“ಕನಸು ಕಾಣುವ ಮನಸ್ಸುಗಳಿಗೆ..”

ಕನಸಿನ ಲೋಕವೇ ಬೇರೆ.. ವಾಸ್ತವಿಕ ಬದುಕೇ ಬೇರೆ.. ಬಣ್ಣದ ಲೋಕದಲ್ಲಿ ಕನಸುಗಳೇ ಜೀವಿಸಿರುತ್ತವೆ, ಎಲ್ಲಿಯವರೆಗೇ ??? “ಕನಸುಗಳ ಲೋಕದಲ್ಲಿ ವಾಸ್ತವದ ಎದುರು ಕನಸುಗಳೆಲ್ಲವೂ ನುಚ್ಚು ನೂರಾಗುವ ವರೆಗೆ..”

ಹೊಸ ಯೋಚನೆ ಹೊಸ ಯೋಜನೆ ಹೊಸ ಭೇಟಿ ಹೊಸ ಸಂಬಂಧ ಹೊಸ ಹುರುಪು ಹೊಸ ಅನುಭವ…ಹೀಗೆ ಕನಸು ಹುಟ್ಟಲು ಕಾರಣಗಳು ಹಲವು. ಹೀಗೆ ಹುಟ್ಟುವ ಕನಸುಗಳೆಲ್ಲವೂ ತಮ್ಮದೇ ಹಾದಿಯ ಬಣ್ಣದ ಲೋಕದಲ್ಲಿ ಕನಸುಗಳ ಕೂಡಿಸುತ್ತಾ ನಮ್ಮ ಬದುಕಿನ ಜೊತೆಗೇ ನಮ್ಮ ನರೆಳಿನ ಹಾಗೆ ನಮ್ಮಲ್ಲೇ ಜೀವಿಸುತ್ತಾ, ಪ್ರತಿ ಕ್ಷಣ ಹೊಸ ಆಲೋಚನೆಗಳಿಂದ ಕಂಡ ಕನಸನ್ನು ಬಲವಾಗಿಸುತ್ತಾ ಬದುಕಿರುತ್ತವೆ.

ಹೀಗಿರುವ ಕನಸಿನ ಲೋಕ ಮುಂದೆಂದೂ ಮರುಕಳಿಸದ ಹಾಗೇ ಸಮಾಧಿ ಯಾಗುತ್ತದೆ, ಎಂದರೆ ಅದು ನಂಬಲು ಅಸಾಧ್ಯ, ಆದರೂ‌ ಸತ್ಯ.. ಹೇಗೆ ???

ಕನಸು ಕಾಣುವಾಗ ಅಲ್ಲಿ ಬಲವಾಗಿರುವುದೇ ನಂಬಿಕೆ ವಿಶ್ವಾಸ. ಒಂದು ವಿಷಯ ಒಂದು ವಸ್ತು ಒಂದು ವ್ಯಕ್ತಿ ಹೀಗೆ ಯಾವುದರ ಮೇಲೆ ಕನಸು ಕಂಡರೂ ಅಲ್ಲಿ ನಾವು ತುಂಬಾ ಆಳವಾಗಿ ನಂಬಿರುತ್ತೇವೆ. ನಾವಿಟ್ಟ ನಂಬಿಕೆಯ ತೀವ್ರತೆ ಎಷ್ಟೆಂದರೆ ನೆರವೇರದ ಕೆಲವು ವಿಚಾರಗಳ‌ ಮೇಲೂ ಕನಸು ಕಟ್ಟಿರುತ್ತೇವೆ, ಇದಕ್ಕೆ ಕಾರಣವೂ ಅದೇ ವಿಶ್ವಾಸ.

ಹೀಗೆ ನಂಬಿಕೆ ಎಂಬ ಬಲವಾದ ಅಡಿಪಾಯದ ಮೇಲೆ ಸಾವಿರಾರು ಕನಸುಗಳು ಬಲವಾಗಿ ನಿಂತಿರುವಾಗ, ಅದೇ ಅತಿಯಾದ ನಂಬಿಕೆಗೆ ಮೋಸವಾದಾಗ ?? …..ಕನಸುಗಳ ಮಾರಣ ಹೋಮಕ್ಕೆ ಅದಾಗಲೇ ವೇದಿಕೆ ಸಿದ್ದವಾದಂತೆ. ಒಂದೊಂದಾಗಿ ಕನಸೆಲ್ಲವೂ ಮರೆಯಾದಂತೆ ಅನಿಸುವಾಗ ಅದರ ನೋವಿಗೆ ಕಂಡಿದ್ದ ಕನಸೆಲ್ಲವೂ ಜೇನಿನ ತಟ್ಟಿ ಯನ್ನು ಹಿಂಡಿದಾಗ ಹೊರಬರುವ ತುಪ್ಪದಂತೆ ಕನಸಿನ ಲೋಕವು ಮನಸ್ಸಿನೊಳಗಿಂದ ಹೊರಬಂದರೂ ಅದು ತುಪ್ಪದಂತೆ ಸಿಹಿಯೇ‌ ಅಗಿರುತ್ತದೆ, ಏಕೆಂದರೆ ಕಂಡ ಕನಸೆಲ್ಲವೂ ವಿವರಿಸಲಾಗದಷ್ಟು ಸಿಹಿ ಯೋಚನೆ ಗಳಿಂದ ಸೃಷ್ಟಿಯಾಗಿರುತ್ತದೆ.

ಕನಸೆಲ್ಲವೂ ನನಸಾಗದು ಎಂಬ ಸತ್ಯ ನಿಧಾನವಾಗಿ ನಮಗೆ ಅರಿವಾಗುವಾಗ, ಕಂಡ ಕನಸುಗಳ ಬಣ್ಣದ ಲೋಕದಲ್ಲಿ ಕನಸು ಮತ್ತು ವಾಸ್ತವದ ಹೋರಾಟದಲ್ಲಿ, ಸೋಲು ಕಂಡ ನನಸಾಗಿಸಲಾಗದ ಕನಸುಗಳೆಲ್ಲವನ್ನು ನೋಡಿ ವಾಸ್ತವ ನಗುತ್ತಿರುತ್ತದೆ.

(…ಸಾಗುತ್ತಲೇ ಇರುವ ಎಲ್ಲಾ ಕನಸು ಕಂಡ ಮನಸ್ಸುಗಳಿಗೆ ನನ್ನೀ ಬರಹ, “ಕನಸು ಕಾಣುವ ಮನಸ್ಸುಗಳಿಗೆ‌‌..”)

— ದೀಕ್ಷಿತ್ ದಾಸ್

Published by Deekshith Das..

ಒಂದು ಬರಹ ಲೇಖನಿಯಿಂದ ಗೀಚಲ್ಪಡುವ ಮೊದಲು, ಬರಹಗಾರನ ಎದೆಯಾಳದ ಕಲ್ಪನೆಯ ಕಡಲಿನಲ್ಲಿ‌.. ಅದಾಗಲೇ ಅಲೆಗಳಂತೆ ಚಿತ್ರಿಸಲ್ಪಟ್ಟರೂ, ಆ ಬರಹವು ಸ್ಪಷ್ಟವಾಗಿ ಗೋಚರಿಸುವುದು ಎದೆಯಾಳದಿಂದ ಜಿಗಿದು ಹರಿತವಾದ ಲೇಖನಿಯ ಕೆಳಗಿರುವ "ಬಿಳಿಯ ಹಾಳೆಯ ಮೇಲೆ.."

34 thoughts on ““ಕನಸು ಕಾಣುವ ಮನಸ್ಸುಗಳಿಗೆ..”

 1. ಏಳು ಬಣ್ಣಗಳು ಸೇರಿ ಆದ ಕನಸು……. ವಾಸ್ತವದಲ್ಲಿ ಕನಸಾಗೇ ಉಳಿದಿತ್ತು (◕ᴥ◕)

  Like

 2. ನಾ ಶೀರ್ಷಿಕೆಯ ಓದಲು,,, ಪೂರ್ತಿ ಲೇಖನವೆ ಓದಲು ಮನಸಾಯಿತು,,,ಅದ್ಭುತ ಬರಹ ಹೀಗೆ ಸಾಗಲಿ…

  Liked by 2 people

 3. ‘ಕನಸು’- ಪದದ ನಿಜವಾದ ಅರ್ಥ ಚೆನ್ನಾಗಿ ತಿಳಿಸಿರುವೆ , nice Deekshith.

  Liked by 1 person

 4. Nice lines…. ಈ ಬರಹ ಪ್ರತಿಯೊಬ್ಬರ ಜೀವನದ ಪ್ರತಿಬಿಂಬವೇ ಆಗಿದೆ .,(ನನಸಾಗದ ಕನಸು ).
  ನಿಮ್ ಯೋಚೆನೆ…ಆಲೋಚನೆ, ಪದಪುಂಜದ ಜೋಡಣೆ 👌👌 ALL THE BEST BRO..

  Liked by 1 person

  1. Thanks brother, ನಿಮ್ಮ ಅಭಿಪ್ರಾಯಕ್ಕೆ ನನ್ನ ನಮನಗಳು.. ನಿಮ್ಮ‌ ಹಾರೈಕೆ ಬೆಂಬಲಗಳಿಗೆ ನಾನು ಸದಾ ಚಿರ ಋಣಿ..😊😍

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: