ಹೀಗೊಂದು ಅನುರಾಗ !! (ಭಾಗ – 5)

ಹೀಗೊಂದು ಅನುರಾಗ !! (Part – 5)

ದಟ್ಟವಾದ ಕಾಡು. ಕತ್ತಲು ಹಬ್ಬಿದಷ್ಟೇ ವೇಗವಾಗಿ ಕತ್ತಲು ಕರಗಿ ಬೆಳಕು ಮೂಡುವಾಗ ಇದೇನೋ‌ ಕಾಣದ ಶಕ್ತಿಯ ಕೈಚಳಕ !! ಎಂಬಂತೆ ಭಯಾನಕ ಹಾಗೂ ವಿಚಿತ್ರವಾದ ಈ ಸನ್ನಿವೇಶದಲ್ಲಿ ಬಂಧಿಯಾದ ಎಲ್ಲರಿಗೂ ಬದುಕುಳಿಯಲು ಉಳಿದ ಹಾದಿ ತಿಳಿಯದೇ ಕಂಗೆಟ್ಟರು. ನಾವೇಕೆ ಇಲ್ಲಿದ್ದೇವೆ ಇವರು ಹೇಗೆ ಇಲ್ಲಿ ಎಂದು ಒಬ್ಬರನೊಬ್ಬರು ಕೇಳಿಕೊಳ್ಳುವ ಹಾಗೆ ನೂರಾರು ಪ್ರಶ್ನೆಗಳ ಸಾಲು ಸಾಲು ಸುಳಿಯಲ್ಲಿ ಸಿಲುಕಿ ಸೊರಗಿದರು.
(ಒಂದೇ ಬೈಕಿನಲ್ಲಿರುವ ಹುಡುಗಿ ಮತ್ತು ಹುಡುಗ, ಇಲ್ಲಿನ ಪ್ರಮುಖ ಪಾತ್ರ ವಹಿಸುವ ಸ್ನೇಹ ಹಾಗೂ ಸಂಜಯ್. ಉಳಿದ ಎರಡು ಬೈಕ್ ನಲ್ಲಿರುವ ನಾಲ್ಕೂ ಜನರು ಸಂಜಯ್ ನ‌ ಆತ್ಮೀಯ ಗೆಳೆಯರು.)

ಎಲ್ಲಿದ್ದೇವೆ ಏನಾಗುತ್ತಿದೆ ?? ಎಂಬುದು ತಿಳಿಯದೇ ಏನೇನೋ ಆಗುತ್ತಿರುವ ಈ ವೇಳೆಯಲ್ಲಿ ಸ್ನೇಹ ಸಂಜಯ್ ಮತ್ತು ಉಳಿದ ಗೆಳೆಯರು ಮುಖಾಮುಖಿ ಆಗಿದ್ದಾರೆ. ಸಂಜಯ್ ತಡಮಾಡದೇ ಬೈಕ್ ಹಿಂದೆ ತಿರುಗಿಸಿ, ಸ್ನೇಹಳಿಗೆ ಬಿಗಿಯಾಗಿ ಕೂರುವಂತೆ ಹೇಳಿ, ಉಳಿದವರಿಗೆ ತನ್ನನ್ನು ಹಿಂಬಾಲಿಸುವಂತೆ‌ ಕೂಗುತ್ತಾ ಬೈಕಿನ ಬುಡ್ ಬುಡ್ ಎಂಬ ಶಬ್ದದ ಜೊತೆಗೆ ಆವೇಶದಿಂದ ಮಿಂಚಿನಂತೆ‌ ಹೊರಟನು. ಉಳಿದವರು ಅದೇ ವೇಗದಲ್ಲಿ ಹಿಂಬಾಲಿಸಿದರು. ಅದಾಗಲೇ ಸಂಜೆ ಸವೆದು ಚಂದಿರನ‌ ಆಗಮನವಾಗಿ ತಂಗಾಳಿ ಅಲ್ಲಿ ತಂಪನ್ನು ತೂಗುತ್ತಿದೆ. ಮೋಡ ಸೀಳಿ ಬಿಸಿಲು ಹೊರಬರುವ ಹಾಗೆ‌ ಭಯಾನಕ ಲೋಕವನ್ನು ದಾಟಿದ ಸಂಜಯ್ ಕಾಡಿನ ಆಚೆಗಿನ ಪ್ರಪಂಚವನ್ನು ತಲುಪಿದನು.

ಸದಾ ಬಿಡುವಿಲ್ಲದೇ ಜನರು ವಾಹನಗಳು ಓಡಾಡುವ ದಾರಿಯನ್ನು ಸೇರಿದ ಕೂಡಲೇ, ಸಂಜಯ್ ರಸ್ತೆಯ ಪಕ್ಕದಲ್ಲಿ ಬೈಕ್ ನಿಲ್ಲಿಸಿದನು. ಹಿಂಬಾಲಿ‌ಸಿ ಬರುತ್ತಿದ್ದ ಸ್ನೇಹಿತರು ಸಂಜಯ್ ಬಳಿ ಬಂದು ಅವನ ಧೈರ್ಯವನ್ನು ಹೊಗಳುತ್ತಾ ಸಾವಿನ ಮನೆಯ ಬಾಗಿಲು ಬಡಿದ ನಂತರವೂ ಜೀವ ಉಳಿಸಿದ ಸ್ನೇಹಿತ ಸಂಜಯ್ ಗೆ ಧನ್ಯವಾದಗಳನ್ನು ಹೇಳಿದರು‌. ಹಾಗೆಯೇ ಹಿಂದೆ ಇದ್ದ ಹುಡುಗಿ ಯಾರೆಂದು ಹಾಗೂ ಆಗಿಹೋದ ವಿಚಿತ್ರವನ್ನೆಲ್ಲಾ ಯೋಚಿಸುತ್ತಾ, ಬೈಕ್ ನಿಲ್ಲಿಸಿ ಅಲ್ಲೇ ರಸ್ತೆ ಬದಿಯಲ್ಲಿದ್ದ ಬೀದಿ ದೀಪದ ಕೆಳಗೆ ಕುಳಿತರು‌. ಸಂಜಯ್ ‌ಸ್ನೇಹ ಅದೇ ಬೀದಿ ದೀಪದ ಬಳಿ‌ ಬಂದು ನಿಂತರು‌. ಎಲ್ಲರಿಗೂ ಕಾಡಿನ ಮಧ್ಯೆ ಬರುವ ಹಾದಿಯಲ್ಲಿ ಗಿಡ ಬಳ್ಳಿ ಹಾಗು ಮುಳ್ಳುಗಳ ಸ್ಪರ್ಶದಿಂದ ಸಣ್ಣ ಪುಟ್ಟ ಗಾಯಗಳಾಗಿದ್ದವು.

ಆದರೂ‌ ಇಲ್ಲಿ ಸ್ನೇಹ,‌‌‌ ಬಂದ ದಾರಿಯ ನೆನೆದು ಹೊಳೆವ ಕಣ್ಣಿನಿಂದ ಗಾಬರಿಯೊಂದಿಗೆ ಒಬ್ಬೊಬ್ಬರನ್ನೇ ನೋಡುವಾಗ.. ಚೆಂದದ ಚೆಲುವೆಯ ಅಂದಕ್ಕೆ ಚಂದಿರನೇ ಮಾರುಹೋಗಿ ಅವಳನ್ನು ಆಶ್ಚರ್ಯದಿಂದ‌ ನೋಡುತ್ತಿರುವುದನ್ನು ಕಂಡ ಬೀದಿ ದೀಪಗಳು, ಅಸೂಯೆ ಇಂದ ಚಂದಿರನಿಗೆ ಅವಳು‌‌ ಕಾಣಬಾರದೆಂದು ದೀಪ ಉರಿಯುವುದನ್ನೇ ನಿಲ್ಲಿಸಿದಾಗ, ದೂರದ ಚಂದಿರನಿಗೆ ಸ್ನೇಹಾಳ ಸುಂದರವಾದ ಸೊಗಸನ್ನು ಅನುಭವಿಸಲಾಗದ ಹಾಗೆ ಮಾಡಿದ ಬೀದಿ ದೀಪಗಳ ಕಡೆ ನೋಡುತ್ತಾ ಸಿಟ್ಟಾದನು. ಪದಗಳಲ್ಲಿ ವರ್ಣಿಸಲು ಆಗದಷ್ಟು ಮುದ್ದಾಗಿರುವ ಅವಳನ್ನು ನೋಡುತ್ತಾ ಸ್ವಲ್ಪ ಪಕ್ಕದಲ್ಲೇ ಇದ್ದ ಸಂಜಯ್, ಅವಳನ್ನು ಕಣ್ತುಂಬಿಕೊಳ್ಳಲು ಮತ್ತೆ ಬೀದಿ ದೀಪಗಳು ಬೆಳಗುವಂತೆ ಬೇಡಿಕೊಳ್ಳುತ್ತಾ ನಿಂತನು. ಸಂಜಯ್ ನನ್ನು ಕೂಗಿ ಕರೆದು ಎಚ್ಚರಿಸಿದ ಸ್ನೇಹಿತರು ಆಸ್ಪತ್ರೆ‌ಯ ಕಡೆ ಹೋಗುವಂತೆ ಹೇಳಿದರು‌. ನಂತರ ಎಲ್ಲರೂ ಆಸ್ಪತ್ರೆ ಸೇರಿ ಸಣ್ಣ ಪುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆದು ಹೊರಗಡೆ ಊಟ ಮಾಡಿ ಹಾಸ್ಟೆಲ್ ಕಡೆ ಹೊರಟರು.‌ ಎಲ್ಲರೂ ಗಾಬರಿಯಲ್ಲೇ‌ ಇದ್ದರು. ಯಾರೊಬ್ಬರಿಗೂ ಮುಂದೇನು ಎಂಬುದು ಗೊತ್ತಿರಲಿಲ್ಲ‌.

ಹಿಂದೆ ಸ್ನೇಹಾಳನ್ನು‌ ಕೂರಿಸಿಕೊಂಡಿದ್ದ ಸಂಜಯ್, ತುಂಬಾನೆ‌ ಸಂತೋಷದಿಂದ ಮತ್ತು ಉತ್ಸಾಹದಿಂದ ತಂಗಾಳಿ‌ಯನ್ನೇ ತಬ್ಬಿಕೊಂಡು ಆನಂದಿಸುವಂತೆ ನಿಧಾನವಾಗಿ ಚಲಿಸುತ್ತಿದ್ದನು. ಅವನನ್ನು ತಡೆದ ಸ್ನೇಹಿತರು, ಅವರಿಬ್ಬರನ್ನೂ ಹಾಸ್ಟೆಲ್ ಸಮೀಪದಲ್ಲೇ ನಿಲ್ಲಿಸಿ..‌. ಇಲ್ಲಿ ಏನಾಗುತ್ತಿದೆ ಮತ್ತು ಇವಳು ಯಾರೆಂದು ಕೇಳಿ ?? ನಂತರ ಮತ್ತೆ ಗಾಬರಿಯಿಂದ ನಿನ್ನೆ ಸಂಜೆ ರೂಮಿನಲ್ಲಿ ನಾವು ಕೊಟ್ಟ ಆ ಉಂಗುರ ಏನಾಯಿತು ?? ಮೊದಲು ಹೇಳು‌ ಎಂದು ಜೋರಾಗಿಯೇ ಗದರಿಸಿದರು. ಆ ಉಂಗುರದಿಂದ ಒಂದು ಪ್ರಾಣವೇ ಹೋಯಿತು ಎನ್ನುತ್ತಾ ಕಣ್ಣೀರು ಹಾಕಿದರು. ನಾವೆಲ್ಲರೂ ಜೀವಂತ ಉಳಿದಿರುವುದನ್ನು ಈಗಲೂ ನಂಬಲಾಗುತ್ತಿಲ್ಲ.. ಆದರೆ ನೀನಿಲ್ಲಿ ಇವಳ ಜೊತೆ ನಿನ್ನದೇ ಲೋಕದಲ್ಲಿದ್ದು ಏನೂ ಆಗಿಲ್ಲವೆಂಬಂತೆ ಇರುವುದನ್ನು ಹೇಳುತ್ತಾ‌.. ಸ್ನೇಹಿತರೆಲ್ಲರೂ ಸಂಜಯ್ ನನ್ನು ನೂರಾರು ಪ್ರಶ್ನೆಗಳಿಂದ ಕೂಡಿ ಹಾಕಿದರು. ಇದುವರೆಗೂ ಉತ್ಸಾಯದಿಂದ ಇದ್ದ ಸಂಜಯ್, ಇವರ ಮಾತುಗಳನ್ನು ಕೇಳಿ ಗಾಬರಿ‌ ಹಾಗೂ ಗೊಂದಲದಿಂದ ಸ್ನೇಹಾಳ ಕಡೆಗೆ ನೋಡಿದನು‌.‌‌ ಅವಳು ಮೊದಲೇ ಭಯದಿಂದ ಇದ್ದ ಕಾರಣ, ಅವಳಿಗೆ ಏನೊಂದೂ ಅರ್ಥವಾಗದೇ ಮತ್ತದೇ ಮುಗ್ಧತೆಯಿಂದ ಎಲ್ಲರನ್ನೂ ನೋಡುತ್ತಾ ನಿಂತಳು.

ಇದನ್ನೆಲ್ಲಾ ಕೇಳಿಸಿಕೊಂಡ ಸಂಜಯ್, ಉಂಗುರ ನನ್ನ ಬಳಿ‌ ಇಲ್ಲಾ ಎನ್ನುತ್ತಾ.. ನಾನು ಇವತ್ತೇ ನಿಮ್ಮನ್ನು ನೋಡಿದ್ದು ಮತ್ತು ನೀವು ಹೇಗೆ ಕಾಡಿನಲ್ಲಿ ಬಂದಿದ್ದು ಎಂದು ಸ್ನೇಹಿತರನ್ನೇ ಪ್ರಶ್ನಿಸಿದನು ??  ಆ ಉಂಗುರ ಮತ್ತೆ ಕಾಡಿನಲ್ಲಿ ಕಳ್ಳನು ಜಾತ್ರೆ ದಿನದ ರಾತ್ರಿಯೇ ನನ್ನಿಂದ ಕಸಿದುಕೊಂಡನು ಎಂದು ಹೇಳಿ ಪಕ್ಕದಲ್ಲಿರುವ ಅವಳನ್ನು ನೋಡುತ್ತಾ ಜಾತ್ರೆಯ ರಾತ್ರಿ ಆದದ್ದೆಲ್ಲಾ ನನ್ನ ಜೀವನದ ಬಹುದೊಡ್ಡ ಮರೆಯಲಾಗದ ಅನುಭವ ಎಂಬುದಾಗಿ‌‌ ಹೇಳಿದನು. ಇದನ್ನೆಲ್ಲಾ ಕೇಳಿಸಿಕೊಂಡು ಚಿಂತಿಸುತ್ತಲೇ ಭಯದಿಂದ ಸ್ನೇಹಿತರು,‌ ಅದೇ ಕಳ್ಳನು ನಮ್ಮೆದುರೇ ಪ್ರಾಣ ಬಿಟ್ಟನು ಮತ್ತು ಕಳ್ಳ ನಮಗೆ ನೀಡಿದ ಉಂಗುರವನ್ನೇ ನಾವು‌ ನಿನಗೆ ಸಂಜೆ ಕೊಟ್ಟೆವು. ನಂತರ ನೀನೇ ನಮ್ಮನ್ನು ಕಾಡಿಗೆ ಕರೆದು ಕೊಂಡು ಹೋಗಿದ್ದು ಹಾಗೂ ಕಾಡಿನ ಆ ದೊಡ್ಡ ಮರದ ಕೆಳಗೆ ನೀನು ಮಾಯವಾಗಿ, ನಾವೆಲ್ಲರೂ‌ ಕಂಡ ಭಯದ ಅನುಭವ.. ಎಲ್ಲವನ್ನೂ ಸಂಜಯ್ ನಿಗೆ ಮೊದಲಿನಿಂದ ಆಗಿಹೋದದನ್ನೆಲ್ಲಾ ವಿವರಿಸಿದರು‌. ಇದನ್ನೆಲ್ಲಾ ಕೇಳಿಸಿಕೊಂಡ ಸಂಜಯ್ ದಿಕ್ಕೆಟ್ಟನು. “ನನಗೆ ತಿಳಿಯದೇ ಇಲ್ಲೇನೋ ಆಗಿದೆ” ಎಂದು ಆಳವಾಗಿ ಚಿಂತಿಸುತ್ತಾ.. ನಾನು ರಾತ್ರಿ ಕಂಡ ಎಲ್ಲಾ ವಿಚಿತ್ರಗಳಿಗೂ ಒಂದಕ್ಕೊಂದು ಸಂಬಂಧವಿದೆ ಎಂದು ಹೇಳುತ್ತಾ ಸ್ನೇಹಿತರಿಗೆ ತನ್ನನ್ನು ನಂಬುವಂತೆ ಕೇಳಿಕೊಂಡನು.‌ ನಿನ್ನೆ ಸಂಜೆ ನಾನು ಎಲ್ಲಿಗೂ ಬರಲಿಲ್ಲ ಮತ್ತು ಉಂಗುರವೂ ನನ್ನ ಬಳಿಯಿಲ್ಲಾ.‌ ನಿಮ್ಮನ್ನು ಕಾಡಿಗೆ ಕರೆದುಕೊಂಡು‌ ಬಂದವನೂ ನಾನಲ್ಲ ಎಂದನು. ಇದನ್ನೆಲ್ಲಾ ಆಲಿಸುತ್ತಿದ್ದ ಅವಳು ತನಗೆ ಭಯವಾಗುತ್ತಿದೆ ಮತ್ತು ವಿಶ್ರಾಂತಿ ಬೇಕೆಂದು ಹಾಸ್ಟೆಲ್ ಗೆ ಬಿಡುವಂತೆ ಕೇಳಿದಳು. ನಂತರ ಆಕೆಯನ್ನು ಹಾಸ್ಟೆಲ್ ಗೆ ಬಿಟ್ಟು ನಾಳೆ ಬೆಳಗ್ಗೆ ಬೇಗ ಸಿಗುವಂತೆ ಹೇಳಿದಾಗ, “ಕಾಡಿನಲ್ಲಿ ತಾನು ಕಳೆದುಕೊಂಡ ಪುಸ್ತಕ ತುಂಬಾನೆ ಮುಖ್ಯವಾದದ್ದು‌ ಮತ್ತು ಅದನ್ನು ನಾನು ಹೇಗಾದರು ಹುಡುಕಲೇ ಬೇಕು,‌ ನಿಮ್ಮ ಸಹಾಯ ಬೇಕಾಗಿದೆ ಎಂದು ಸಂಜಯ್ ಮತ್ತು ಉಳಿದವರಿಗೆ ತಿಳಿಸಿ” ಅಲ್ಲಿಂದ ಹೊರಟು‌ ಹೋದಳು. ಆವಳು ಹಾಸ್ಟೆಲ್ ಒಳಗೆ ಹೋಗುತ್ತಿದಂತೆಯೇ ಇತ್ತ ಕಡೆ ಬೆಳದಿಂಗಳ ಚಂದಿರನು ಅವಳ ಚೆಲುವನ್ನು ಮತ್ತೆ ಈ‌ ರಾತ್ರಿ ನೋಡಲಾಗುವುದಿಲ್ಲ ಎಂದು ಸಪ್ಪೆ‌ ಮೋರೆಯೊಂದಿಗೆ ಸುಮ್ಮನಾದನು‌. ಅಲ್ಲಿಂದ ಹೊರಟ ಸಂಜಯ್ ಮತ್ತು ಸ್ನೇಹಿತರು ಮತ್ತೆ ರೂಮಿನಲ್ಲಿ ಒಟ್ಟಿಗೆ ಸೇರಿದರು.

ಸ್ನೇಹಿತರಿಗೆ ಈಗ ಎಲ್ಲವೂ ಅರ್ಥವಾಗುತ್ತಿತ್ತು. ದೆವ್ವ ಭೂತಗಳ ಪರಿಕಲ್ಪನೆಗಳು ಅವರ ಯೋಚನೆಗಳಲ್ಲಿ‌ ಜೀವ ಪಡೆದವು. ಸಂಜಯ್ ನಿಗೆ ಎಲ್ಲವೂ ವಿವರಿಸುವಂತೆ ಒತ್ತಾಯಿಸಿದರು. ಜಾತ್ರೆಯಿಂದ ರಾತ್ರಿ ಉಂಗುರ ಪಡೆದು ಬೈಕ್ ನಲ್ಲಿ‌ ಹೊರಟು ಹೋದ ನಂತರ ಏನೇನಾಯಿತು ಎಂದು ಎಲ್ಲವನ್ನೂ ವಿವರಿಸುವಂತೆ ಕೇಳಿದರು‌. ನಂತರ ಸಂಜಯ್ ತಾನು ಕಾಡಿನ ರಸ್ತೆಯಲ್ಲಿ‌ ಹೋಗಿದ್ದು, ಅಲ್ಲಿ ಆಶ್ಚರ್ಯ ಎಂಬಂತೆ ಅವಳ ಪರಿಚಯವಾಗಿದ್ದು, ಕಳ್ಳನು ಮತ್ತೆ ಉಂಗುರ ಪಡೆಯಲು ತನ್ನನ್ನು ಹಿಂಬಾಲಿಸಿದ್ದು…‌ ಹೀಗೆ ಎಲ್ಲವನ್ನೂ ಒಂದೊಂದೇ ಎಳೆಯಂತೆ ವಿವರಿಸಲು ಪ್ರಾರಂಭಿಸಿದನು !!??

(ಮುಂದುವರೆಯುತ್ತದೆ..)

                                              — ದೀಕ್ಷಿತ್ ದಾಸ್

Published by Deekshith Das..

ಒಂದು ಬರಹ ಲೇಖನಿಯಿಂದ ಗೀಚಲ್ಪಡುವ ಮೊದಲು, ಬರಹಗಾರನ ಎದೆಯಾಳದ ಕಲ್ಪನೆಯ ಕಡಲಿನಲ್ಲಿ‌.. ಅದಾಗಲೇ ಅಲೆಗಳಂತೆ ಚಿತ್ರಿಸಲ್ಪಟ್ಟರೂ, ಆ ಬರಹವು ಸ್ಪಷ್ಟವಾಗಿ ಗೋಚರಿಸುವುದು ಎದೆಯಾಳದಿಂದ ಜಿಗಿದು ಹರಿತವಾದ ಲೇಖನಿಯ ಕೆಳಗಿರುವ "ಬಿಳಿಯ ಹಾಳೆಯ ಮೇಲೆ.."

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: