
Part – 1
ಆವನು ಆಕೆಗಾಗಿ ಲೈಬ್ರರಿಯಲ್ಲಿ ಕಾಯುತ್ತಾ ಕುಳಿತಿದ್ದನು. ಪುಟಗಳು ತಿರುಗುತ್ತಿದ್ದವು. ಇದೇ ವೇಳೆಗೆ ಅವನ ಕಾಯುವಿಕೆಯ ಕಾರಣದ ಹಿಂದಿರುವ ಸಿಹಿ ಗಳಿಗೆಯ ನೆನೆದು ಮುಗುಳು ನಗುತ್ತಾ, ಸುತ್ತಲೂ ನೋಡಿ ಆಕೆ ಬಂದಿರಬಹುದಾ ಎಂದು ತನ್ನನ್ನು ತಾನೇ ಕೇಳಿಕೊಂಡನು.
ವಾರಗಳ ಹಿಂದೆ ಅವನು ದಿನಪತ್ರಿಕೆ ಓದಲು ಕಾಲೇಜಿನ ಲೈಬ್ರರಿಯಲ್ಲಿನ ಟೇಬಲ್ ಮೇಲೆ ಕುಳಿತಾಗ ಅಲ್ಲೇ ಪಕ್ಕದಲ್ಲಿದ ಒಂದು ನೋಟ್ ಬುಕ್ ನೋಡಿ, ಏನಿರಬಹುದು ಎಂದು ಅದನ್ನು ತೆರೆದು ನೋಡಿದಾಗ ಅದರಲ್ಲಿನ ಮುದ್ದಾದ ಕನ್ನಡ ಅಕ್ಷರಗಳಿಗೆ ಮನಸೋತು, ಅದು ಯಾರದೆಂದು ತಿಳಿಯುವ ಅವನ ಕುತೂಹಲಕ್ಕೆ ಉತ್ತರ ಸಿಗಲೇ ಇಲ್ಲ. ಅದೊಂದು ಹೆಸರು ಉಲ್ಲೇಖಿಸದ ಪುಸ್ತಕವಾಗಿತ್ತು. ಯಾರದು ಎಂದು ತಿಳಿಯುವ ಯಾವುದೇ ಅವಕಾಶ ಅವನಿಗಿರಲಿಲ್ಲ. ಆಕರ್ಷಕ ಅಕ್ಷರದಿಂದಲೇ ಕೂಡಿದ್ದ ಆ ಬುಕ್ಕನ್ನು ಓದಲಾರಂಬಿಸಿದ. ಅದರಲ್ಲಿನ ಒಂದೊಂದು ಪದ, ಪದವನ್ನು ಪೋಣಿಸಿದ್ದ ರೀತಿ, ಸಾಲುಗಳ ಭಾವಾರ್ಥ ಎಲ್ಲವೂ ಅದ್ಭುತ. ಅವನು ದಿನಪತ್ರಿಕೆ ಓದಲು ಬಂದ ವಿಷಯವನ್ನೇ ಮರೆತು ಆ ಮುದ್ದಾದ ಅಕ್ಷರಗಳ ಓದುತ್ತಾ ಮೈಮರೆತು ತನ್ನ ಕಲ್ಪನಾ ಲೋಕಕ್ಕೆ ಲೋಪವಾಗದಂತೆ ಬರೆದ ಸಾಲುಗಳೊಂದಿಗೆ ಬೆರೆತು ಹೋದನು. ಅದು ಕೇವಲ ಕಥೆ ಕವನ ಕವಿತೆ ತುಂಬಿದ ಪುಸ್ತಕ ವಾಗಿರದೇ, ಸಾಲುಗಳ ಜೊತೆಗೇ ಸಂದರ್ಭಕ್ಕೆ ಸಮನಾದ ಚಿತ್ರಗಳೂ ಅಲ್ಲಿ ರಚಿಸಲ್ಪಟ್ಟಿದ್ದವು. ಅದರಲ್ಲಿನ ಪ್ರತಿ ಸಾಲುಗಳ ಸಿಹಿಯೇ ಕೂಗಿ ಹೇಳುತ್ತಿದ್ದವು ಅದೊಂದು ಆಸೆ ಕನಸು ಹೊತ್ತು ಜೀವನದ ಹಾಸ್ಯ, ಗಂಭೀರತೆ, ಸುಖ ದುಃಖ, ನೋವು ನಲಿವು ಹಾಗೆಯೇ ಪ್ರಣಯದ ಅಂಶವೂ ಸಾರಿ ಹೇಳುತ್ತಿದ್ದವು – ಆ ರಚನೆಯ ಹಿಂದಿರುವುದು ಮನಸ್ಸಿನಲ್ಲಿ ಆಸೆ ಕನಸುಗಳೊಂದಿಗೆ ಜೀವಿಸುತ್ತಿರುವ ಹುಡುಗಿ ಎಂಬುದು. ಕೆಲವೇ ಪುಟ ಸವಿಯುವ ವೇಳೆಯಲ್ಲಿಯೇ ಸೂರ್ಯ ಮುಳುಗುವ ಸಮಯ ಸಮೀಪಿಸಿತ್ತು. ಅಕೆಯ ಬರಹಗಳ ಪುಸ್ತಕದ ಜೊತೆಗೇ ಹಾಸ್ಟೆಲ್ ಸೇರಿದ ಅವನು ಅದನ್ನು ಯಾರ ಕೈಗೂ ಸಿಗದ ಹಾಗೆ ಬಚ್ಚಿಟ್ಟು ರಾತ್ರಿ ಪೂರ್ತಿ ಆಕೆ ಯಾರಿರ ಬಹುದು ಎಂಬ ಯೋಚನೆಯಲ್ಲಿಯೇ ನಿದ್ರೆಗೆ ಜಾರಿ, ಮತ್ತೆ ಬೆಳಗ್ಗೆ ಹೊಸ ಹುರುಪು ಹೊಸ ಆಸೆ ಹೊಸ ಕುತೂಹಲದೊಂದಿಗೆ ಆ ಪುಸ್ತಕದ ಜೊತೆಗೆ ಲೈಬ್ರರಿಗೆ ಬಂದು ಮತ್ತದೇ ಟೇಬಲ್ಗೆ ಬಂದು ಆಕೆಯ ಉಳಿದ ಪುಟಗಳನ್ನು ಓದಲು ಪ್ರಾರಂಭಿಸದನು. ಇನ್ನೇನು ಕೆಲವೇ ಪುಟ ಉಳಿದಿರುವಾಗ ಮತ್ತೆ ಸೂರ್ಯ ತನ್ನ ದಿನನಿತ್ಯದ ಕಾರ್ಯ ಮುಗಿಸಿ ಹೊರಟಿರುವುದನ್ನು ಅರಿತು ಹಾಸ್ಟೆಲ್ ದಾರಿ ಹಿಡಿದ. ಈ ರಾತ್ರಿಯು ಅವನು ಅಕೆಯ ನೆನಪಲ್ಲೇ ರಾತ್ರಿ ಕಳೆದು ಮರುದಿನ ಮತ್ತೆ ಅದೇ ಟೇಬಲ್ ಬಳಿ ಕುಳಿತು ಎಲ್ಲಾ ಪುಟಗಳನ್ನು ಓದಿ ಮುಗಿಸಿದ ಅವನಿಗೆ ಅವಳ ನೋಡಬೇಕು, ಅವಳ ಸಾಲುಗಳ ಕುರಿತು ಮನಬಿಚ್ಚಿ ಮಾತನಾಡಲೇ ಬೇಕೆಂಬ ಆಸೆಯಿಂದ, ಅವಳು ಈ ಪುಸ್ತಕ ಇಲ್ಲಿ ಏಕೆ ಇಟ್ಟಳು? ಮರೆತು ಬಿಟ್ಟಿರುವಳೇ? ಯಾರಾದಾರು ಅವಳನು ರೇಗಿಸಲು ಆಕೆಗೆ ತಿಳಿಯದೇ ಇಲ್ಲಿ ತಂದಿಟ್ಟರೇ…ಎಂಬ ಸಾವಿರ ಸಾವಿರ ಪ್ರಶ್ನೆಗಳೊಂದಿಗೆ ಅಲ್ಲಿಯೇ ಕುಳಿತನು. ಈ ಮೂರು ದಿನ ಅವನು ಆ ಪುಸ್ತಕದ ಪರಿಚಯದಿಂದಾಗಿ ತನ್ನ ಆಟ ಪಾಟ ಸ್ನೇಹಿತರೆಲ್ಲದರ ಜೊತೆ ಇದ್ದರೂ ಮನಸ್ಸಿನ ತುಂಬೆಲ್ಲಾ ಅವಳ ಹುಡುಕಾಟವೇ ತುಂಬಿತ್ತು. ಮಾರನೆಯ ದಿನ ಅದೇ ಟೇಬಲ್ ಬಳಿ ಹೋಗಿ ಆ ಪುಸ್ತಕವ ಕೈಯಲ್ಲಿಡಿದು ಎಲ್ಲರ ಮುಖವನ್ನೂ ನೋಡಲಾರಂಭಿಸಿದ. ಅವನನ್ನು ನೋಡಿದ ಯಾರೊಬ್ಬರೂ ಆವನನ್ನಾಗಲೀ ಆ ಪುಸ್ತಕವನ್ನಾಗಲೀ ನೋಡಿ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದನ್ನು ಗಮನಿಸಿದವನಿಗೆ, ಈ ಪುಸ್ತಕದ ಹುಡುಗಿ ಇಲ್ಲಿ ಇಲ್ಲ ಎಂಬುದು ಅರಿವಾಯಿತು.
ಹೀಗೆ ಅವನು ಪ್ರತಿ ದಿನವೂ ಲೈಬ್ರರಿಗೆ ಬಂದು ಆ ಪುಸ್ತಕದ ಪುಟ ತಿರುವುತ್ತಾ ಅವಳ ಬಗ್ಗೆ ಯೋಚಿಸುತ್ತಾ, ಸಂಜೆ ವಾಪಾಸಾಗುವ ಸೂರ್ಯನ ಜೊತೆಗೇ ಹಾಸ್ಟೆಲ್ ಕಾಣುತ್ತಿದ್ದನು. ಸುಮಾರು ಒಂದು ವಾರ ಹೀಗೆಯೇ ಆಗಿ ಮುಂದಿನ ವಾರ ಮತ್ತೆ ಹೊಸ ಆಸೆ ಕನಸು ಹೊತ್ತು ಅದೇ ಟೇಬಲ್ ಬಳಿ ಕುಳಿತನು. ಆವನು ಆಕೆಗಾಗಿ ಲೈಬ್ರರಿಯಲ್ಲಿ ಕಾಯುತ್ತಾ ಕುಳಿತಿದ್ದನು. ಪುಟಗಳು ತಿರುಗುತ್ತಿದ್ದವು….
ಅವನ ಮನಸ್ಸಿನ ತುಂಬೆಲ್ಲಾ ಭಯ ಆವರಿಸಲು ಶುರುವಾಯಿತು. ಆಕೆ ಸಿಗದಿದ್ದರೆ ನಾನೇನು ಮಾಡಲಿ ಹೇಗೆ ಪತ್ತೆ ಹಚ್ಚಲಿ, ಅವಳು ಯಾರೆಂಬುದು ತಿಳಿಯದಿದ್ದರೆ ನಾನೇಗೆ ದಿನ ಕಳಿಯಲಿ, ಅವಳಿಲ್ಲದೆ ಇನ್ನೆಷ್ಟು ದಿನ ಈ ಪುಟಗಳ ತಿರುವುತ್ತಾ ಹೇಗಿರಲಿ ಎಂಬ ಪ್ರಶ್ನೆಗಳೊಂದಿಗೆ ಪರಿತಪಿಸುತ್ತಾ ಭಾರವಾದ ಮನಸ್ಸಿನಿಂದ ತನ್ನ ಪಕ್ಕದ ಗಾಜಿನ ಕಿಟಕಿಯ ಕಡೆ ತಿರುಗಿ ಮುಳುಗಲು ಸಜ್ಜಾದ ಸೂರ್ಯನನ್ನು ನೋಡುತ್ತಾ ಆವಳ ಪುಸ್ತಕವನ್ನು ತನ್ನ ಕೈಯಲ್ಲಿ ಬಿಗಿಯಾಗಿ ಹಿಡಿದು ನಿದ್ರೆಗೆ ಜಾರಿದನು. ವಾರಪೂರ್ತಿ ಸೂರ್ಯನ ಜೊತೆಗೆ ವಾಪಾಸಾಗುತ್ತಿದ್ದನು ಆದರೆ ಇಂದು ನಿದ್ರೆಗೆ ಜಾರಿದ ಅವನನ್ನು ಬಿಟ್ಟು, ಸಂಜೆ ಸೂರ್ಯ ಒಬ್ಬನೇ ಮನೆ ದಾರಿ ಹಿಡಿದ.
ನಿದ್ರೆಯಲ್ಲಿದ ಅವನಿಗೆ ಅವನ ಕೈಯಲ್ಲಿದ್ದ ಪುಸ್ತಕವ ಬಿಡಿಸಿಕೊಳ್ಳಲು ನಿದಾನವಾಗಿ ಅದನ್ನು ಎಳೆಯುತ್ತಾ ಇರುವುದನ್ನು ಅರಿತ ಅವನು ಏನೂ ಪ್ರತಿಕ್ರಿಯಿಸದೇ ತನ್ನ ಕಣ್ಣು ತೆರೆದು ನೋಡಿದಾಗ ಅವನಿಗೆ ಕತ್ತಲಾಗಿದ್ದ ಅರಿವಾಯಿತು. ಸೂರ್ಯನ ಜೊತೆಗೆ ನಾನಿಂದು ಸಾಗದೇ ನಿದ್ರೆಗೆ ಜೊತೆ ಯಾಗಿದ್ದು ಯೋಜಿಸುತ್ತಾ ಈ ಪುಸ್ತಕವನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ನಿದಾನವಾಗಿ ತಲೆ ಎತ್ತದೇ ಪುಸ್ತಕದ ಕಡೆ ಮುಖ ಮಾಡಿದನು. ಮುದ್ದಾದ ಅವಳ ಕೈಬೆರಳ ತುದಿಯಲ್ಲಿ ಪುಸ್ತಕವ ಹಿಡಿದುದ್ದನ್ನು ಗಮನಿಸಿದ ಇವನಿಗೆ ಅವಳ ನೋಡುವ ಕೂತೂಹಲಕ್ಕೆ, ಹುಣ್ಣಿಮೆ ಚಂದ್ರನ ಬೇಟಿಮಾಡಲು ಆಕಾಶಕ್ಕೇ ಏಣಿ ಸಿಕ್ಕ ಖುಷಿಯಲ್ಲಿ ಅವಳ ನೋಡುವ ಮುನ್ನ ಒಮ್ಮೆ ಕಣ್ಣು ಮುಚ್ಚಿ, ತಾನು ಒಂದು ವಾರದಿಂದ ಪರಿತಪಿಸಿ ಕಾದ ಈ ಪುಸ್ತಕದ ಒಡತಿ ನನ್ನೆದುರೇ ಇರುವುದನ್ನ ನೆನೆದು, ಇನ್ನೇನು ತಲೆ ಎತ್ತಿ ಕಣ್ ತೆರುದು ನೋಡಬೇಕು ಅನ್ನುವಾಗ, ಪುಸ್ತಕವ ಎಳೆದು ತನ್ನ ಕೈ ಸೇರಿಸಿಕೊಂಡ ಅವಳು, ಹಿಂದಿರುಗಿ ನೋಡದೇ ಅಲ್ಲಿಂದ…..
(ಮುಂದುವರೆಯುತ್ತದೆ…)
—- ದೀಕ್ಷಿತ್ ದಾಸ್
Very interesting
LikeLiked by 1 person
Thank you.. 💐
LikeLike
Thank You… Very much💐
LikeLike
Nice .
LikeLiked by 1 person
Thank you..💐💐
LikeLike