಲ್ಲೆ ಮಾಡಲು ಬಂದಾಗ..ಕತ್ತಿಯಿದ್ದ ಅವನ ಕೈ ಹಿಡಿದ ಸಂಜಯ್, ಕತ್ತಿ ಏಟಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಅಲ್ಲೆ ಪಕ್ಕ ಇದ್ದ ಹಳೆಯ ವ್ಯಕ್ತಿ ನೋಡುತ್ತಾ ಸುಮ್ಮನೆ ಇದ್ದನು. ಸಂಜಯ್ ಜೋರಾಗಿ ಅವನಿಗೆ ಹೊಡಿಯಲು ಬಂದ ಆ ದಾಂಡಿಗನನ್ನು ಜೀಪಿನ ಕಡೆಗೆ ದೂಡಿ, ಯಾರಿವರು ?? ಈಗ್ಯಾಕೆ ಮಾಡುತ್ತಿದ್ದಾನೆ ?? ಹಾಗದರೆ ನಿಮಗೆ ಕತ್ತಲೆಕಲ್ಲುಗುಡ್ಡದ ಬಗ್ಗೆ ಗೊತ್ತಿದೆ !! ದಯವಿಟ್ಟು ಹೇಳಿ ?? ಎಂದು ಕೂಗಿದನು.
ಸಂಜಯ್ ನ ಸಿಟ್ಟು ಧೈರ್ಯವನ್ನು ನೋಡಿದ ಆ ಹಳೆಯ ವ್ಯಕ್ತಿ, ಇವನ ಬಳಿ ಬಂದು ಕತ್ತಿ ಹಿಡಿದ ಅವನ ಕಡೆಯ ದಾಂಡಿಗನನ್ನು ದೂರ ತಳ್ಳಿ.. ನೀನು ಇಲ್ಲಿಂದ ಹೊರಡು. ಆ ಊರು ಇಲ್ಲೆಲ್ಲೂ ಇಲ್ಲ, ನೀನದನ್ನು ಇನ್ನು ಮೇಲೆ ಹುಡುಕಿದರೆ ನಿನ್ನನ್ನು ನಿನ್ನ ಮನೆಯವರು ಹುಡುಕುವ ಹಾಗೆ ಆಗುತ್ತದೆ ಎಂದು ಎಚ್ಚರಿಸಿದ ಆ ಹಳೇಯ ವ್ಯಕ್ತಿ, ತನ್ನವರಿಗೆ ಜೀಪ್ ತಿರುಗಿಸಲಿ ಹೇಳಿದನು. ಅವರು ದೊಡ್ಡ ಸದ್ದು ಮಾಡುತ್ತಾ ಜೀಪ್ ತಿರುಗಿಸುವಾಗ, ಸಂಜಯ್ ಗೆ ತನ್ನ ಸ್ನೇಹಿತರ ಕಾಲ್ ಬಂದಿತು. ಕಾಲ್ ರಿಸೀವ್ ಮಾಡಿದ ಸಂಜಯ್, ಜೋರಾಗಿ ನಾನು ಮತ್ತೆ ಕಾಲ್ ಮಾಡುತ್ತೇನೆ ಎಂದನು. ಯಾಕಿಷ್ಟು ಕೂಗುತ್ತಿರುವೆ ?? ಸ್ನೇಹಾಳ ಊರು ಹುಡುಕಿದೆಯಾ ಎಂದು ಸ್ನೇಹಿತರು ಹೇಳುವುದನ್ನು ಕೇಳಿಸಿಕೊಂಡ ಸಂಜಯ್ ಇನ್ನೇನು ಉತ್ತರಿಸಬೇಕು ಅನ್ನುವಷ್ಟರಲ್ಲಿ…. ಹಳೆಯದಾದ ಆ ಜೀಪ್ ಒಂದೇ ಸಮನೆ ಆಫ್ ಆಯಿತು. ಇದನ್ನು ಗಮನಿಸದ ಸಂಜಯ್, ಕಾಲ್ ನಲ್ಲಿ “ಸ್ನೇಹ ಇರುವ ಕತ್ತಲೆಕಲ್ಲುಗುಡ್ಡದ ಬಗ್ಗೆ ಯಾರೊಬ್ಬರೂ ಹೇಳುತ್ತಿಲ್ಲ, ಹೇಗೆ ಊರು ಹುಡುಕಲಿ” ಎಂದು ಜೋರಾಗಿಯೇ ಹೇಳಿತ್ತಿದ್ದಂತೆ, ಜೀಪ್ ಆಫ್ ಆಗಿದನ್ನು ತಿಳಿದು ಹಳೆಯ ವ್ಯಕ್ತಿ ಮತ್ತು ಜೀಪಿನ ಕಡೆಗೆ ನೋಡಿದನು.
ಸ್ನೇಹಾ ಎನ್ನುವ ಹೆಸರು ಕಿವಿಗೆ ಬೀಳುತ್ತಿದ್ದಂತೆ.. ಅಲ್ಲೇ ನಿಂತಿದ್ದ ಹಳೆಯ ವ್ಯಕ್ತಿ ಭಯಂಕರವಾಗಿ ಇವನ ಕಡೆಗೆ ನೋಡುತ್ತಾ… ತನ್ನ ಕೈ ಚೀಲದಲ್ಲಿದ್ದ ಹಳೆಯ ಬ್ಯಾಟರಿಯನ್ನು ಸಿಟ್ಟಿನಿಂದ ಹೊರತೆಗೆದು ಸಂಜಯ್ ನ ಕಡೆಗೆ ಓಡಿ ಬಂದನು. ಇದೇ ವೇಳೆ ಜೀಪಿನಲ್ಲಿದ್ದ ದಾಂಡಿಗರೂ ಏಯ್… ಯಾರು ನೀನು ?? ಎಂದು ಜೋರಾಗಿ ಕಿರುಚುತ್ತಾ ಜೀಪಿನಿಂದ ಒಮ್ಮೆಲೇ ಹಾರಿ ಸಂಜಯ್ ನ ಕಡೆಗೆ ಬರುತ್ತಿರುವುದನ್ನು… ನೋಡಿ ಗಾಬರಿಯಿಂದ ಏನಾಗುತ್ತಿದ್ದೆ ಎಂಬುದೇ ತಿಳಿಯದ ಸಂಜಯ್, ಇಲ್ಲೇ ಇದ್ದರೆ ಇಷ್ಟೂ ಜನರು ಸೇರಿ ನನ್ನನ್ನು ಕೊಂದೆ ಬಿಡುತ್ತಾರೆ !! ಎಂದು ಯೋಚಿಸಿ… ರಸ್ತೆಯ ಮಧ್ಯೆಯೇ ಹಿಂದಿರುಗಿ ಅಲ್ಲಿಂದ ಓಡಲು ಶುರುಮಾಡಿದನು. ಕತ್ತಿಹಿಡಿದ ಇವರೆಲ್ಲರೂ ಸಂಜಯ್ ನ ಹಿಂದೆ ಓಡಿದರು…
(ಮುಂದುವರೆಯುತ್ತದೆ…)
—- ದೀಕ್ಷಿತ್ ದಾಸ್
Super bro😍
LikeLiked by 1 person
Thanks Keshav..💐
LikeLike